
ಚಿಕ್ಕಮಗಳೂರು (ಆ.15) ಯಾರದ್ದೂ ಪೋಸ್ಟ್‌ಗೆ ಕಮೆಂಟ್ ಹಾಕಿ ಜೈಲು ಸೇರಿದ ಕರ್ನಾಟಕ ಮೊದಲ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ಧರ್ಮಸ್ಥಳ ಪ್ರಕರಣದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್, ಬರಹ, ವಿಡಿಯೋಗಳು ಹರಿದಾಡುತ್ತಿದೆ. ಹೀಗೆ ಯಾರದ್ದೋ ಪೋಸ್ಟ್‌ಗೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಯುವಕ ಉಮೇಶ್ ಗೌಡ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಪ್ರಮುಖವಾಗಿ ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ ಉಮೇಶ್ ಗೌಡ ಅರೆಸ್ಟ್ ಆಗಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ಉಮೇಶ್ ಗೌಡ ಕಮೆಂಟ್ ಮಾಡಿದ್ದಾನೆ. ಜೈನ ಸಮುದಾಯದ ಹೆಣ್ಣು ಮಕ್ಕಳನ್ನು ಅವಹೇಳನ ಮಾಡಿದ್ದಾನೆ. ಅತ್ಯಂತ ಕೆಟ್ಟ ಕಮೆಂಟ್ ಮಾಡಿ ವಿಕೃತಿ ಮೆರೆದಿದ್ದಾನೆ. ಆಗಸ್ಟ್ 2 ರಂದು ಉಮೇಶ್ ಗೌಡ ಅಶ್ಲೀಲ ಕಮೆಂಟ್ ಮಾಡಿದ್ದಾನೆ. ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಕಮೆಂಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕೇವಲ ಜೈನ ಸಮುದಾಯದ ಮಾತ್ರವಲ್ಲ, ಹಲವರು ಈ ಕಮೆಂಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಕಮೆಂಟ್ ಕುರಿತು ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಬಿ.ಎನ್.ಎಸ್. ಕಾಯ್ದೆಯ 196 (1) ಹಾಗೂ 353 (2) ಅಡಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಉಮೇಶ್ ಗೌಡನಿಗಾಗಿ ಹುಡುಕಾಡಿದ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಅವಹೇಳನ ಪೋಸ್ಟ್, ಅಥವಾ ಅಕ್ಷೇಪಾರ್ಹ ಪೋಸ್ಟ್, ವಿಡಿಯೋ ಹಾಕಿ ಅರೆಸ್ಟ್ ಆದ ಘಟನೆಗಳಿವೆ. ಆದರೆ ಇಲ್ಲಿ ಅವಹೇಳನ ಕಮೆಂಟ್ ಮಾಡಿ ಅರೆಸ್ಟ್ ಆಗಿದ್ದಾನೆ. ಯಾರದ್ದೋ ಪೋಸ್ಟ್‌ಗೆ ಕಮೆಂಟ್ ಮಾಡಿ ಅರೆಸ್ಚ್ ಆದ ರಾಜ್ಯದ ಮೊದಲ ಪ್ರಕರಣವಾಗಿದೆ. ನಟಿ ರಮ್ಯಾ ವಿರುದ್ದ ಅಶ್ಲೀ ಕಮೆಂಟ್ ಪ್ರಕರಣ ಇತ್ತೀಚೆಗಷ್ಟೇ ಬಾರಿ ಸದ್ದು ಮಾಡಿತ್ತು. ಹೀಗಾಗಿ ಪೊಲೀಸರು ಕಮೆಂಟ್ ಕುರಿತು ಭಾರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಮೆಂಟ್ ಮಾಡಿದ ಉಮೇಶ್ ಗೌಡನನ್ನು ಅಜ್ಜಂಪುರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಉಮೇಶ್ ನ್ಯಾಯಂಗ ಬಂಧನದಲ್ಲಿದ್ದಾರೆ. ಧರ್ಮಸ್ಥಳ ಪ್ರಕರಣ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಬರುವ ವಿಡಿಯೋ, ಫೋಟೋ, ಬರಹಗಳಗಳಿಗೆ ಕಮೆಂಟ್, ವಾಗ್ವಾದ, ಪರ ವಿರೋಧಗಳು ಹೆಚ್ಚಾಗುತ್ತಿದೆ. ಇದರ ನಡುವೆ ಹಲವರು ಉದ್ದೇಶಪೂರ್ವಕವಾಗಿ ಕೆಲ ಸಮದಾಯವನ್ನು ಟಾರ್ಗೆಟ್ ಮಾಡಿ ಕಮೆಂಟ್, ವಿಡಿಯೋಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹಲವರ ಲಿಸ್ಟ್ ರೆಡಿಯಾಗಿದೆ. ಪ್ರಮುಖವಾಗಿ ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಸುದ್ದಿ, ಅಶ್ಲೀಲ ಕಮೆಂಟ್ ಮಾಡುತ್ತಿರುವವರ ಲಿಸ್ಟ್ ರೆಡಿಯಾಗಿದೆ. ಇದೀಗ ಒಬ್ಬರ ಹಿಂದೊಬ್ಬರಿಗೆ ಸಂಕಷ್ಟ ಎದುರಾಗಲಿದೆ ಎಂದು ಮೂಲಗಳು ಹೇಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