ಸರ್ಕಾರಿ ಗುತ್ತಿಗೆ ವೈದ್ಯರ ಮುಷ್ಕರ ಹಾಗೂ ಆಶಾ ಕಾರ್ಯಕರ್ತೆಯರ ಮುಷ್ಕರದ ನಡುವೆಯೇ ಕೊರೋನಾ ಪಿಡುಗಿನ ಸಂದರ್ಭದಲ್ಲಿ ಸರ್ಕಾರಕ್ಕೆ 3ನೇ ಸವಾಲು ಎದುರಾಗಿದೆ. ವೇತನ ತಾರತಮ್ಯ ಬಗೆಹರಿಸುವಂತೆ ಹಾಗೂ ಖಾಸಗಿ ‘ಆಯುಷ್’ ವೈದ್ಯರಿಗೂ ತುರ್ತು ಪರಿಸ್ಥಿತಿಯಲ್ಲಿ ಅಲೋಪತಿ ಔಷಧ ನೀಡಲು ಅವಕಾಶ ನೀಡುವಂತೆ ಒತ್ತಾಯಿಸಿ ರಾಜ್ಯದ 2 ಸಾವಿರ ಮಂದಿ ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು(ಜು.17): ಸರ್ಕಾರಿ ಗುತ್ತಿಗೆ ವೈದ್ಯರ ಮುಷ್ಕರ ಹಾಗೂ ಆಶಾ ಕಾರ್ಯಕರ್ತೆಯರ ಮುಷ್ಕರದ ನಡುವೆಯೇ ಕೊರೋನಾ ಪಿಡುಗಿನ ಸಂದರ್ಭದಲ್ಲಿ ಸರ್ಕಾರಕ್ಕೆ 3ನೇ ಸವಾಲು ಎದುರಾಗಿದೆ. ವೇತನ ತಾರತಮ್ಯ ಬಗೆಹರಿಸುವಂತೆ ಹಾಗೂ ಖಾಸಗಿ ‘ಆಯುಷ್’ ವೈದ್ಯರಿಗೂ ತುರ್ತು ಪರಿಸ್ಥಿತಿಯಲ್ಲಿ ಅಲೋಪತಿ ಔಷಧ ನೀಡಲು ಅವಕಾಶ ನೀಡುವಂತೆ ಒತ್ತಾಯಿಸಿ ರಾಜ್ಯದ 2 ಸಾವಿರ ಮಂದಿ ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ರಾಜ್ಯಾದ್ಯಂತ 20 ಸಾವಿರಕ್ಕೂ ಹೆಚ್ಚು ಖಾಸಗಿ ಆಯುಷ್ ಕ್ಲಿನಿಕ್‌ಗಳನ್ನು ಮುಚ್ಚಿ ಅನಿರ್ದಿಷ್ಟಾವಧಿ ಸೇವಾ ಬಹಿಷ್ಕಾರ ಮುಂದುವರೆಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸೇವೆಯಿಂದ ಬಹುತೇಕ ಆಯುಷ್ ವೈದ್ಯರು ಹಿಂದೆ ಸರಿದಿದ್ದು, ವೈದ್ಯ ಸಿಬ್ಬಂದಿ ಕೊರತೆ ಮತ್ತಷ್ಟುಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಚಿಕಿತ್ಸೆ ನಿರಾಕರಿಸಿದರೆ 1 ವರ್ಷ ಜೈಲು ಶಿಕ್ಷೆ..!
‘ಬುಧವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರನ್ನು ಭೇಟಿ ಮಾಡಿ ಎಲ್ಲ ವೈದ್ಯರ ರಾಜೀನಾಮೆ ಪತ್ರ ನೀಡಿದ್ದೇವೆ. ಅವರು ರಾಜೀನಾಮೆ ಅಂಗೀಕರಿಸಲು ಒಪ್ಪಿಲ್ಲ. ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿ ನಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೂ ನಮ್ಮ ಸೇವೆ ಬಹಿಷ್ಕರಿಸಿದ್ದೇವೆ’ ಎಂದು ಭಾರತೀಯ ಆಯುಷ್ ವೈದ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎನ್. ಮಗದುಂ ತಿಳಿಸಿದ್ದಾರೆ.
