ಬೆಂಗಳೂರು (ಅ.01): ಚಿತಾಭಸ್ಮ ವಿಸರ್ಜನೆ ಮಾಡಿದ್ದ ಕಂದಾಯ ಸಚಿವ ಆರ್. ಅಶೋಕ್ (R Ashok) ರಿಂದ ಮತ್ತೊಂದು ಮಾನವೀಯ ಕಾರ್ಯ ನಡೆಯುತ್ತಿದೆ.
ಅನಾಥ ಶವಗಳ (Orphan Bodies) ಅಂತ್ಯಕ್ರಿಯೆ ಮಾಡಿಸಿ ಚಿತಾಭಸ್ಮ ವಿಸರ್ಜನೆ ಮಾಡಿದ್ದ ಆರ್ ಅಶೋಕ್ ಇದೀಗ ಪಿತೃಪಕ್ಷದ ನಿಮಿತ್ತ ಪಿಂಡ ಪ್ರದಾನ (Pinda Pradan) ಮಾಡಲು ತಿರ್ಮಾನ ಮಾಡಿದ್ದಾರೆ.
ಅಕ್ಟೋಬರ್ 4 ರಂದು ಶ್ರೀರಂಗಪಟ್ಟಣದ (Shrirangapattana) ಕಾವೇರಿ ಘಾಟ್ (Cauvery Ghat) ನಲ್ಲಿ ಪಿಂಡ ಪ್ರದಾನ ಮಾಡಲು ತಿರ್ಮಾನ ಮಾಡಿದ್ದಾರೆ. ಹಿಂದು ಸಂಪ್ರದಾಯದಂತೆ ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡುವ ಮಹತ್ವದ ಕಾರ್ಯ ಮಾಡಲಿರುವ ಅಶೋಕ್, ಭಾನುಪ್ರಕಾಶ್ ಶರ್ಮಾ (Bhanuprakash Sharma) ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಿದ್ದಾರೆ.
ಯೂತ್ ಕಾಂಗ್ರೆಸ್‌ನಿಂದ ಹರಿದ್ವಾರದಲ್ಲಿ 500 ಅನಾಥ ಅಸ್ಥಿ ವಿಸರ್ಜನೆ
ಪಿಂಡ ಪ್ರದಾನ ಮಾಡಿ ಕೋವಿಡ್ ವೇಳೆ ಮೃತಪಟ್ಟು ಅನಾಥವಾಗಿದ್ದವರ ಆತ್ಮಗಳಿಗೆ ಸದ್ಗತಿಗಾಗಿ ಪ್ರಾರ್ಥನೆ ಮಾಡಲಿದ್ದಾರೆ. ಕೊರೋನಾ (corona) ಸಂದರ್ಭದಲ್ಲಿ ಸರ್ಕಾರ ಅನಾಥ ಶವಗಳಿಗೆ ಮುಕ್ತಿ ಕಾಣಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ಸಚಿವ ಅಶೋಕ್ ಅವರು ಇದರ ಮುಂದಾಳತ್ವವನ್ನು ವಹಿಸಿಕೊಂಡು ನಡೆಸಿದ್ದರು. ಅದರಂತೆ ಇದೀಗ ಪಿಂಡ ಪ್ರದಾನ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಿಂದ ಮೃತರ ಆತ್ಮಗಳಿಗೆ ಮುಕ್ತಿ ದೊರೆಯುತ್ತದೆ ಎನ್ನುವುದು ಹಿಂದೂ ಧಾರ್ಮಿಕ ನಂಬಿಕೆ ಆಗಿದೆ.
ಅಂತ್ಯಕ್ರಿಯೆ ಮಾಡಿದ್ದರು :
ಬೆಂಗಳೂರಿನ (Bengaluru) ಚಿತಗಾರಗಳಲ್ಲಿ ನಡೆದಿದ್ದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯ ಅಸ್ಥಿ ಪಡೆಯಲು ಸಂಬಂಧಿಕರು ಬಂದಿಲ್ಲ. ಕೊರೋನಾ ಸೋಂಕಿತರ ಮರಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅಧಿಕವಾಗಿತ್ತು. ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ಆ ವೇಳೆ, ಅಂತ್ಯಕ್ರಿಯೆ ಬಳಿಕ ಅಸ್ಥಿ ಪಡೆಯಲು ಸಂಬಂಧಿಕರು ಬಾರದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಮುಕ್ತಿ ಕಾರ್ಯ ನಡೆಸಿಕೊಡಲಾಗಿತ್ತು.
ಕೊರೋನಾದಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿ ವಿಸರ್ಜನೆ ಮಾಡಿದ ಅಶೋಕ್
12ಕ್ಕೂ ಹೆಚ್ಚು ಪುರೋಹಿತರಿಂದ ಕೊವಿಡ್ ಮೃತರಿಗೆ ಶ್ರದ್ಧಾ ಕಾರ್ಯ ನೆರವೇರಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಸಚಿವ ಆರ್ ಅಶೋಕ್ ಸಂಕಲ್ಪಕ್ಕೆ ಕುಳಿತು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಶ್ರೀ ಕಾಶಿ ವಿಶ್ವೇಶ್ವರ ದೇವಾಲಯ ಸಮೀಪದ ಕಾವೇರಿ ನದಿ ಬಳಿ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ಕಾರ್ಯಗಳೊಂದಿಗೆ ಅಸ್ಥಿ ವಿಸರ್ಜನಾ ಕಾರ್ಯಕ್ರಮ ನಡೆದಿತ್ತು.