ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮತ್ತೆ ರಾಯಣ್ಣ ಬ್ರಿಗೇಡ್ ಪುನರುಜ್ಜೀವನಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಿದ ನಂತರ ಬ್ರಿಗೇಡ್‌ನ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಬಾಗಲಕೋಟೆ (ಸೆ.21): ಬಿಜೆಪಿಯಿಂದ ಮುನಿಸಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮತ್ತೆ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿದ್ದು, ಇದರ ಆರಂಭಕ್ಕೆ ಮಹೂರ್ತ ಫಿಕ್ಸ್ ಮಾಡೋದಕ್ಕೆ ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ. ಬಾಗಲಕೋಟೆ-ವಿಜಯಪುರದಲ್ಲಿ ಕಾರ್ಯಕರ್ತರ ಪಡೆ ಸಿದ್ಧಗೊಳಿಸುತ್ತಿದೆ.
ಬಾಗಲಕೋಟೆಯಲ್ಲಿ ಕೆ.ಎಸ್.ಈಶ್ವರಪ್ಪ ಈ ಬಗ್ಗೆ ಹೇಳಿಕೆ ನೀಡಿ, ಈ ಹಿಂದೆ ರಾಯಣ್ಣ ಬ್ರಿಗೇಡ್ ಯಾವುದೋ ಕಾರಣಕ್ಕೋ ನಿಲ್ಲಿಸಿದ್ವಿ, ಆಗ ನಮ್ಮ ರಾಷ್ಟ್ರೀಯ ವರಿಷ್ಠರು ಹೇಳಿದ್ದರು, ಬೇರೆ ಬೇರೆ ಕಾರಣಕ್ಕೆ ನಿಂತು ಹೋಗಿತ್ತು. ಇನ್ನು ಈ ಕುರಿತು ಸಭೆ ನಡೆಯುತ್ತಿವೆ. ನಾಳೆ ವಿಜಯಪುರದಲ್ಲಿ ಸಭೆ ನಡೆಸ್ತೇವೆ. ಬಾಗಲಕೋಟೆ, ವಿಜಯಪುರ ಜಿಲ್ಲೆಯ ಪ್ರಮುಖರೊಂದಿಗೆ ಸಭೆ ಮಾಡ್ತೇವೆ. ಇನ್ನು ರಾಯಣ್ಣ ಬ್ರಿಗೇಡ್ ಆರಂಭಿಸಬೇಕೋ ಬೇಡವೋ ಅನ್ನೋದನ್ನ ಶೀಘ್ರದಲ್ಲೇ ತೀರ್ಮಾನ ಮಾಡ್ತೇವೆ. ಬ್ರಿಗೇಡ್ ಮಾಡಬೇಕು ಅನ್ನೋ ಕೂಗು ಇದೆ ಎಂದು ಬಾಗಲಕೋಟೆಯಲ್ಲಿ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
undefined
ಕಳೆದ ವಾರವೇ ರಾಯಣ್ಣ ಬ್ರಿಗೇಡ್‌ಗೆ ಚಾಲನೆ ನೀಡಲಾಗಿದ್ದು, ಬೆಂಗಳೂರಲ್ಲಿ ರಾಜ್ಯಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ. 2016ರಲ್ಲಿ ಈಶ್ವರಪ್ಪ ರಾಯಣ್ಣ ಬ್ರಿಗೇಡ್‌ಗೆ ಮುನ್ನುಡಿ ಹಾಡಿದ್ದರು. ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಂದಿನಿಂದ ಇಂದಿನವರೆಗೆ ಬಿಜೆಪಿಯಲ್ಲಿ ಈ ಸಂಘಟನೆಗೆ ವಿರೋಧ ಇದೆ.
ಪಾಕಿಸ್ತಾನದ ಮೇಲೆ 27 ಲಕ್ಷ ಕೋಟಿ ರೂ. ಸಾಲದ ಬರೆ! 4 ವರ್ಷದೊಳಗೆ ತೀರಿಸದಿದ್ರೆ ಮುಂದೇನು?
