Covid 4th Wave: ಕರ್ನಾಟಕದಲ್ಲಿ 4ನೇ ಅಲೆ ಬಗ್ಗೆ ಸಚಿವ ಸುಧಾಕರ್‌ ಹೇಳಿದ್ದಿಷ್ಟು

By Girish Goudar  |  First Published Mar 22, 2022, 4:50 AM IST

*  4ನೇ ಅಲೆ ಬಂದರೂ ಆತಂಕವಿಲ್ಲ: ಸುಧಾಕರ್‌
*  ದೇಶದಲ್ಲಿ ಸಾಕಷ್ಟು ಲಸಿಕೆ ನೀಡಿರುವುದರಿಂದ ಸಮಸ್ಯೆ ಇಲ್ಲ
*  ಆಗಸ್ಟ್‌ನಲ್ಲಿ 4ನೇ ಅಲೆ ಬರಬಹುದೆಂದು ಐಐಟಿ ಹೇಳಿದೆ
 


ಬೆಂಗಳೂರು(ಮಾ.22):  ದೇಶದಲ್ಲಿ ಕೊರೋನಾ(Coronavirus) ನಾಲ್ಕನೇ ಅಲೆ ಆಗಸ್ಟ್‌ನಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನು ಐಐಟಿ ಸಂಸ್ಥೆ ನೀಡಿದ್ದರೂ, ಉತ್ತಮವಾಗಿ ಲಸಿಕಾರಣ ನಡೆದಿರುವುದರಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ತಿಳಿಸಿದ್ದಾರೆ.

ಕೊರೋನಾ ರೂಪಾಂತರಿ ತಳಿ ಬಿಎ2(BA2) ಫಿಲಿಫೈನ್ಸ್‌(Philippines) ದೇಶದಲ್ಲಿ ಕಾಣಿಸಿಕೊಂಡು ಈಗ ವಿಶ್ವದ(World) 40 ದೇಶಗಳಲ್ಲಿ ಹರಡಿದೆ. ನಮ್ಮ ದೇಶದಲ್ಲಿ ಬರುವ ಆಗಸ್ಟ್‌ನಲ್ಲಿ ಕಾಣಿಸಕೊಳ್ಳಬಹುದೆಂದು ಐಐಟಿ ಸಂಸ್ಥೆ ತಜ್ಞರು ಊಹಿಸಿದ್ದಾರೆ. ರಾಜ್ಯದಲ್ಲಿ(Karnataka) 4.97 ಕೋಟಿ ಮೊದಲ ಡೋಸ್‌ ಹಾಗೂ ಎರಡನೇ ಡೋಸ್‌ 4.69 ಕೋಟಿ ನೀಡಲಾಗಿದೆ. 15-17 ವಯಸ್ಸಿನವರಿಗೆ 19.59 ಲಕ್ಷ ಹಾಗೂ 12-14 ವಯಸ್ಸಿನ ಮಕ್ಕಳಿಗೆ 1.18 ಲಕ್ಷ ಡೋಸ್‌ ನೀಡಲಾಗಿದೆ. ಮೂರನೇ ಡೋಸ್‌ ಅನ್ನು ಶೇ. 55 ಜನರಿಗೆ ನೀಡಲಾಗಿದೆ ಎಂದು ಹೇಳಿದರು.

Latest Videos

Covid Lockdown; ಅಪ್ಪಳಿಸಿತು ಕೊರೋನಾ 4ನೇ ಅಲೆ, ಲಾಕ್‌ಡೌನ್ ಘೋಷಿಸಿದ ಆಸ್ಟ್ರಿಯಾ!

ಶೂನ್ಯವೇಳೆಯಲ್ಲಿ ಬಿಜೆಪಿಯ(BJP) ಶಶೀಲ್‌ ನಮೋಶಿ ಅವರ ಮಾಡಿದ ಪ್ರಸ್ತಾವನೆಗೆ ಉತ್ತರಿಸಿದ ಅವರು, ಕೊರೋನಾ ಮೊದಲೆರಡು ಅಲೆಗಳಿಂದ ಕಲಿತ ಅನುಭವದ ಮೇಲೆ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ(Health System) ಸಾಕಷ್ಟುಸುಧಾರಣೆ ಮಾಡಲಾಗಿದೆ. 55 ಸಾವಿರ ಆಮ್ಲಜನಕ ಸಹಿತ ಹಾಸಿಗೆ ಸೌಲಭ್ಯ ಹೊಂದಲಾಗಿದೆ. ಆಮ್ಲಜನಕ ಉತ್ಪಾದನಾ ಸಾಮರ್ಥ್ಯ 300 ಮೆಟ್ರಿಕ್‌ ಟನ್‌ ಇದ್ದದ್ದು ಈಗ 1170 ಮೆಟ್ರಿಕ್‌ ಟನ್‌ಗೆ ಏರಿಕೆಯಾಗಿದೆ. 255 ಕೊರೋನಾ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ನಿತ್ಯ 2.50 ಲಕ್ಷ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು.

