ಎರಡು ಹೋರಿಗಳಂತೆ ಆನೆಗಳು ಸಹಜವಾಗಿ ಜಗಳ ಮಾಡಿಕೊಂಡಿವೆ: ಎಚ್‌ಸಿ ಮಹದೇವಪ್ಪ

By Ravi Janekal  |  First Published Sep 21, 2024, 12:41 PM IST

ನಿನ್ನೆ ಅರಮನೆ ಮೈದಾನದಲ್ಲಿ ದಸರಾ ಆನೆಗಳ ಕಾದಾಟ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಹಳ್ಳಿಗಳಲ್ಲಿ ಎರಡು ಹೋರಿಗಳು ಅಕ್ಕಪಕ್ಕ ಇದ್ದಾಗ ಪರಸ್ಪರ ಹೇಗೆ ಜಗಳ ಮಾಡಿಕೊಳ್ಳುತ್ತವೋ ಹಾಗೇ ಆನೆಗಳು ಜಗಳ ಮಾಡಿಕೊಂಡಿವೆ ಆದರೆ ಆನೆಗಳ ಜಗಳದ ತೀವ್ರತೆ ಬೇರೆ ಇರುತ್ತೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಸಚಿವ ಹೆಚ್‌ಸಿ ಮಹದೇವಪ್ಪ ತಿಳಿಸಿದರು.


ಮೈಸೂರು (ಸೆ.21) ನಿನ್ನೆ ಅರಮನೆ ಮೈದಾನದಲ್ಲಿ ದಸರಾ ಆನೆಗಳ ಕಾದಾಟ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಹಳ್ಳಿಗಳಲ್ಲಿ ಎರಡು ಹೋರಿಗಳು ಅಕ್ಕಪಕ್ಕ ಇದ್ದಾಗ ಪರಸ್ಪರ ಹೇಗೆ ಜಗಳ ಮಾಡಿಕೊಳ್ಳುತ್ತವೋ ಹಾಗೇ ಆನೆಗಳು ಜಗಳ ಮಾಡಿಕೊಂಡಿವೆ. ಹೋರಿಗಳ ತೀವ್ರತೆ ಬೇರೆ, ಆನೆಗಳ ತೀವ್ರತೆ ಬೇರೆ ಘಟನೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಲ್ಲ ವಿವರ ಪಡೆದಿದ್ದೇನೆ ಎಂದು ಸಚಿವ ಡಾ.ಹೆಚ್‌ಸಿ ಮಹದೇವಪ್ಪ ತಿಳಿಸಿದರು. 

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಇಲ್ಲಿ ಯಾರದ್ದು ತಪ್ಪು, ಯಾರದ್ದು ನಿರ್ಲಕ್ಷ್ಯ ಎಂದು ಈಗ ಹೇಳಲು ಬರುವುದಿಲ್ಲ. ಆನೆಗಳು ಸಡನ್ ಆಗಿ ಈ ವರ್ತಿಸಿರುವ ಕಾರಣ ಯಾರ ಅಂದಾಜಿಗೂ ಇದು ಸಿಕ್ಕಿಲ್ಲ. ಸದ್ಯ ಯಾವದೇ ಹಾನಿ ಉಂಟಾಗಿಲ್ಲ. ಮುಂದೆ ಇನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತೇವೆ ಎಂದರು.

Tap to resize

Latest Videos

undefined

ಮುಡಾ ಹಗರಣ: ನಮ್ಮ ತಂದೆ ತಪ್ಪು ಮಾಡಿಲ್ಲ, ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ: ಡಾ ಯತೀಂದ್ರ ಸಿದ್ದರಾಮಯ್ಯ

