ಹೊಸ ವಿದ್ಯುತ್‌ ಸಂಪರ್ಕಕ್ಕೂ ಗೃಹಜ್ಯೋತಿ ಅನ್ವಯಿಸುತ್ತಾ?

By Kannadaprabha NewsFirst Published Jun 8, 2023, 4:00 AM IST
Highlights

ಹೊಸ ಸಂಪರ್ಕ ಹಾಗೂ ಹೊಸದಾಗಿ ಬಾಡಿಗೆ ಮನೆಗೆ ಬಂದವರಿಗೆ ಯೋಜನೆ ಸೌಲಭ್ಯ ನೀಡಬೇಕೆ ಅಥವಾ ಇಲ್ಲವೇ ಎಂಬ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಎರಡು ದಿನಗಳಲ್ಲಿ ನಿರ್ಧಾರ ಮಾಡಿ ಪ್ರಕಟಿಸಲಾಗುವುದು:  ಜಾರ್ಜ್‌ 

ಬೆಂಗಳೂರು(ಜೂ.08): ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆದವರು ಹಾಗೂ ಹೊಸದಾಗಿ ಬಾಡಿಗೆ ಮನೆಗೆ ಸ್ಥಳಾಂತರ ಆದವರಿಗೆ ‘ಗೃಹ ಜ್ಯೋತಿ’ ಲಾಭ ದೊರೆಯಲಿದೆಯೇ ಎಂಬ ಬಗ್ಗೆ ಗೊಂದಲಗಳಿವೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಗೃಹ ಬಳಕೆ ಸಂಪರ್ಕ ಪಡೆದವರು 12 ತಿಂಗಳವರೆಗೆ ಗೃಹ ಜ್ಯೋತಿ ಸೌಲಭ್ಯ ಪಡೆಯಲು ಕಾಯಬೇಕು. ಇಲ್ಲದಿದ್ದರೆ ಅವರ 12 ತಿಂಗಳ ಸರಾಸರಿ ಬಳಕೆಯ ಅಂದಾಜು ಸರ್ಕಾರಕ್ಕೆ ಸಿಗುವುದಿಲ್ಲ ಎಂದು ಸಚಿವ ಸಂಪುಟದಲ್ಲಿ ಚರ್ಚಿಸಲಾಗಿತ್ತು.

ಫ್ರೀ ವಿದ್ಯುತ್‌ ತಲೆ​ಬಿಸಿ ಮಧ್ಯೆ ದರ ಏರಿಸಿ ಮೆಸ್ಕಾಂ ಶಾಕ್‌!

ಆದರೆ, ಹೊಸದಾಗಿ ಸಂಪರ್ಕ ಪಡೆದವರ ಜತೆಗೆ ಹೊಸದಾಗಿ ಬಾಡಿಗೆ ಮನೆಗೆ ಸ್ಥಳಾಂತರವಾದವರು ಇದ್ದಾರೆ. 12 ತಿಂಗಳ ಈಚೆಗಷ್ಟೇ ಒಂದು ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಸ್ಥಳಾಂತರ ಆಗಿರುವವರ ಸರಾಸರಿ ಬಳಕೆಯೂ ಸರ್ಕಾರಕ್ಕೆ ಅಂದಾಜು ಸಿಗುವುದಿಲ್ಲ. ಹೀಗಾಗಿ ಹೊಸ ಸಂಪರ್ಕ ಹಾಗೂ ಹೊಸದಾಗಿ ಬಾಡಿಗೆ ಮನೆಗೆ ಬಂದವರಿಗೆ ಯೋಜನೆ ಸೌಲಭ್ಯ ನೀಡಬೇಕೆ ಅಥವಾ ಇಲ್ಲವೇ ಎಂಬ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಎರಡು ದಿನಗಳಲ್ಲಿ ನಿರ್ಧಾರ ಮಾಡಿ ಪ್ರಕಟಿಸಲಾಗುವುದು ಎಂದು ಜಾರ್ಜ್‌ ಮಾಹಿತಿ ನೀಡಿದರು.

click me!