ನವದೆಹಲಿ(ಸೆ.22): ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೆ ಇಂದು(ಶುಕ್ರವಾರ) ಕ್ಯಾಬಿನೆಟ್ ಸಭೆ ನಡೆಯಲಿದ್ದು, ಸಭೆಯಲ್ಲಿ ರೈತಪರ ಸೂಕ್ತ ನಿರ್ಧಾರ ಮಾಡಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ರೈತರಿಗೆ ಅನುಕೂಲವಾಗುವಂತಹ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ, ಸದ್ಯ ಬಹಿರಂಗಪಡಿಸಲಾಗದು ಎಂದರು. ಸದ್ಯ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕಾದ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿದೆ. ಆದರೂ ನಮಗೆ ಎಲ್ಲಾ ಬಾಗಿಲು ಬಂದ್ ಆಗಿಲ್ಲ, ಕೋರ್ಟ್ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ (CWRC) ಮುಂದೆ ಹೋಗಲು ಹೇಳಿದೆ. ಹೇಗಾದರೂ ರಾಜ್ಯದ ರೈತರ ಹಿತಕಾಯಲು ಸರ್ಕಾರ ಬದ್ಧವಿದ್ದು, ಆ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸುತ್ತಿದೆ. ಸದ್ಯ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹಾಗೆ ಬಹಿರಂಗಪಡಿಸಿದರೆ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂದು ಸಚಿವರು ಹೇಳಿದರು.
ಸುಪ್ರೀಂ ಮುಂದೆ ವಾಸ್ತವ ಮನವರಿಕೆ ಮಾಡಲು ರಾಜ್ಯ ಸರ್ಕಾರ ವಿಫಲ: ಸಂಸದೆ ಸುಮಲತಾ ಅಂಬರೀಶ್
ಈ ಥರದ ಸಮಸ್ಯೆ ಬಂದಾಗ ವಿಪಕ್ಷಗಳು ಎಚ್ಚರಿಕೆಯಿಂದ, ಆತ್ಮಸಾಕ್ಷಿಯಿಂದ ಮಾತನಾಡಬೇಕು. ರಾಜ್ಯದ ರೈತರ ಹಿತ ಮುಖ್ಯವೇ ಹೊರತು. ಬರೀ ವೀರವೇಷದಿಂದ ಮಾತ ನಾಡುವುರಲ್ಲಿ ಅರ್ಥವಿಲ್ಲ. ಹಿಂದೆ ಬಂಗಾರಪ್ಪನವರೂ ಸೇರಿ ಬೇರೆ ಬೇರೆ ಸಿಎಂಗಳು ಕಾವೇರಿ ವಿಚಾರದಲ್ಲಿ ತೆಗೆದುಕೊಂಡು ನಿರ್ಧಾರಗಳೂ ಗೊತ್ತಿದೆ. ಮತ್ಯಾರು ತಮಿಳುನಾಡಿಗೆ ಮಧ್ಯಾಹ್ನ, ರಾತ್ರಿ ನೀರು ಹರಿಸಿದ್ದಾರೆ ಎಂಬುದೂ ಗೊತ್ತಿದ್ದೆ ಎಂದು ಖಾರವಾಗಿಯೇ ನುಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