ಅದಿರು ರಫ್ತಿಗೆ ಅನುಮತಿ ಅಭಿವೃದ್ಧಿಗೆ ಪೂರಕ: ಸಚಿವ ಹಾಲಪ್ಪ ಆಚಾರ್‌

By Kannadaprabha NewsFirst Published Jun 24, 2022, 11:16 AM IST
Highlights

*  ನಿರ್ಬಂಧ ಹಿಂಪಡೆದು ರಫ್ತಿಗೆ ಅವಕಾಶ ನೀಡಿದ ಸುಪ್ರೀಂ 
*  ಸುಪ್ರಿಂಕೋರ್ಚ್‌ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಕ್ರಿಯಾಯೋಜನೆ ಸಿದ್ಧಪಡಿಸಿದೆ
*  ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು 

ಹೊಸಪೇಟೆ(ಜೂ.24): ರಾಜ್ಯದಲ್ಲಿ ಅದಿರು ರಫ್ತಿಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿರುವುದು ಈ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹೊರತುಪಡಿಸಿ ದೇಶದ ಕೆಲ ರಾಜ್ಯಗಳಲ್ಲಿ ಅದಿರು ರಫ್ತಿಗೆ ಅವಕಾಶ ಇತ್ತು. ಇದೀಗ ಸುಪ್ರಿಂಕೋರ್ಚ್‌ ಕರ್ನಾಟಕದಲ್ಲಿ ಅದಿರು ರಫ್ತಿಗೆ ಅವಕಾಶ ನೀಡಿರುವುದು ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ಸೊಸೈಟಿಯಿಂದ ರೈತರಿಗೆ ಬಿತ್ತನೆ ಬೀಜ-ಗೊಬ್ಬರ: ಸಚಿವ ಹಾಲಪ್ಪ ಆಚಾರ್‌

ಈ ಹಿಂದೆ ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅದಿರು ಸಾಗಣಿಕೆಗೆ ನಿರ್ಬಂಧ ಹೇರಲಾಗಿತ್ತು. ಸುಪ್ರೀಂ ಕೋರ್ಚ್‌ ಈಗ ನಿರ್ಬಂಧ ಹಿಂಪಡೆದು ರಫ್ತಿಗೆ ಅವಕಾಶ ನೀಡಿದೆ.ಈ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಚ್‌ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಕ್ರಿಯಾಯೋಜನೆ ಸಿದ್ಧಪಡಿಸಿದೆ. ಈ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದರು. ಈ ಕುರಿತು ರಾಜ್ಯ ಸರ್ಕಾರ ಚರ್ಚಿಸಿದ್ದು, ಶೀಘ್ರವೇ ರಫ್ತು ಪ್ರಕ್ರಿಯೆ ಶುರುವಾಗಲಿದೆ ಎಂದರು.

ಕೆಎಂಇಆರ್‌ಸಿ ನಿಧಿ ಹಣವನ್ನು ಬಳ್ಳಾರಿ,ವಿಜಯನಗರ, ತುಮಕೂರು ಜಿಲ್ಲೆಗಳ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು.

'ಸಚಿವ ಆಚಾರ್‌ಗೆ ನೀರಾವರಿ ಬಗ್ಗೆ ಎಬಿಸಿಡಿ ಗೊತ್ತಿಲ್ಲ'

ಅಗ್ನಿಪಥಕ್ಕೆ ವಿರೋಧ ಸಲ್ಲ:

ಅಗ್ನಿಪಥ ಯೋಜನೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ ಧೋರಣೆ ಮೊಸರಿನಲ್ಲಿ ಕಲ್ಲು ಹುಡುಕುವಂತಿದೆ. ಇಂತಹ ಮಾಹಿತಿ ರಹಿತ ಧೋರಣೆಗಳಿಂದಲೇ ಇಂದು ನೆಲಕಚ್ಚುವ ಹಂತಕ್ಕೆ ಬಂದು ತಲುಪಿದರೂ ಕಾಂಗ್ರೆಸ್‌ ಇನ್ನು ಪಾಠ ಕಲಿಯುತ್ತಿಲ್ಲ ಎಂದರು.

ಯುವ ಸಮುದಾಯಕ್ಕೆ ಉದ್ಯೋಗ,ಕೌಶಲ್ಯ ಹಾಗೂ ವೃತ್ತಿಪರತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುವ ಈ ತರಬೇತಿಯ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತಿದೆ. ಒಟ್ಟಾರೆ ಕಾಂಗ್ರೆಸ್‌ ಅನ್ನು ಯಾರೂ ನಂಬದ ಸ್ಥಿತಿಗೆ ಸ್ವಯಂ ಕೃತ ಅಪರಾಧಗಳು ಕಾರಣವಾಗಲಿದೆ. ಇದರ ಭಾಗವಾಗಿಯೇ ಜನರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯ ಮಾಡುತ್ತಿದೆ ಎಂದರು. ಅಗ್ನಿಪಥ ಯೋಜನೆ ಬಗ್ಗೆ ಸರಿಯಾಗಿ ತಿಳಿಯದೇ ಸುಖಾಸುಮ್ಮನೇ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿ,ವಿನಾಕಾರಣ ಗೊಂದಲ ಸೃಷ್ಟಿಮಾಡುತ್ತಿದೆ ಎಂದು ದೂರಿದರು.
 

click me!