ಜಮೀರ್ ಅಹಮ್ಮದ್ ರನ್ನ ಬಂಧಿಸಲು ಒತ್ತಾಯ: ರಾಜ್ಯದಲ್ಲಿ ಪ್ಯಾಲಿಸ್ಟೈನ್ ಧ್ವಜ ಹಾರಾಟದ ವಿಚಾರವಾಗಿ ಬಾಗಲಕೋಟೆಯಲ್ಲಿ ಈಶ್ವರಪ್ಪ ಕಿಡಿಕಾರಿದ್ದಾರೆ. ಪ್ಯಾಲಿಸ್ತ್ತೈನ್ ದ್ವಜ ಹಾರಿಸೋದು ಇದು ರಾಷ್ಟ್ರದ್ರೋಹಿ ಕೃತ್ಯ. ಜಮೀರ್ ಅಹಮ್ಮದ ಏನು ತಪ್ಪು ಅಂತಾರೆ. ರಾಷ್ಟ್ರ ಭಕ್ತಿ, ರಾಷ್ಟ್ರ ನಿಷ್ಠೆ ಬಗ್ಗೆ ಕಲ್ಪನೆಯೇ ಇಲ್ವಾ. ಮಂತ್ರಿನೆ ಹಿಂಗೆ ಹೇಳಿದ್ರೆ ಏನು ತಪ್ಪು ಅಂತಾರೆ. ರಾಷ್ಟ್ರಭಕ್ತ ಮುಸಲ್ಮಾನರು ಯುವಕರಿಗೆ ಬುದ್ದಿ ಹೇಳಬೇಕು. ದಾರಿಗೆ ತರಬೇಕು.
ಅದೇ ಪ್ಯಾಲೆಸ್ಟೈನ್'ನಲ್ಲಿ ನಮ್ಮ ಧ್ವಜ ಹಾರಿಸಿದ್ದರೆ ಗುಂಡಿಟ್ಟು ಕೊಂದ ಬಿಡ್ತಿದ್ರು. ಅದೇ ದುಷ್ಟ ಶಕ್ತಿಗಳು ನಾಗ ಮಂಗಲ ಪ್ರಕರಣ ಮಾಡಿದ್ರು. ಏನೇನು ಗಲಾಟೆ ಆಯ್ತು. ಒಂದು ಕಡೆ ಮುಸ್ಲಿಂ ಯುವಕರು ಮಸೀದಿಯಿಂದ ಶಸ್ತ್ರಾಸ್ತ್ರ ಹಿಡಕೊಂಡ ಬರ್ತಾರೆ. ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಬರ್ತಾರೆ,ಅಂಗಡಿ ಸುಡ್ತಾರೆ. ಪ್ಯಾಲೆಸ್ಟೈನ್ ಧ್ವಜ ಹಾರಿಸುತ್ತಾರೆ. ಪೊಲೀಸರಿಗೆ ಹೊಡೆದಿದ್ದಾರೆ..ಗಲಾಟೆ ಮಾಡಿದ್ದಾರೆ. ನಂತರ ಬಾಗಲಕೋಟೆ , ಮಂಗಳೂರ ಸೇರಿ ಎಲ್ಲಾ ಕಡೆಗೆ ಈ ರೀತಿ ಆಗ್ತಿದೆ.
ನಿನ್ನೆ ಸಿಎಂ ಹೇಳಿಕೆ ಕೇಳಿ ಬಹಳ ಆಶ್ವರ್ಯ ಆಯ್ತು. ಇದಕ್ಕೆಲ್ಲಾ ಬಿಜೆಪಿ ಕಾರಣ ಅಂತ ಹೇಳ್ತಾರೆ. ಬಿಜೆಪಿ ಕಾರಣ ಅಂದ್ರೆ ನಾಯಕರನ್ನ ಅರೆಸ್ಟ್ ಮಾಡಿ. ಪ್ಯಾಲಿಸ್ಟೈನ್ ಧ್ವಜ ಹಾರಿಸಿದ್ರೆ ಏನು ತಪ್ಪು ಎನ್ನುವ ಸಚಿವ ಜಮೀರ್ ಅಹಮ್ಮದ ಅವರನ್ನ ಮೊದಲು ಅರೆಸ್ಟ್ ಮಾಡಿ. ಸಿಎಂ ಹೇಳಿಕೆ ರಾಷ್ಟ್ರ ದ್ರೋಹಿಗಳಿಗೆ ಪ್ರೋತ್ಸಾಹ ಕೊಟ್ಟಂಗೆ ಆಗ್ತದೆ. ಜಮೀರ್ ಅಂತಹ ಅಯೋಗ್ಯನಿಗೆ ಏನು ಹೇಳಿ ಉಪಯೋಗವಿಲ್ಲ. ಅವನು ಯಾವಾಗಲೂ ಪಾಕಿಸ್ತಾನ ಪರ.
