
ಬೆಂಗಳೂರು (ಜ.18): ಸಚಿವ ರಾಜಣ್ಣನವರೇ ನಿಮಗೆ ರಾಮ ಗೊಂಬೆ ತರ ಕಂಡಿದ್ದಾನೆ ಅಲ್ವಾ? ಅದೇ ಬೊಂಬೆ ನಿಮ್ಮ ಕುತ್ತಿಗೆಗೆ ಉರುಳು ಆಗುತ್ತದೆ. ರಾಮನ ಮೂಲ ಜಾಗದಲ್ಲಿ ರಾಮನ ನೋಡೋಕೆ ನಿಮಗೆ ಆಗ್ಲಿಲ್ಲ. ನಿಮಗೆ ಜನರ ಶಾಪ ತಟ್ಟುತ್ತದೆ. ನೀವು ಸಿದ್ದರಾಮಯ್ಯ ಮೆಚ್ಚಿಸೋಕೆ ಏನು ಹೇಳಿದರೂ ಡಿಸಿಎಂ ಆಗೋದಿಲ್ಲ. ನಿಮ್ಮ ಕಾಂಗ್ರೆಸ್ ಮೂರು ಹೋಳಾಗಲಿದೆ. ನೀವು ಹೆಚ್ಚು ದಿನ ಇರೋದಿಲ್ಲ ಎಂದು ಸಂಸದ ಡಿ.ವಿ. ಸದಾನಂದಗೌಡ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನ ಪ್ರಾಣ ಪ್ರತಿಷ್ಠೆ ಆಗಲಿದೆ ಎಂದು ನಿರ್ಣಯ ಮಾಡಿದ ದಿನದಿಂದಲೂ ಕಾಂಗ್ರೆಸ್ ನವರಿಗೆ ತಲೆ ಕೆಟ್ಟಿದೆ. ಯಾರಾದರೂ ಒಬ್ಬರಿಗೆ ತಲೆ ಕೆಡೋದು ಸಾಮಾನ್ಯ. ಆದರೆ, ಸಿದ್ದರಾಮಯ್ಯ ಸೇರಿದಂತೆ ಅವರ ಕ್ಯಾಬಿನೆಟ್‌ನ ಎಲ್ಲರಿಗೂ ತಲೆ ಕೆಟ್ಟು ಹುಚ್ಚು ಹಿಡಿದಿದೆ. ಇನ್ನು ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೋಡಿದೆ. ಇದನ್ನು ಸಹಿಸಿಕೊಳ್ಳೋಕೆ ಆಗಲ್ಲ. ರಾಮ ಇಲ್ಲ ಎಂದು ಕೋರ್ಟ್ ಗೆ ಅಫಿಡಿವೇಟ್ ಹಾಕಿದ್ದ ಅಯೋಗ್ಯರು ಇವರು. ಇದರ ಮುಂದೆ ರಾಜಣ್ಣ ಹೇಳಿಕೆ ದೊಡ್ಡದಾಗಿ ಕಾಣಲ್ಲ. ಜನರು ಇದನ್ನು ಸಹಿಸಲ್ಲ. ಜನರು ಎಲ್ಲಿ ದಂಗೆ ಎದ್ದು ಬಿಡ್ತಾರೋ ಎನ್ನುವ ಆತಂಕ ನನಗೆ ಇದೆ ಎಂದು ಹೇಳಿದರು.
ಅಯೋಧ್ಯೆ ಶ್ರೀರಾಮನನ್ನು ನೋಡಿದರೆ, ಟೂರಿಂಗ್ ಟಾಕೀಸಿನಲ್ಲಿರೋ ಗೊಂಬೆ ಅನಿಸ್ತಿದೆ: ಸಚಿವ ಕೆ.ಎನ್. ರಾಜಣ್ಣ
ರಾಜಣ್ಣ ಇನ್ನೂ ಕಾಲ ಮಿಂಚಿಲ್ಲ. ನಿಮಗೆ ರಾಮ ಗೊಂಬೆ ತರ ಕಂಡಿದ್ದಾನೆ ಅಲ್ವಾ? ಅದೇ ಬೊಂಬೆ ನಿಮ್ಮ ಕುತ್ತಿಗೆಗೆ ಉರುಳು ಆಗುತ್ತದೆ. ರಾಮನ ಮೂಲ ಜಾಗದಲ್ಲಿ ರಾಮನ ನೋಡೋಕೆ ನಿಮಗೆ ಆಗ್ಲಿಲ್ಲ. ನಿಮಗೆ ಜನರ ಶಾಪ ತಟ್ಟುತ್ತದೆ. ನೀವು ಸಿದ್ದರಾಮಯ್ಯ ಮೆಚ್ಚಿಸೋಕೆ ಹೇಳಿದ್ದೀರಿ. ಆದರೆ, ನಿವ್ಯಾರು ಉಪಮುಖ್ಯಮಂತ್ರಿ ಆಗಲ್ಲ. ನಿಮ್ಮ ಕಾಂಗ್ರೆಸ್ ಮೂರು ಹೋಳಾಗಲಿದೆ. ನೀವು