ರನ್‌ ವೇ ಸಮೀಪ ಗುಡ್ಡ ಕುಸಿತ: ಮಂಗಳೂರು ಏರ್ ಪೋರ್ಟ್ ರನ್ ವೇ ಸೇಫ್

By Suvarna NewsFirst Published Jul 8, 2022, 6:37 PM IST
Highlights

* ಮಂಗಳೂರಿನಲ್ಲಿ ಭಾರೀ ಮಳೆ
* ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಬಳಿಕ ಗುಡ್ಡ ಕುಸಿತ
* ಈ ಬಗ್ಗೆ ಸ್ಪಷ್ಟನೆ ಕೊಟ್ಟ ಮಂಗಳೂರು ಏರ್ ಪೋರ್ಟ್ ಆಡಳಿತ ಮಂಡಳಿ
 

ಮಂಗಳೂರು, (ಜುಲೈ.08): ಮಂಗಳೂರು ಏರ್ ಪೋರ್ಟ್ ಸಮೀಪದ ಗುಡ್ಡ ಕುಸಿದು ರಸ್ತೆ ತುಂಡಾದ ವಿಚಾರಕ್ಕೆ ಸಂಬಂಧಿಸಿ ಏರ್ ಪೋರ್ಟ್ ರನ್ ವೇಗೆ ಅಪಾಯವಿಲ್ಲ ಅಂತ ಮಂಗಳೂರು ವಿಮಾನ ನಿಲ್ದಾಣ ಆಡಳಿತ ಸ್ಪಷ್ಟನೆ ನೀಡಿದೆ. 

ರನ್ ವೇ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದ ಏರ್ ಪೋರ್ಟ್ ಆಡಳಿತ ಮಂಡಳಿ, ರನ್ ವೇ ಮತ್ತು ತಡೆಗೋಡೆಯ ಫೋಟೋ ಸಹಿತ ಸ್ಪಷ್ಟನೆ ಕೊಟ್ಟಿದೆ. ರನ್ ವೇಯ ಎರಡು ತಡೆಗೋಡೆಗಳ ಸುಮಾರು 75-100 ಮೀ. ಕೆಳಗೆ ಮೋರಿ ಕೊಚ್ಚಿ ಹೋಗಿದೆ. ಸ್ಥಳೀಯ ಅಧಿಕಾರಿಗಳು ಮೋರಿ ಕೊಚ್ಚಿಹೋಗುವುದರಿಂದ ಸೃಷ್ಟಿಯಾದ ಕಂದಕವನ್ನು ತುಂಬುತ್ತಿದ್ದಾರೆ. ಅದ್ಯಪಾಡಿ ಮುಖ್ಯ ಕಾಂಕ್ರೀಟ್ ರಸ್ತೆಯ ಒಂದು ಭಾಗವನ್ನು ಸ್ಥಗಿತಗೊಳಿಸಲಾಗಿದೆ. ಈ ತುಂಡಾದ ದಾರಿಯ ಮಧ್ಯಭಾಗದಿಂದ ಒಳಗಿನ ತಡೆಗೋಡೆಗೆ 75 ಮೀ ಅಂತರ ಇದೆ. ಏರ್ ಪೋರ್ಟ್ ‌ಒಳಗಿನ ತಡೆಗೋಡೆಯ ಹಲವು ಮೀಟರ್ ಅಂತರದಲ್ಲಿ ರನ್ ವೇ ಇದೆ. ರನ್ವೇಗೆ ಯಾವುದೇ ಅಪಾಯವಿಲ್ಲ, ಕಾರ್ಯಾಚರಣೆಗಳು ಸಾಮಾನ್ಯವಾಗಿ ನಡೆಯುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Karnataka Rain Update: ವರುಣನ ಆರ್ಭಟಕ್ಕೆ ಕೊಡಗು, ಮಡಿಕೇರಿ ಗಢ ಗಢ: ಕರಾವಳಿಗೆ ಜಲ ಗಂಡಾಂತರ!

ಏರ್ ಪೋರ್ಟ್ ‌ಪಕ್ಕದಲ್ಲೇ ತುಂಡಾದ ರಸ್ತೆ!
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬದಿಯ ತಡೆ ಗೋಡೆಯ ಪಕ್ಕದಲ್ಲೇ ನಿನ್ನೆ ಗುಡ್ಡ ಕುಸಿದು ರಸ್ತೆ ತುಂಡಾಗಿತ್ತು.‌ ಮಂಗಳೂರು ಏರ್ಪೋರ್ಟ್ ನ ರನ್ ವೇ ಅಪಾಯದಲ್ಲಿದೆ ಎನ್ನಲಾಗಿತ್ತು.‌ ಅದ್ಯಪಾಡಿ ಬಳಿ ಇರುವ ರನ್ ವೇ ಬಳಿಯೇ ಕುಸಿತ ಸಂಭವಿಸಿದ್ದು, ಅದ್ಯಪಾಡಿಯಿಂದ ಕೈಕಂಬ ಹೋಗುವ ರಸ್ತೆ ಬಂದ್ ಮಾಡಲಾಗಿದೆ. ರನ್ ವೇ ಗೆ ತಾಗಿಕೊಂಡ ಬೃಹತ್ ತಡೆಗೋಡೆ ಬದಿಯಲ್ಲೇ ರಸ್ತೆ ಕುಸಿತವಾಗಿದ್ದು, ಏರ್ ಪೋರ್ಟ್ ರನ್ ವೇಯ ನೀರು ರಭಸವಾಗಿ ಹೊರಗೆ ಹರಿದು ಕುಸಿದಿರೋ ಸಾಧ್ಯತೆ ಇದೆ. 

ನೀರಿನ ರಭಸಕ್ಕೆ ಕಾಂಕ್ರೀಟ್ ರಸ್ತೆ ತುಂಡಾಗಿ ಸಂಚಾರವೇ ಬಂದ್ ಆಗಿದೆ. ರಸ್ತೆ ತುಂಡಾದ ಗುಡ್ಡ ಕುಸಿತದ ಮೇಲ್ಭಾಗದಲ್ಲೇ ಏರ್ ಪೋರ್ಟ್ ರನ್ ವೇ ಇದ್ದು, ನಿತ್ಯ ಹತ್ತಾರು ವಿಮಾನಗಳು ಸಂಚರಿಸುತ್ತೆ. ಆದರೆ‌ ಮಂಗಳೂರು ಏರ್ ಪೋರ್ಟ್ ಆಡಳಿತ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ರನ್ ವೇಗೆ ಅಪಾಯ ಇಲ್ಲ, ಸುರಕ್ಷಿತವಾಗಿದೆ ಎಂದಿದೆ.

click me!