ಅಮೆಜಾನ್ನಲ್ಲಿ ಹೆಚ್ಚಾಗ್ತಿದೆ silent sacking, ಉದ್ಯೋಗಿಗಳನ್ನು ಓಡಿಸೋಕೆ ಈ ಟ್ರಿಕ್ ಬೆಸ್ಟ್
ಕೆಲವು ಮುಸ್ಲಿಂ ಗೂಂಡಾಗಳಿಗೆ ಸಿಎಂ ಸಿದ್ಧರಾಮಯ್ಯನವರ ಹೇಳಿಕೆಗಳು ಪ್ರೋತ್ಸಾಹ ಕೊಡುತ್ತಿದೆ. ಗಲಾಟೆಗೆ ಬಿಜೆಪಿಯವರು ಕಾರಣ ಅಂತಾರೆ. ಯಾರು ಆ ಬಿಜೆಪಿಯವರು ಅವರನ್ನ ಅರೆಸ್ಟ್ ಮಾಡಿ. ನಿಮ್ಮದೇ ಸರ್ಕಾರ ಇದೆ. ಸಿಎಂ ಅವರ ಹೇಳಿಕೆಗಳು ಮುಸ್ಲಿಂ ಗೂಂಡಾಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಸಿಎಂಗೆ ಕೈಮುಗಿದು ಪ್ರಾರ್ಥನೆ ಮಾಡ್ತೇನೆ, ಇಂತಹ ಹೇಳಿಕೆಗಳನ್ನ ಕೊಡಬೇಡಿ. ಮುಂದೆ ಮುಸ್ಲಿಂ ಸಮಾಜದ ಕೆಲವು ಗೂಂಡಾಗಳು ಹಿಂದೂಗಳ ಮೇಲೆ ಮನೆಗಳ ಮೇಲೆ ಕಲ್ಲು ಎಸೆಯುತ್ತಾರೆ.
ರಾಷ್ಟ್ರ ದ್ರೋಹದ ಕೆಲಸ ಮಾಡುವ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಜೈಲಿಗೆ ಕಳುಹಿಸಿ. ಬಾಲಗಂಗಾಧರ ತಿಲಕ ಅವರು ಹಿಂದೂ ಸಮಾಜ ಒಗ್ಗಟ್ಟಾಗಲಿ ಅಂತ ಗಣೇನನ್ನ ಕೂಡಿಸುವ ಆಚರಣೆ ತಂದರು. ಅವರನ್ನೂ ಟೀಕೆ ಮಾಡ್ತಾರೆ. ಮೊನ್ನೆ ಗಣೇಶನನ್ನ ಪೊಲೀಸ್ ಸ್ಟೇಶನ್ ನಲ್ಲಿ ಕೂಡಿಸ್ತಾರೆ. ಇದರ ಬಗ್ಗೆ ಮಾತನಾಡಿದ ಪ್ರಧಾನಿಯನ್ನೂ ಟೀಕೆ ಮಾಡಿದ್ರು. ಓಟುಗಳಿಗೆ ಈ ರೀತಿ ಸಿಎಂ ಮಾಡಬಾರದು. ನಿಮಗೆ ಅವರ ಓಟು ಬಿಟ್ರೆ ಗತಿಯಿಲ್ಲವಾ. ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡ್ತೇನೆ ಎಂದು ಈಶ್ವರಪ್ಪ ಹೇಳಿದರು.