ಬೇಡಿಕೆ ಏನು?:
ರಾಜ್ಯ ಸರ್ಕಾರವು 2 ಸಾವಿರ ‘ಆಯುಷ್’ (ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ) ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು 20 ಸಾವಿರ ವೇತನ ನೀಡಿ ಕೊರೋನಾ ನಿಯಂತ್ರಣ ಹಾಗೂ ಚಿಕಿತ್ಸೆ ಕೆಲಸ ಮಾಡಿಸುತ್ತಿದೆ. ಅಲೋಪತಿ ವೈದ್ಯರಿಗೆ 60 ಸಾವಿರ ವೇತನ ನೀಡುತ್ತಿದೆ. ಈ ವೇತನ ತಾರತಮ್ಯ ಬಗೆಹರಯಬೇಕು.
ಚೀನಾ ಕಂಪನಿಯಿಂದ ನೌಕರರ ಮೇಲೇ ಕೊರೋನಾ ಲಸಿಕೆ ಪ್ರಯೋಗ!
‘ಅಲ್ಲಿಯವರೆಗೂ ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊರೋನಾ ಆರೈಕೆ ಕೇಂದ್ರ, ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ತಪಾಸಣಾ ಕೇಂದ್ರ, ಕೊರೋನಾ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಸೇವೆ ಸೇರಿದಂತೆ ಎಲ್ಲರೂ ಸೇವೆಯಿಂದ ಹಿಂದೆ ಸರಿದಿದ್ದೇವೆ. ಸರ್ಕಾರ ನೇಮಿಸಿಕೊಂಡಿರುವ 2 ಸಾವಿರ ಮಂದಿ ಆಯುಷ್ ವೈದ್ಯರಿಂದ ಸರ್ಕಾರವೇ ಅಲೋಪತಿ ಚಿಕಿತ್ಸೆ ಕೊಡಿಸುತ್ತಿದೆ. ಖಾಸಗಿ ಆಯುಷ್ ವೈದ್ಯರಿಗೆ ಅದನ್ನು ವಿಸ್ತರಿಸುತ್ತಿಲ್ಲ. ಜತೆಗೆ ಸರ್ಕಾರ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಆಯುಷ್ ವೈದ್ಯರು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರೂ ಸಮಾನ ವೇತನ ನೀಡದೆ ಶೋಷಣೆ ಮಾಡುತ್ತಿದ್ದಾರೆ. ಹೀಗಾಗಿ ರಾಜೀನಾಮೆ ನೀಡಿದ್ದೇವೆ’ ಎಂದು ಒಕ್ಕೂಟದ ರಾಜ್ಯ ಖಜಾಂಚಿ ಡಾ. ಆನಂದ ಕಿರತ್ಯಾಳ ತಿಳಿಸಿದರು.
50 ಸಾವಿರ ದಾಟಿದ ಕರ್ನಾಟಕ, ಬೆಂಗಳೂರು ಗಂಡಾಂತರ
‘2016ರಲ್ಲಿ ಕೆ.ಆರ್. ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದಾಗ ಸರ್ಕಾರಿ ಆಯುಷ್ ವೈದ್ಯರು, ಗುತ್ತಿಗೆ ವೈದ್ಯರಿಗೆ ಅಲೋಪತಿ ಚಿಕಿತ್ಸೆ ನೀಡಲು ಅವಕಾಶ ನೀಡಿದ್ದಾರೆ. ನಾವು ಪದವಿ ಪಡೆಯುವಾಗ ಶೇ.50ರಷ್ಟುಪಠ್ಯ ಅಲೋಪತಿ ಇರುತ್ತದೆ. ದೇಶದ 13 ರಾಜ್ಯಗಳಲ್ಲಿ ಅಲೋಪತಿ ಚಿಕಿತ್ಸೆ ನೀಡಲು ಅವಕಾಶ ನೀಡಲಾಗಿದೆ. ನಾವು ಕೇವಲ ಅಲೋಪತಿ ಚಿಕಿತ್ಸೆಯನ್ನೇ ಮಾಡುವುದಿಲ್ಲ. ತುರ್ತು ಅಗತ್ಯವಿದ್ದಾಗ ಕೆಲವು ಔಷಧ ನೀಡಲಾದರೂ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು.