'ದೇಶದಲ್ಲೇ ಬೆಂಗ್ಳೂರಿನ ಜನರಿಗೆ ಅತಿ ಹೆಚ್ಚು ಲಸಿಕೆ'

By Kannadaprabha NewsFirst Published Jun 4, 2021, 8:46 AM IST
Highlights

* ಹೆಚ್ಚು ಲಸಿಕೆ ನೀಡಿದ ನಂ.1 ದೊಡ್ಡ ನಗರ: ಸಚಿವ ಸುಧಾಕರ್‌
* 99 ಲಕ್ಷ ಜನರಲ್ಲಿ 28.3 ಲಕ್ಷ ಜನಕ್ಕೆ ಮೊದಲ ಡೋಸ್‌
* ಜೂನ್‌ನಲ್ಲಿ 58 ಲಕ್ಷ ಕೋವಿಡ್‌ ಲಸಿಕೆ
 

ಬೆಂಗಳೂರು(ಜೂ.04): ಅತಿ ಹೆಚ್ಚು ಲಸಿಕೆ ಪಡೆದ ದೊಡ್ಡ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 28.3 ಲಕ್ಷ ಬೆಂಗಳೂರಿಗರು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಬೆಂಗಳೂರಿನ 99 ಲಕ್ಷ ಜನಸಂಖ್ಯೆಯಲ್ಲಿ 28.34 ಲಕ್ಷ ಜನ ಮೊದಲ ಡೋಸ್‌ ಲಸಿಕೆ ಸ್ವೀಕರಿಸಿದ್ದು ಶೇ.28.6ರ ಸಾಧನೆಯಾಗಿದೆ. ಈ ಸಾಧನೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಬಿಬಿಎಂಪಿಯನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ.

Latest Videos

ಲಸಿಕೆ ಪಡೆದ ಜನಸಂಖ್ಯೆಯಲ್ಲಿ ಬೆಂಗಳೂರೇ ಮೊದಲ ಸ್ಥಾನದಲ್ಲಿದೆ. ಮುಂಬೈ 27.09 ಲಕ್ಷ (ಶೇ.20.5), ಪುಣೆ 23 ಲಕ್ಷ (ಶೇ. 24.1), ಚೆನ್ನೈ 15.27 ಲಕ್ಷ (ಶೇ.33.1), ಕೋಲ್ಕತ್ತಾ 14.50 ಲಕ್ಷ (ಶೇ. 32.2), ಗುರ್ಗಾಂವ್‌ 6.82 ಲಕ್ಷ (ಶೇ.39.2), ದೆಹಲಿ 42 ಲಕ್ಷ (ಶೇ.22.8) ರಷ್ಟುಲಸಿಕೆ ಜನಸಂಖ್ಯೆಗೆ ಲಸಿಕೆ ನೀಡಿದೆ.

ಲಸಿಕೆ ಹಾಕಿದ ಬಳಿಕವೂ ಕೊರೋನಾ ಪರೀಕ್ಷೆ ಮಾಡಿಸಬೇಕೆ?

3 ಕೋಟಿ ಕೋವಿಡ್‌ ಟೆಸ್ಟ್‌: ರಾಜ್ಯದಲ್ಲಿ ಈವರೆಗಿನ ಕೋವಿಡ್‌ ಪರೀಕ್ಷೆಗಳ ಸಂಖ್ಯೆ 3 ಕೋಟಿ ದಾಟಿರುವುದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್‌ ಪ್ರಯೋಗಾಲಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಐಸಿಎಂಆರ್‌ನಿಂದ ಅನುಮೋದನೆ ಪಡೆದಿರುವ 196 ಪ್ರಯೋಗಾಲಯಗಳಿವೆ. ರಾಜ್ಯದ ಕೋವಿಡ್‌ ಪರೀಕ್ಷೆಗಳಲ್ಲಿ ಶೇ. 82 ಆರ್‌ಟಿಪಿಸಿಆರ್‌ ಪರೀಕ್ಷೆಗಳು. ಈ ಮೈಲಿಗಲ್ಲು ಸ್ಥಾಪಿಸಿದ್ದಕ್ಕಾಗಿ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.

ಜೂನ್‌ನಲ್ಲಿ 58 ಲಕ್ಷ ಕೋವಿಡ್‌ ಲಸಿಕೆ: 

ರಾಜ್ಯದ ಕೋವಿಡ್‌ ಹೋರಾಟಕ್ಕೆ ಕೇಂದ್ರ ಸರ್ಕಾರ ಸತತ ನೆರವು ನೀಡುತ್ತಿದ್ದು, ಜೂನ್‌ ತಿಂಗಳಿನಲ್ಲಿ 58.71 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ರಾಜ್ಯಕ್ಕೆ ಸಿಗಲಿದೆ. ಈ ಪೈಕಿ 45 ಲಕ್ಷ ಡೋಸ್‌ ಭಾರತ ಸರ್ಕಾರ ನೀಡಲಿದ್ದು, ಉಳಿದ 13.7 ಲಕ್ಷ ಡೋಸ್‌ ಅನ್ನು ರಾಜ್ಯ ಸರ್ಕಾರ ನೇರವಾಗಿ ಖರೀದಿಸಲಿದೆ ಎಂದು ಸುಧಾಕರ್‌ ಹೇಳಿದ್ದಾರೆ. 

ಜೂನ್‌ ತಿಂಗಳಿನಲ್ಲಿ ಭಾರತ ಸರ್ಕಾರ ರಾಜ್ಯಕ್ಕೆ 37.60 ಲಕ್ಷ ಡೋಸ್‌ ಕೋವಿಶೀಲ್ಡ್‌, 7.40 ಲಕ್ಷ ಡೋಸ್‌ ಕೋವ್ಯಾಕ್ಸಿನ್‌ ನೀಡಲಿದೆ. ರಾಜ್ಯ ಸರ್ಕಾರವು 10.86 ಲಕ್ಷ ಕೋವಿಶೀಲ್ಡ್‌ ಮತ್ತು 2.84 ಲಕ್ಷ ಡೋಸ್‌ ಕೋವ್ಯಾಕ್ಸಿನ್‌ ಅನ್ನು ಕಂಪೆನಿಯಿಂದ ನೇರವಾಗಿ ಖರೀದಿಸಲಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ.
 

click me!