ಈ ಬಾರಿ ದಸರಾ ಹಬ್ಬಕ್ಕೆ ಅರಮನೆಯಲ್ಲಿ 15 ಸಾವಿರ ಆಸನದ ವ್ಯವಸ್ಥೆ ಹೆಚ್ಚು ಮಾಡಲಾಗುತ್ತಿದೆ. ಅದಕ್ಕಾಗಿ ಅರಮನೆಯೊಳಗೆ ಬರುವ ಹಾದಿಯ ಬದಲಾವಣೆ ಮಾಡಲಾಗಿದೆ. ಆದಷ್ಟು ವ್ಯವಸ್ಥಿತವಾಗಿ ದಸರಾ ವೀಕ್ಷಣೆಗ ಅವಕಾಶ ಕಲ್ಪಿಸಲು ಪ್ರಯತ್ನ ಪಡುತ್ತಿದ್ದೇವೆ. ಅಲ್ಪ ಸ್ವಲ್ಪ ತಪ್ಪುಗಳು ಆಗುವುದು ಸಹಜ. ಆದಷ್ಟು ವ್ಯವಸ್ಥೆಗಳನ್ನ ಸರಿಪಡಿಸುತ್ತೇವೆ ಎಂದರು.

ಸಿಎಂ ಸಿದ್ದರಾಮಯ್ಯ ಎಂದೂ ಹಣಕ್ಕಾಗಿ ಟೆಂಪ್ಟ್ ಆದವರಲ್ಲ. ನಾವು 40 ವರ್ಷಗಳಿಂದ ಜೊತೆಯಲ್ಲಿದ್ದೇವೆ. ಹಣಕ್ಕಾಗಿ ಅವರು ಯಾವತ್ತೂ ಹಾತೋರೆದಿಲ್ಲ. ಅಂತವರ ವಿರುದ್ಧ ಸುಮ್ಮನೆ ಇಲ್ಲಸಲ್ಲದ ಆರೋಪ ಕೆಲವರು ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೋರಾಟದಿಂದ ಸಿದ್ಧಾಂತದಿಂದ ಬಂದವರು ಇಂತವರಿಗೆ ಈ ರೀತಿ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಮುಂದೆ ರಾಜಕಾರಣಕ್ಕೆ ಯಾರು ಬರುತ್ತಾರೆ ಹೇಳಿ? ರಿಯಲ್ ಎಸ್ಟೇಟ್ ಕಮಿಷನ್ ಎಜೆಂಟ್ಗಳು, ಭೂಗಳ್ಳರು ಇಂತವರೇ ರಾಜಕಾರಣ ಮಾಡಲು ಶುರು ಮಾಡಿ ಬಿಡುತ್ತಾರೆ. ಸಿದ್ದರಾಮಯ್ಯರಂತ ಸಿದ್ಧಾಂತ ಇರುವವರು ತತ್ವ ಇರುವವರ ಸಂಖ್ಯೆಯೇ ಕಡಿಮೆ ಇದೆ. ಅಂತವರನ್ನೇ ಮೂಲೆಗುಂಪು ಮಾಡುವ ಯತ್ನ ಮಾಡಿದರೆ ಅದು ರಾಜ್ಯಕ್ಕೆ ಶೋಭೆ ತರುವ ವಿಚಾರ ಅಲ್ಲ ಎಂದರು. 

ಮೈಸೂರು ಅರಮನೆಯಲ್ಲಿ ಕಿತ್ತಾಡಿಕೊಂಡ ದಸರಾ ಆನೆಗಳು: ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು..!

ಮುಡಾ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ರೂ ಅವರಿಗೆ ಶಿಕ್ಷೆ ಆಗುತ್ತದೆ. ಹಗರಣ ಆಗಿದ್ರೆ ದಾಖಲೆ ಕೊಡಿ. ದಾಖಲೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ದಾಖಲೆ ಇಲ್ಲದ ಮೇಲೆ ಅವರ ಪಾತ್ರಗಳೇ ಸಾಬೀತಾಗುವುದಿಲ್ಲ. ಆದರೂ ಟೀಕೆ ಶುರು ಮಾಡಿದ್ರೆ, ವೈಯಕ್ತಿಕ ತೇಜೋವಧೆಗಳಿಯುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. 

click me!