ನಗರ ಪಾಲಿಕೆ ಆಡಳಿತ ಯಂತ್ರ ಚುರುಕಾಗಿಸಲು ಕೆಲವು ಕ್ರಮ: ಸಚಿವ ಬೈರತಿ ಬಸವರಾಜ್

By Suvarna News  |  First Published Jul 8, 2022, 9:57 PM IST

ರಾಜ್ಯದ ನಗರ ಪಾಲಿಕೆಗಳಲ್ಲಿ ಗೂಟ ಹೊಡೆದುಕೊಂಡು ಕುಳಿತಿರುವ ಸಿಬ್ಬಂದಿಗಳೇ ಇತ್ತ ಕೇಳಿ. ನಿಮ್ಮ ಇಲಾಖೆ ಸಚಿವರು ಇವತ್ತು ಒಂದು ಹೇಳಿಕೆ ನೀಡಿದ್ದಾರೆ. ಆಡಳಿತಕ್ಕೆ ಚುರುಕು ನೀಡಲು ಅವರು ಏನು ಮಾಡುತ್ತೀನಿ ಅಂದ್ರು, ಅದು ಇಲ್ಲಿದೆ.


ವರದಿ : ಮಧು.ಎಂ.ಚಿನಕುರಳಿ

ಮೈಸೂರು, (ಜುಲೈ.08) :
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಇಂದು(ಶುಕ್ರವಾರ) ಮೈಸೂರಿನಲ್ಲಿ ಸಭೆ ನಡೆಸಿದರು. ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಮಾಹಿತಿ ಕಲೆಹಾಕಿದ ಸಚಿವರು ಆಡಳಿತ ಯಂತ್ರ ಚುರುಕಾಗಿಸಲು ಕೆಲವು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದರ ಭಾಗವಾಗಿ ನಗರ ಪಾಲಿಕೆಗಳಲ್ಲಿ ಬಹುವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರ ಪಟ್ಟಿಕೊಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪಾಲಿಕೆ ಆಯುಕ್ತರು ಆ ಪಟ್ಟಿ ಕೊಟ್ಟ ಕೂಡಲೇ ಅಂತವರ ವರ್ಗಾವಣೆಗೆ ಕ್ರಮ ವಹಿಸಲಾಗುವುದು ಎಂದುಸಚಿವರು ಭರವಸೆ ನೀಡಿದರು.

Latest Videos

undefined

ನಿಮ್ಮ ಜಿಲ್ಲೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದು ಮಳೆಯ ಅವಾಂತರ ಸೃಷ್ಠಿಯಾದಾಗ ಜನರ ನೆರವಿಗೆ ಶೀಘ್ರ ಧಾವಿಸಲು ವಿಶೇಷ ಟಾಸ್ಕ್ ಪೋರ್ಸ್ ರಚಿಸಲು ಪಾಲಿಕೆ ಆಯುಕ್ತರುಗಳಿಗೆ ಸೂಚನೆ ಕೊಟ್ಟಿದ್ದಾರೆ. ರಾತ್ರಿಯ ವೇಳೆಯೂ ಟಾಸ್ಕ್ ಪೋರ್ಸ್ ಗಳು ಕೆಲಸ ಮಾಡಬೇಕು.ಜನರ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಪಂದಿಸಲು ಅವರು ಹೇಳಿದರು.

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿದ್ದೇವೆ.
ಈ ವೇಳೆ ಮಾದ್ಯಮಗಳ ಜೊತೆ ಮಾತನಾಡಿದ ಸಚಿವರು ರಾಜ್ಯದ ಪೌರಕಾರ್ಮಿಕರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಸರ್ಕಾರಕ್ಕೆ ಇದರಿಂದ 555 ಕೋಟಿ ರೂ ಹೊರೆಯಾಗಲಿದೆ. ಆದರೂ ಅವರ ಹಿತ ಕಾಯಲು ನಾವು ಬದ್ಧ ಇದ್ದೇವೆ ಎಂದರು. ಸರ್ಕಾರಗಳು ನೀಡುವ ಸವಲತ್ತುಗಳನ್ನು ಪೌರಕಾರ್ಮಿಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸ್ವಚ್ಚತಾ ಕಾರ್ಯಕ್ಕೆ ನೀಡುವ ಹ್ಯಾಂಡ್ ಗ್ಲೌಸ್, ಶೂಗಳನ್ನು ಕೆಲವರು ಬಳಸುತ್ತಿಲ್ಲ. ಇದೂ ಕೂಡಾ ಒಂದು ಸಮಸ್ಯೆ ಆಗಿದೆ. ಮೈಸೂರು ಹೊರವರ್ತುಲ ರಸ್ತೆಯ ವಿದ್ಯುತ್ ದೀಪ ನಿರ್ವಹಣೆ ಹೊಣೆ ಮೈಸೂರು ಮಹಾನಗರಪಾಲಿಕೆಗೆ ವಹಿಸಿದ್ದು, ಮುಂದಿನ ತಿಂಗಳಿಂದ ಶಾಶ್ವತ ವಾಗಿ ಮೈಸೂರು ರಿಂಗ್ ರಸ್ತೆಯಲ್ಲಿ ವಿದ್ಯುತ್ ದೀಪಗಳ ಸಂಪರ್ಕ ಇರುತ್ತದೆ ಎಂದರು.

ಇನ್ನು ಮೈಸೂರು ದೇವರಾಜ ಮಾರುಕಟ್ಟೆಯ ಪುನರ್ ನಿರ್ಮಾಣದಲ್ಲಿ ನಾವು ರಾಜವಂಶಸ್ಥರ ಮನವೊಲಿಸುತ್ತೇವೆ ಎಂದ ಅವರು ಇದರ ನಡುವೆಯೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ಕೊಟ್ಟರು.

ಚಾಮುಂಡಿ ಬೆಟ್ಟಕ್ಕೆ ಸಚಿವರ ಭೇಟಿ.
ಸಭೆ ಆರಂಭಕ್ಕೂ ಮುನ್ನ ಆಷಾಡ ಮಾಸದ ಎರಡನೇ ಶುಕ್ರವಾರ ಹಿನ್ನೆಲೆಯಲ್ಲಿ  ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಚಿವ ಭೈರತಿ ಬಸವರಾಜ್ ಭೇಟಿ ಕೊಟ್ಟರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಂದ ಅವರು ಮಾದ್ಯಮಗಳೊಂದಿಗೆ ಮಾತಾನಡಿದರು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಬಂಧನವಾಗಿದ್ದು, ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಲು ಡಿಕೆಶಿ ಆಗ್ರಹ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಪ್ರಕರಣ ಈಗಾಗಲೇ ಸಿಓಡಿ ತನಿಖೆಯಲ್ಲಿದೆ. ತನಿಖೆಯಲ್ಲಿರುವಾಗ ನಾನು ಏನು ಮಾತನಾಡಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡ್ತಾರೆ ಎಂದರು. ವರುಣಾರ್ಭಟಕ್ಕೆ ಅತೀವೃಷ್ಠಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಆಯುಕ್ತರ ಸಂಪರ್ಕದ್ದು, ಎಲ್ಲೆಲ್ಲಿ ಮಳೆಯಿಂದ ಹಾನಿಯಾಗುತ್ತೆ, ಸಮಸ್ಯೆ ಉಲ್ಬಣಿಸುತ್ತೆ, ಕೂಡಲೇ‌ ಸ್ಪಂಧಿಸಬೇಕು ಎಂದು ಸೂಚನೆ‌ ನೀಡಿದ್ದೇನೆ ಎಂದರು.

click me!