ಹಾಸನ, ಮಂಡ್ಯ, ಕೊಡಗಲ್ಲಿ 3.4 ತೀವ್ರತೆಯ ಭೂಕಂಪ

By Kannadaprabha NewsFirst Published Jun 24, 2022, 9:37 AM IST
Highlights

*   ಕೆಲ ಸೆಕೆಂಡುಗಳ ಕಾಲವಷ್ಟೇ ಕಂಪಿಸಿದ ಭೂಮಿ
*  ಕೆ.ಆರ್‌.ಪೇಟೆಯಲ್ಲಿ ಭಾರೀ ಶಬ್ದ 
*  ಶಿಲಾಪದರಗಳ ಚಲನೆಯಿಂದಾಗಿ ಈ ರೀತಿಯ ಕಂಪನಗಳು 

ಬೆಂಗಳೂರು(ಜೂ.24): ಹಾಸನ, ಮಂಡ್ಯ, ಮೈಸೂರು ಹಾಗೂ ಕೊಡಗು ಜಿಲ್ಲೆಯ ಕೆಲವೆಡೆ ಗುರುವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ರಿಕ್ಟರ್‌ ಮಾಪಕದಲ್ಲಿ 3.4 ತೀವ್ರತೆಯ ಕಂಪನ ದಾಖಲಾಗಿದ್ದು, ಭೂಕಂಪನದ ಕೇಂದ್ರಬಿಂದು ಹಾಸನ ಜಿಲ್ಲೆ ಹೊಳೇನರಸೀಪುರ ತಾಲೂಕಿನ ಮಾಲುಗಾನಹಳ್ಳಿ ಸಮೀಪ ಆಗಿತ್ತು ಎಂದು ತಿಳಿದು ಬಂದಿದೆ. 

ಭೂಕಂಪನದಿಂದಾಗಿ ಅರಕಲಗೂಡಲ್ಲಿ ಮನೆಯೊಂದರ ಗೋಡೆ ಕುಸಿದುಬಿದ್ದಿದ್ದು ಬಿಟ್ಟರೆ, ಬೇರಿನ್ಯಾವ ಹಾನಿಯೂ ಸಂಭವಿಸಿಲ್ಲ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಲುಗಾನಹಳ್ಳಿಯಿಂದ 1.8 ಕಿ.ಮೀ. ದೂರದಲ್ಲಿ 10 ಅಡಿ ಆಳದಲ್ಲಿ ಭೂಕಂಪನ ಸಂಭವಿಸಿದೆ. 

ಅಫ್ಘನ್ ಭೂಕಂಪದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡ 3 ವರ್ಷದ ಮಗುವಿಗೆ ಮರುಗಿದ ಜನ!

ರಿಕ್ಟರ್‌ ಮಾಪಕದಲ್ಲಿ 3.4 ತೀವ್ರತೆ ದಾಖಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ, ಅರಕಲಗೂಡು, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ, ಮೈಸೂರು ಜಿಲ್ಲೆಯ ಕೆ.ಆರ್‌.ನಗರ ಮತ್ತು ಸಾಲಿಗ್ರಾಮ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ಸೋಮವಾರಪೇಟೆಯಲ್ಲೂ ಕಂಪನದ ಅನುಭವ ಆಗಿದೆ.

ಕೆಲ ಸೆಕೆಂಡುಗಳ ಕಾಲವಷ್ಟೇ ಭೂಮಿ ಕಂಪಿಸಿದ್ದು, ಕೆ.ಆರ್‌.ಪೇಟೆಯಲ್ಲಿ ಭಾರೀ ಶಬ್ದ ಕೂಡ ಕೇಳಿಸಿದೆ ಎನ್ನಲಾಗಿದೆ. ಶಿಲಾಪದರಗಳ ಚಲನೆಯಿಂದಾಗಿ ಈ ರೀತಿಯ ಕಂಪನಗಳು ಆಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

click me!