ಕೊರೋನಾದಿಂದ ಗುಣಮುಖ ಆದವರ ಅಧ್ಯಯನಕ್ಕೆ ಸಮಿತಿ ರಚನೆ: ಸುಧಾ​ಕ​ರ್‌

By Kannadaprabha NewsFirst Published Sep 21, 2020, 7:46 AM IST
Highlights

ತಜ್ಞರ ಪ್ರತ್ಯೇಕ ಸಮಿತಿ ರಚನೆ| ಗುಣ​ಮು​ಖರ ಮೇಲಿನ ದೂರ​ಗಾಮಿ ಪರಿ​ಣಾಮ ಅಧ್ಯ​ಯ​ನ| ಅಧ್ಯಯನದ ವರದಿಯ ಆಧಾರದ ಮೇಲೆ ಕೋವಿಡ್‌-19 ರೋಗಿಗಳ ದೂರಗಾಮಿ ಆರೋಗ್ಯದ ದೃಷ್ಟಿಯಿಂದ ಸೂಕ್ತ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಕಾರಿ| 

ಬೆಂಗಳೂರು(ಸೆ.21): ಕೊರೋನಾ ಸೋಂಕಿನಿಂದ ಗುಣಮುಖರಾದವರ ಮೇಲೆ ಉಂಟಾಗಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಸಚಿವರು, ಕೋವಿಡ್‌ ಸೋಂಕು ತಗುಲಿ ಗುಣಮುಖರಾದವರ ಆರೋಗ್ಯದ ಮೇಲೆ ಭವಿಷ್ಯದಲ್ಲಿ ಏನಾದರೂ ಪರಿಣಾಮಗಳು ಉಂಟಾಗಬಹುದೇ ಎಂಬ ಅನುಮಾನಗಳು ಸಮಾಜವನ್ನು ಕಾಡಲಾರಂಭಿಸಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

50 ದಿನದಲ್ಲಿ 1.35 ಲಕ್ಷ ಜನರಿಗೆ ಕೊರೋನಾ ಸೋಂಕು: ಆತಂಕದಲ್ಲಿ ಬೆಂಗಳೂರಿನ ಜನತೆ..!

ಲಘು ಮತ್ತು ತೀವ್ರ ರೋಗ ಲಕ್ಷಣ ಹೊಂದಿರುವ ಮತ್ತು ಇತರೆ ಗಂಭೀರ ರೋಗಗಳಿಂದ ಬಳಲುತ್ತಿದ್ದವರ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನದಿಂದ ತಿಳಿದುಕೊಳ್ಳಬೇಕಿದೆ. ಹಾಗಾಗಿ ತಜ್ಞರ ಸಮಿತಿ ರಚಿಸಿ ಈ ಬಗ್ಗೆ ಅಧ್ಯಯನ ನಡೆಸಲಾಗುವುದು. ಅಧ್ಯಯನದ ವರದಿಯ ಆಧಾರದ ಮೇಲೆ ಕೋವಿಡ್‌-19 ರೋಗಿಗಳ ದೂರಗಾಮಿ ಆರೋಗ್ಯದ ದೃಷ್ಟಿಯಿಂದ ಸೂಕ್ತ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.
 

click me!