ಹೆಚ್ಚು ದಿನ ಇರೋದಿಲ್ಲ. ನಿಮ್ಮ ಹೇಳಿಕೆ ಸಾರ್ವಜನಿಕ ಕಿಚ್ಚಾಗಿ ಪರಿವರ್ತನೆ ಆಗಲಿದೆ. ನಾನು ನಿಮ್ಮ ರಾಜೀನಾಮೆ ಕೇಳಲ್ಲ. ಯಾಕಂದರೆ ನಿಮ್ಮ ಸಂಪುಟದಲ್ಲಿ ಇರೋರು ಎಲ್ಲಾರೂ ಹೀಗೆ ಮಾತಾಡೋರು ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಈಗಾಗಲೇ ಸಚಿವ ಕೆ.ಎನ್. ರಾಜಣ್ಣ ಕಣ್ಣು ಕಾಮಲೆ ಆಗಿದೆ. ಸಹಕಾರ ಮಂತ್ರಿಯ ಕಣ್ಣಿಗೆ ಕಾಮಾಲೆ ಬರಬಾರದಿತ್ತು. ಇನ್ನು ಹೀಗೆ ಮಾತಾಡಿದ್ರೆ ಜನ ಬಿಡಲ್ಲ. ಸಿದ್ದರಾಮಯ್ಯ ನೀವು ಕ್ಷಮೆ ಕೇಳಿ. ರಾಜಣ್ಣ ಹೇಳಿದ ಮಾತು ಸರಿಯಲ್ಲ ಎಂದು ಕ್ಷಮೆ ಕೇಳಿ. ಸಿದ್ದರಾಮಯ್ಯನವರೆ ಜನಪರ ಕೆಲಸ ಮಾಡುವ ಕಾರ್ಯ ಮಾಡಬೇಕಿತ್ತು. ಡಿ.ಕೆ.ಶಿವಕುಮಾರ್ ಮೇಲೆ ಯಾರೆಲ್ಲಾ ಬಾಣ ಬಿಡುತ್ತಾರೊ ಅವರ ಪರ ಸಿದ್ದರಾಮಯ್ಯ ಇದ್ದಾರೆ ಎಂದು ಕೈ ನಾಯಕರ ಒಳಜಗಳವನ್ನು ಬಿಚ್ಚಿಟ್ಟರು.
ಕೆಆರ್‌ಎಸ್ ಕಟ್ಟೋಕೆ ಆರಂಭಿಸಿದ್ದು ಟಿಪ್ಪು, ಅದನ್ನು ಮುಂದುವರೆಸಿದ್ದು ಮೈಸೂರು ಮಹಾರಾಜರು: ಸಚಿವ ರಾಜಣ್ಣ
ಕೋಲಾರದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಕುರಿತಾಗಿ ಅಳವಡಿಸಲಾಗಿದ್ದ ಬ್ಯಾನರ್ ಹರಿದು ಹಾಕಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಂತಹ ಎಷ್ಟು ಜನರನ್ನು ನೀವು ಬಂಧನ ಮಾಡಿದ್ದೀರಿ. ಸಿಎಂ ಸಿದ್ದರಾಮಯ್ಯ ಅವರೇ ರಾಜ್ಯಾದ್ಯಂತ ನಿಮ್ಮ ಬ್ಯಾನರ್ ಹರಿಯುವ ದಿನ ಬರುತ್ತದೆ. ಇಷ್ಟು ದಿನ ಕಾಂತರಾಜು ವರದಿ ಎಂಬ ಬಿಸಿ ನೀರು ಮೈ ಮೇಲೆ ಬಿದ್ದು ಮೈಮೇಲೆ ಗುಳ್ಳೆ ಏಳೊದಕ್ಕೆ ಶುರುವಾಗಿದೆ. ಹೀಗಾಗಿ ಈಗ ಸದಾಶಿವ ಆಯೋಗ ಎನ್ನುತ್ತಿದ್ದಾರೆ. ಇಷ್ಟು ದಿನ ಇವರು ಏನು ಮಾಡ್ತಾ ಇದ್ರು? ಸದಾಶಿವ ಆಯೋಗದ ವರದಿ ಜಾರಿ ಆಗಬೇಕು ಅನ್ನೋದು ನಮ್ಮ ಆಶಯ. ಅದಕ್ಕೆ ಮುನ್ನ ಸಂವಿಧಾನ ತಿದ್ದುಪಡಿ ಆಗಬೇಕು. ಅದಕ್ಕಾಗಿ ಶಿಫಾರಸು ಮಾಡಲು ನಿರ್ಣಯ ಮಾಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