ದಸರಾ ಉದ್ಘಾಟಕರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ: ಸಚಿವ ಹೆಚ್‌ಸಿ ಮಹದೇವಪ್ಪ

By Ravi JanekalFirst Published Sep 4, 2024, 5:12 PM IST
Highlights

ವಿಶ್ವವಿಖ್ಯಾತ ನಾಡಹಬ್ಬ ದಸರಾ ಆಚರಣೆ ಹಿನ್ನೆಲೆ ಈಗಾಗಲೇ ದಸರಾ ಕುರಿತು ಸಭೆಗಳನ್ನು ನಡೆಸಿದ್ದೇವೆ. ಇಂದು ಉಪ ಸಮಿತಿ ಸಭೆಗಳನ್ನು ಮಾಡಿದ್ದೇವೆ ಎಂದು ಸಚಿವ ಡಾ. ಎಚ್‌ಸಿ ಮಹದೇವಪ್ಪ ತಿಳಿಸಿದರು.

ಮೈಸೂರು (ಸೆ.4): ವಿಶ್ವವಿಖ್ಯಾತ ನಾಡಹಬ್ಬ ದಸರಾ ಆಚರಣೆ ಹಿನ್ನೆಲೆ ಈಗಾಗಲೇ ದಸರಾ ಕುರಿತು ಸಭೆಗಳನ್ನು ನಡೆಸಿದ್ದೇವೆ. ಇಂದು ಉಪ ಸಮಿತಿ ಸಭೆಗಳನ್ನು ಮಾಡಿದ್ದೇವೆ ಎಂದು ಸಚಿವ ಡಾ. ಎಚ್‌ಸಿ ಮಹದೇವಪ್ಪ ತಿಳಿಸಿದರು.

ಇಂದು ದಸರಾ ಹಬ್ಬ ಹಿನ್ನೆಲೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, 19 ಉಪ ಸಮಿತಿಗಳ ತಂಡದೊಂದಿಗೆ ಸಭೆ ಮಾಡಿದ್ದೇನೆ. ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ರೂಪುರೇಷೆಗಳ ಸಿದ್ಧತೆ ನಡೆಯುತ್ತಿದೆ. ಅರಮನೆ ಮೈದಾನದಲ್ಲಿ 4 ಗಂಟೆಯಿಂದಲೇ ಸಂಗೀತ ಕಾರ್ಯಕ್ರಮ ನಡೆಯಬೇಕು ಎಂದು ಹೇಳಿದ್ದೇನೆ.  ಕಾರ್ಯಕ್ರಮವನ್ನು ಯಾರು ಉದ್ಘಾಟನೆ ಮಾಡಬೇಕು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡುತ್ತಾರೆ ಎಂದರು.

Latest Videos

ಚಾಮುಂಡಿ ಬೆಟ್ಟದ ಪ್ರಾಧಿಕಾರದ ಸಭೆ ಅಕ್ರಮ, ನಾನು ಹೋಗಲ್ಲ: ಸಂಸದ ಯದುವೀರ್

ಸಿಎಂ ಕುರ್ಚಿ ಮೇಲೆ ಕಾಂಗ್ರೆಸ್ ನಾಯಕರು ಕಣ್ಣು ಹಾಕಿರುವ ವಿಚಾರ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿ ಇದ್ದರೆ ಈ ಬಗ್ಗೆ ಹೇಳಬೇಕು. ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಾಗುವುದಿಲ್ಲ. ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ. ಅವಧಿ ಮುಗಿಯುವವರೆಗೆ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದರು.

ಮುಡಾ ಸುಳಿಯಲ್ಲಿ ಸಿಲುಕಿ ಚಾಮುಂಡಿ ತಾಯಿಗೆ ಶರಣಾದ ಸಿದ್ದರಾಮಯ್ಯ, ಅರ್ಚಕರಿಂದ ಕುಂಕುಮ ಹಚ್ಚಿಸಿಕೊಂಡ ಸಿಎಂ!

ಕಾವಾಡಿಗರ ಮಕ್ಕಳ ಜೊತೆ ವಾಲಿಬಾಲ್ ಆಡಿದ ಸಚಿವ:

ದಸರಾ ಸಿದ್ಧತಾ ಪರಿಶೀಲನೆ ಸಭೆಗೆ ಮೈಸೂರಿಗೆ ಆಗಮಿಸಿದ್ದ ವೇಳೆ ಹೆಚ್‌ಸಿ ಮಹದೇವಪ್ಪ ಅವರು ದಸರಾ ಆನೆಗಳನ್ನು ವೀಕ್ಷಿಸಿದರು ಈ ವೇಳೆ ಮಾವುತರು, ಕಾವಾಡಿಗಳ ಮಕ್ಕಳ ಜೊತೆ ಕೆಲಕಾಲ ವಾಲಿಬಾಲ್ ಆಡಿದರು. ಆರಮನೆ ಆವರಣದಲ್ಲಿನ ಆನೆಗಳನ್ನು ವೀಕ್ಷಿಸಿ ಮಾವುತರು ಕಾವಾಡಿಗಳ ಜೊತೆ ಕಾಲ ಕಳೆದರು. 

click me!