
ಚಿತ್ರದುರ್ಗ (ಸೆ.04): ಇಸ್ಲಾಂ ಧರ್ಮದ ಸಂಸ್ಥಾಪಕರಾದ ಮಹಮ್ಮದ್ ಪೈಗಂಪರ್ ಅವರು ನಾವೆಲ್ಲರೂ ಒಂದಾಗಿ ಬಾಳುವುದನ್ನು ಹೇಳಿದ್ದಾರೆ. ದೇವರು ಒಬ್ಬ, ಮೂರ್ತಿ ಪೂಜೆ ಬೇಡ ಎಂಬ ಮಾತನ್ನು ಹೇಳಿದ್ದಾರೆ. ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿ ಬಹುತೇಕ ಅಂಶಗಳಿವೆ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾದ್ಯ ಸ್ವಾಮೀಜಿ ಹೇಳಿದ್ದಾರೆ.
ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜನೆ ಮಾಡಲಾಗಿದ್ದ ಕುರ್‌ಆನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಬಹುತೇಕ ಧರ್ಮಗಳಲ್ಲಿ ಅಹಿಂಸೆ ಮತ್ತು ಹೊಂದಾಣಿಕೆಯ ಜೀವನ ಮಾಡುವ ಅಂಶಗಳನ್ನು ಸಾರಿದ್ದಾರೆ. ಇಸ್ಲಾಂ ಧರ್ಮದ ಸಂಸ್ಥಾಪಕರಾದ ಮಹಮ್ಮದ್ ಪೈಗಂಪರ್ ಕೂಡ ನಾವೆಲ್ಲರೂ ಒಂದಾಗಿ ಬಾಳುವ ಅಂಶಗಳನ್ನೇ ಹೇಳಿದ್ದಾರೆ. ಸ್ಥಾವರಗಳಿಗೆ ಪೂಜಿಸಬೇಡಿ, ಮೂರ್ತಿ ಪೂಜೆ ಬೇಡ ಎಂಬ ಮಾತನ್ನು ಹೇಳಿದ್ದಾರೆ. ಹೀಗಾಗಿ, ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿ ಬಹುತೇಕ ಅಂಶಗಳಿವೆ ಎಂದು ತಿಳಿಸಿದರು.
ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕರೆ!
ಲಿಂಗಾಯತ ಧರ್ಮದಲ್ಲಿರುವ ಅಂಶಗಳು ಇಲ್ಲಿವೆ ನೋಡಿ:
ಲಿಂಗಾಯತ ಧರ್ಮದಲ್ಲಿ ಬಹುದೇವತಾರಾಧನೆಯನ್ನು ನಿರಾಕರಣೆ ಮಾಡಿದೆ.
ಲಿಂಗಾಯತ ಧರ್ಮದಲ್ಲಿ ಮೂರ್ತಿ ಪೂಜೆಯನ್ನು ಅಲ್ಲಗಳೆದಿದೆ.
ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗವನ್ನು ನಿಷ್ಠೆಯಿಂದ ಪೂಜೆ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ ಎಂದರು.
ಮಹಮ್ಮದ್ ಪೈಗಂಬರ್ ಹೇಳಿದ ಅಂಶಗಳು:
ಸ್ಥಾವರಗಳಿಗೆ ಪೂಜೆ ಮಾಡಬೇಡಿ.
ಭೂಮಿಯ ಮೇಲೆ ಹಲವು ದೇವರುಗಳಿಲ್ಲ.
ದೇವನೊಬ್ಬ ನಾಮ ಹಲವು ಇವೆ.
ನಾವು ಅಲ್ಲಾನನ್ನು ಮಾತ್ರ ಪೂಜಿಸಬೇಕು, ಧ್ಯಾನ ಮಾಡಬೇಕು ಎಂದು ಹೇಳಿದ್ದಾರೆ.
ಸೀತಾರಾಮ: ರಾಮನ ಮಾಜಿ ಗೆಳತಿ ಸಿಹಿ ಚಿಕ್ಕಮ್ಮ; ಹಾಗಾದ್ರೆ ಸೀತಮ್ಮಗೂ ಚಾಂದಿನಿಗೆ ಏನು ಸಂಬಂಧ!
ಅಂದರೆ ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಹೇಳುವುದು ಒಂದೇ ಇದ್ದರೂ ಕೂಡ, ಯಾಕೆ ಮನುಷ್ಯ ಮನುಷ್ಯರ ನಡುವೆ ಗೋಡೆಗಳನ್ನು ಸೃಷ್ಟಿ ಮಾಡುತ್ತಾರೆ. ಬೇರುಗಳನ್ನು ನೆಡುತ್ತಿದ್ದಾರೆ. ವಿಚಾರವಂತರು, ವಿವೇಕವಂತರು ಜಾತಿ, ಧರ್ಮದ ಬೇರುಗಳನ್ನು ಕಿತ್ತುಹಾಕಿ, ಗೋಡೆಗಳನ್ನು ಕೆಡವಿ ಒಬ್ಬರು ಮತ್ತೊಬ್ಬರನ್ನು ಗೌರವಿಸುವಂತಹ ಪ್ರೀತಿಸುವಂತಹ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