ಕೊಪ್ಪಳ (ಅ.11): ಯುಪಿಎಸ್‌ಸಿ (UPSC) ಇವತ್ತು ನಿನ್ನೆಯದಲ್ಲ, ಬಿಜೆಪಿ (BJP) ಸರ್ಕಾರ ಬಂದ ಮೇಲೆ ಅದು ಬಂದಿಲ್ಲ. ಇಷ್ಟುವರ್ಷಗಳು ಇಲ್ಲದ ಆಪಾದನೆ ಈಗ ಯಾಕೆ? ಹೀಗೆ ಮಾಡುವುದರಿಂದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರು ಘನತೆಯಿರುವ ಯುಪಿಎಸ್‌ಸಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ (Halappa achar) ತಿರುಗೇಟು ನೀಡಿದ್ದಾರೆ.
ಭಾನುವಾರ ಕೊಪ್ಪಳದಲ್ಲಿ (Koppal) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಪಿಎಸ್‌ಸಿ ಪರೀಕ್ಷೆಯಲ್ಲಿ ಆರ್‌ಎಸ್‌ಎಸ್‌ನವರೇ (RSS) ಅಧಿಕ ಸಂಖ್ಯೆಯಲ್ಲಿ ಈಗ ಪಾಸಾಗುತ್ತಿದ್ದಾರೆ ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಆಗಿದ್ದವರು ಯೋಚಿಸಿ ಮಾತನಾಡಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.
Koppal| ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಅಪಪ್ರಚಾರ: ಹಾಲಪ್ಪ ಆಚಾರ್
ಯುಪಿಎಸ್‌ಸಿಯಲ್ಲಿ ಈಗ ತಾನೆ ಐಎಎಸ್ (IAS) ಅಧಿಕಾರಿಗಳು ಬರುತ್ತಿಲ್ಲ. ಹಿಂದೆಯೂ ಸಾಕಷ್ಟುಅಧಿಕಾರಿಗಳು ಬಂದಿದ್ದಾರಲ್ಲ. ಆಗ ಇಲ್ಲದ ಆಪಾದನೆ ಈಗ ಯಾಕೆ ಎಂದು ಪ್ರಶ್ನೆ ಮಾಡಿದರು? ಆರ್‌ಎಸ್‌ಎಸ್ ಕುರಿತು ಮಾತನಾಡುವುದೇ ಅವರಿಗೆ ಬೇಕು. ಅದು ಈಗ ಚುನಾವಣೆ (Election) ಬಂದಿರುವುದರಿಂದ ಬೇರೆ ವಿಷಯ ಇಲ್ಲದಿರುವುದರಿಂದ ಆರ್‌ಎಸ್‌ಎಸ್ ಕುರಿತು ಆಪಾದನೆ ಮಾಡುತ್ತಾರೆ. ಇದರಲ್ಲಿ ಹುರುಳಿಲ್ಲ ಎಂದರು.
ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ನೀಡುವುದಿಲ್ಲ ಎಂದು ಮಾಜಿ ಬಸವರಾಜ ರಾಯರಡ್ಡಿ (Basavaraja rayareddy) ಅವರು ಹೇಳಿರುವುದು ಅರ್ಥವಿಲ್ಲದ್ದು, ಬಿಜೆಪಿಯಲ್ಲಿ ಹಿರಿಯರಿಗೆ ಅತ್ಯಂತ ಗೌರವ ನೀಡುವ ಸಂಸ್ಕಾರ ಇದೆ. ತಮ್ಮ ಪಕ್ಷದಲ್ಲಿ ಏನು ಮಾಡುತ್ತಿದ್ದಾರೆ ಎಂದು ನೋಡಿಕೊಳ್ಳಲಿ ಎಂದರು.
ಕಲ್ಲಿದ್ದಲು (Coal) ಅಭಾವ ಆಗಿರುವುದು ನಿಜ, ಅದನ್ನು ಸರಿಪಡಿಸುವ ಪ್ರಯತ್ನ ಈಗಾಗಲೇ ನಡೆದಿದೆ. ಅದರಲ್ಲೂ ರಾಜ್ಯದವರೇ ಕೇಂದ್ರದಲ್ಲಿ ಸಚಿವರಾಗಿರುವುದರಿಂದ ಸಮಸ್ಯೆಯಾಗದಂತೆ ನೋಡಿಕೊಳ್ಳುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆ'
ಬೆಂಗಳೂರು (Bengaluru) ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ವಿವಾದ ಏನು ಇಲ್ಲ. ಅದೇನಿದ್ದರೂ ನಿಮ್ಮಿಂದಲೇ ಇರಬೇಕು. ಈಗಾಗಲೇ ಆರ್. ಅಶೋಕ (R Ashok) ಹಾಗೂ ವಿ. ಸೋಮಣ್ಣ ಅವರು ಉತ್ತರ ನೀಡಿದ್ದಾರೆ. ಈ ಕುರಿತು ನಾನೇನು ಹೇಳುವುದಿಲ್ಲ ಎಂದರು