750 ಪಿಎಚ್‌ಸಿ ಉನ್ನತೀಕರಣ:

ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ(CM Ibrahim) ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವ ಡಾ.ಕೆ.ಸುಧಾಕರ್‌, 2021-22ನೇ ಸಾಲಿನ ಅಮೃತ ಆರೋಗ್ಯ ಮೂಲಭೂತ ಸೌಲಭ್ಯ ಉನ್ನತೀಕರಣ ಯೋಜನೆಯಡಿ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಲಭ್ಯಗಳ ಉನ್ನತೀಕರಣ ಕಾಮಗಾರಿಯನ್ನು 150 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯಡಿ ಪ್ರತಿ ಜಿಲ್ಲೆಗೆ 25 ಪ್ರಾಥಮಿಕ ಕೇಂದ್ರಗಳಿಗೆ ತಲಾ 20 ಲಕ್ಷ ರು. ಮೊತ್ತದಲ್ಲಿ ಅಭಿವೃದ್ಧಿಗೊಳಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ 32 ದ್ರವೀಕೃತ ವೈದ್ಯಕೀಯ ಆಮ್ಲಜನಕ ಟ್ಯಾಂಕ್‌ಗಳು ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ಅಳವಡಿಸಲಾಗಿದೆ. 246 ಪಿಎಸ್‌ಎ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ. 15,139 ಆಮ್ಲಜನಕ ಸಿಲಿಂಡರ್‌ಗಳು, 9000 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಪಾಕ್‌ನಲ್ಲಿ ಕೋವಿಡ್‌ 4ನೇ ಅಲೆ: ಆಮ್ಲಜನಕಕ್ಕಾಗಿ ದೇಶಾದ್ಯಂತ ಹಾಹಾಕಾರ!

ಇದಲ್ಲದೇ 15ನೇ ಹಣಕಾಸು ಆಯೋಗದ ಅನುದಾನದ ಲೆಕ್ಕದಲ್ಲಿ ರಾಜ್ಯಕ್ಕೆ 552 ಕೋಟಿ ರು. ಅನುದಾನ ಲಭ್ಯವಿದ್ದು, ಈ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಪ್ರಯೋಗ ಶಾಲೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ದಕ್ಷಿಣ ಆಫ್ರಿಕಾದಲ್ಲಿ 4ನೇ ಅಲೆ: ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆ!

ಕೇಪ್‌ಟೌನ್‌: ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರೋನ್‌ನಿಂದಾಗಿ (Covid 19 New Variant Omicron) ದೇಶದಲ್ಲಿ ಕೋವಿಡ್‌ 4ನೇ ಅಲೆ ಕಾಣಿಸಿಕೊಂಡಿದೆ (4th Wave) ಎಂದು ದಕ್ಷಿಣ ಆಫ್ರಿಕಾ ಸರ್ಕಾರ ಡಿ. 04 ರಂದು ಅಧಿಕೃತವಾಗಿ ಘೋಷಿಸಿತ್ತು. ಮೊದಲ ಒಮಿಕ್ರೋನ್‌ ಕೇಸು ಪತ್ತೆಯಾದ ತಿಂಗಳೊಳಗೇ, ಅದು ಮತ್ತೊಂದು ಕೋವಿಡ್‌ ಅಲೆಗೆ ಕಾರಣವಾಗಿರುವುದು, ವಿಶ್ವದ ಇತರೆ ದೇಶಗಳಲ್ಲೂ ಅಂಥದ್ದೇ ಭೀತಿಯನ್ನು ಹುಟ್ಟುಹಾಕಿತ್ತು. 
 

click me!