ರಕ್ತ ಪರೀಕ್ಷೆಗೆ ಬಂದ ರೋಗಿಗಳ ಎದುರಲ್ಲೇ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಪರಸ್ಪರ ಕಿತ್ತಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ರಾಯಚೂರು (ಸೆ.7): ರಕ್ತ ಪರೀಕ್ಷೆಗೆ ಬಂದ ರೋಗಿಗಳ ಎದುರಲ್ಲೇ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಪರಸ್ಪರ ಕಿತ್ತಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ರಕ್ತ ಪರೀಕ್ಷೆ ಕೇಂದ್ರದಲ್ಲಿ ಸಿಬ್ಬಂದಿ ಕಿತ್ತಾಟದ ದೃಶ್ಯವನ್ನು ರೋಗಿಗಳೇ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮೊಬೈಲ್ ವಿಡಿಯೋ ಮಾಡುತ್ತಿರುವುದು ಕಂಡು ಕಿತ್ತಾಟ ಮುಂದುವರಿಸಿದ ಸಿಬ್ಬಂದಿ. ದಿನನಿತ್ಯ ಕಿತ್ತಾಟ ಮಾಡಿಕೊಳ್ಳುತ್ತಿರುವ ಸಿಬ್ಬಂದಿಯಿಂದ ಬೇಸತ್ತ ರೋಗಿಗಳು. ರಕ್ತ ಪರೀಕ್ಷೆಗೆ ಬಂದ ರೋಗಿಗಳ ಬಗ್ಗೆ ನಿರ್ಲಕ್ಷ್ಯ. ರಕ್ತ ಪರೀಕ್ಷೆ ಮಾಡೋಕೂ ಜಗಳ. ರೋಗಿಗಳ ರಕ್ತ ಪರೀಕ್ಷೆ ಮಾಡೋದಕ್ಕೆ ನೀನು-ನಾನು ಅಂತಾ ಕಿತ್ತಾಟ. ಸಿಬ್ಬಂದಿ ಕಿತ್ತಾಟಕ್ಕೆ ರೋಸಿಹೋಗಿರುವ ರೋಗಿಗಳು. ಸರ್ಕಾರಿ ಸಂಬಳ ಬೇಕು, ಸೇವೆ ಮಾಡೋಕೆ ಕಿತ್ತಾಟ. ಸಮಯಕ್ಕೆ ಸರಿಯಾಗಿ ರಕ್ತ ಪರೀಕ್ಷೆಯ ವರದಿ ಸಿಗದೆ ರೋಗಿಗಳು ಪರದಾಡುವಂತಾಗಿದೆ.
undefined
ರಾಯಚೂರು ಭೀಕರ ಅಪಘಾತ ಪ್ರಕರಣ; ರಿಮ್ಸ್ ಆಸ್ಪತ್ರೆಗೆ ಸಚಿವ ಶರಣಪ್ರಕಾಶ್ ಪಾಟೀಲ್ ಭೇಟಿ
ಸಿಬ್ಬಂದಿ ಕಿತ್ತಾಟದ ವಿಡಿಯೋ ಸಮೇತ ದೂರು ನೀಡಿದ್ರೂ ಕೇರ್ ಮಾಡದ ಆಸ್ಪತ್ರೆಯ AMO ರುದ್ರಗೌಡ. ಸಿಬ್ಬಂದಿ ಕಿತ್ತಾಟ ಎಲ್ಲ ನನ್ನ ಬಳಿ ತರಬೇಡಿ ಅಂತಾರೆ. THO ಅಮರೇಶ್ ಸಾಹೇಬ್ರಿಗೆ ದೂರು ನೀಡಿದ್ರೆ ಅವರೂ ನನಗೆ ಅದೆಲ್ಲ ಗೊತ್ತಿಲ್ಲ ಅಂತಾರೆ. ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ ಅಂತಿರೋ ರೋಗಿಗಳು. ರಕ್ತ ಪರೀಕ್ಷೆ ಮಾಡಿಸಲು ಖಾಸಗಿ ಆಸ್ಪತ್ರೆಗೆ ಹೋದ್ರೆ ದುಬಾರಿ ಹಣ ತೆತ್ತು ಪರೀಕ್ಷೆ ಮಾಡಿಸಬೇಕು. ತಾಲೂಕು ಆಸ್ಪತ್ರೆಗೆ ಬರುವ ಬಹಳಷ್ಟು ರೋಗಿಗಳು ಬಡವರು. ಬಡ ರೋಗಿಗಳ ಜೀವದ ಜೊತೆ ಸಿಬ್ಬಂದಿ ಚೆಲ್ಲಾಟ. ರೋಗಿಗಳ ರಕ್ತ ಪರೀಕ್ಷೆ ಮಾಡೋದಕ್ಕೂ ಕಿತ್ತಾಡುವ ಇಂತಹ ಸಿಬ್ಬಂದಿ ಆಸ್ಪತ್ರೆಗೆ ಯಾಕೆ ಬೇಕು? ಸರ್ಕಾರ ಇವರಿಗೆ ಕಿತ್ತಾಟ ಮಾಡಲು ಸಂಬಳ ಕೊಡುತ್ತದೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿರುವ ರೋಗಿಗಳು. ಸದ್ಯ ವಿಡಿಯೋ ಜಿಲ್ಲೆಯಾದ್ಯಂತ ವೈರಲ್ ಆಗಿದ್ದು, ಸಾರ್ವಜನಿಕರು ಆಸ್ಪತ್ರೆ ಅವ್ಯವಸ್ಥೆಗೆ ಕಿಡಿಕಾರಿದ್ದಾರೆ.