ಬೆಂಗಳೂರು ಮತ್ತೆ ಲಾಕ್‌ಡೌನ್‌: ತವರಿಗೆ ಹೊರಟ ವಲಸೆ ಕಾರ್ಮಿಕರು

By Kannadaprabha NewsFirst Published Jul 17, 2020, 7:53 AM IST
Highlights

ಒಡಿಸ್ಸಾಗೆ ತೆರಳಲು 1 ಸಾವಿರ ಜನರು ರಾತ್ರಿಯಿಂದಲೇ ಠಿಕಾಣಿ| ರೈಲಿಗಾಗಿ ಮಳೆಯನ್ನೂ ಲೆಕ್ಕಿಸದೇ ಇಡೀ ರಾತ್ರಿ ಯಶವಂತಪುರ ರೈಲು ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದ ವಲಸೆ ಕಾರ್ಮಿಕರು| ಸೋಂಕಿನಿಂದಾಗಿ ಉದ್ಯೋಗದ ಸಮಸ್ಯೆ| ಕಳೆದ ಮೂರು ತಿಂಗಳಿಂದ ಸರಿಯಾಗಿ ಕೆಲಸ ಇಲ್ಲದೆ ಪರದಾಟ|

ಬೆಂಗಳೂರು(ಜು.17):  ರಾಜಧಾನಿಯಲ್ಲಿ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಗೊಳಿಸಿರುವ ಬೆನ್ನಲ್ಲೇ ಹೊರರಾಜ್ಯದ ವಲಸೆ ಕಾರ್ಮಿಕರ ತವರು ರಾಜ್ಯಗಳತ್ತ ವಾಪಸ್‌ ಹೋಗಲಾರಂಭಿಸಿದ್ದಾರೆ.

ಒಡಿಸ್ಸಾ ಮೂಲದ ಸುಮಾರು ಒಂದು ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ಬುಧವಾರ ರಾತ್ರಿಯಿಂದಲೇ ಯಶವಂತಪುರ ರೈಲು ನಿಲ್ದಾಣದಲ್ಲಿ ಲಗೇಜು ಸಮೇತ ಠಿಕಾಣಿ ಹೂಡಿದ್ದರು. ಗುರುವಾರ ಬೆಳಗ್ಗೆ 11ಕ್ಕೆ ಹೊರಡುವ ದುರಂತ್‌ ಎಕ್ಸ್‌ಪ್ರೆಸ್‌ ರೈಲಿಗಾಗಿ ಮಳೆಯನ್ನೂ ಲೆಕ್ಕಿಸದೇ ಇಡೀ ರಾತ್ರಿ ಯಶವಂತಪುರ ರೈಲು ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದರು.

ಎಚ್ಚರ..! 99% ಬೆಂಗಳೂರು in ಡೇಂಜರ್..!

ಬೆಂಗಳೂರಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಸೋಂಕಿನಿಂದಾಗಿ ಉದ್ಯೋಗದ ಸಮಸ್ಯೆ ಕಾಡುತ್ತಿದೆ. ಕಳೆದ ಮೂರು ತಿಂಗಳಿಂದ ಸರಿಯಾಗಿ ಕೆಲಸ ಇಲ್ಲದೆ ಪರದಾಡಬೇಕಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಉಳಿಯುವುದು ಕಷ್ಟವಾಗಿದೆ. ಹೀಗಾಗಿ ನಮ್ಮೂರಿನತ್ತ ತೆರಳುತ್ತಿದ್ದೇವೆ ಎಂದು ಒಡಿಸ್ಸಾ ಮೂಲದ ಕಾರ್ಮಿಕರು ಹೇಳಿದರು.
 

click me!