ಮೈಕ್ರೋ ಫೈನಾನ್ಸ್ ಕಿರುಕುಳ: ಮತ್ತೆ 2 ಕುಟುಂಬಗಳು ಬೀದಿಗೆ!

Published : Feb 05, 2025, 09:34 AM IST
ಮೈಕ್ರೋ ಫೈನಾನ್ಸ್ ಕಿರುಕುಳ: ಮತ್ತೆ 2 ಕುಟುಂಬಗಳು ಬೀದಿಗೆ!

ಸಾರಾಂಶ

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬ ಮತ್ತು ಗದಗ ಜಿಲ್ಲೆ ರೋಣದ ಶ್ಯಾನಭೋಗರ ಬಡಾವಣೆಯ ವೃದ್ಧೆ ಉಷಾದೇವಿಯನ್ನು ಮನೆಯಿಂದ ಹೊರಗಟ್ಟಿ ಮನೆಗೆ ಬೀಗ ಹಾಕಲಾಗಿದೆ. 

ಕುಂದಗೋಳ/ರೋಣ(ಫೆ.05): ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮುಂದುವರಿದಿದ್ದು, ರಥಸಪ್ತಮಿಯ ದಿನದಂದು ಮತ್ತೆರಡು ಕುಟುಂಬಗಳು ಬೀದಿಗೆ ಬಂದಿವೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬ ಮತ್ತು ಗದಗ ಜಿಲ್ಲೆ ರೋಣದ ಶ್ಯಾನಭೋಗರ ಬಡಾವಣೆಯ ವೃದ್ಧೆ ಉಷಾದೇವಿಯನ್ನು ಮನೆಯಿಂದ ಹೊರಗಟ್ಟಿ ಮನೆಗೆ ಬೀಗ ಹಾಕಲಾಗಿದೆ. 

ಮೈಕ್ರೋ ಫೈನಾನ್ಸ್, ಮಧ್ಯವರ್ತಿಗಳ ಆಟಕ್ಕೆ ಜನರು ಹೈರಾಣ: ಇದು ಕಿರು ಸಾಲ ಅಲ್ಲ, ಬಡ್ಡಿ ಮಾಫಿಯಾ!

ರಾತ್ರಿ ಮನೆಗೆ ನುಗ್ಗಿ ಬೀಗ ಜಡಿದ ಸಿಬ್ಬಂದಿ: 

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿ ಬೀಗ ಜಡಿಯಲಾಗಿದೆ. ಸೋಮವಾರ ರಾತ್ರಿಯಿಂದ ಕುಟುಂಬಸ್ಥರೆಲ್ಲರೂ ಬೀದಿ ಪಾಲಾಗಿದ್ದಾರೆ. ಮೌಲಾಸಾಬ ವಿವಿಧ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಕ22 ಲಕ್ಷ ಸಾಲ ಮಾಡಿದ್ದು, ಸಾಲ ವಸೂಲಿ ಗಾರರ ಕಾಟ ತಾಳದೇ ಕಳೆದ ಕೆಲ ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದಾರೆ. ಸೋಮವಾರ ರಾತ್ರಿ ನಾಲೈದು ಜನ ಬಂದು ಮೌಲಾಸಾಬನ ತಾಯಿ, ಪತ್ನಿ, ಮಕ್ಕಳನ್ನು ಹೊರಗೆ ಹಾಕಿ ಮನಗೆ ಬೀಗ ಜಡಿದಿದ್ದಾರೆ.  ಜತೆಗೆ ಬಾಗಿಲಿಗೆ ನೋಟಿಸ್ ಕೂಡ ಅಂಟಿಸಿದ್ದಾರೆ. ನನ್ನ ಮಗ ಎಲ್ಲಿಯೋ ಹೋಗಿದ್ದಾನೆ. ಇದೀಗ ಫೈನಾನ್ಸ್‌ನವರು ನಮ್ಮನ್ನೆಲ್ಲ ಮನೆಯಿಂದ ಹೊರಗೆ ಹಾಕಿದ್ದಾರೆ. ನಾವೆಲ್ಲರೂ ನೆಂಟರ ಮನೆಯಲ್ಲಿದ್ದೇವೆ ಎಂದು ತಾಯಿ ಮಾಬೂಬಿ ಅಳಲು ತೋಡಿಕೊಂಡಿದ್ದಾರೆ.

ಮೈಕ್ರೋ ಫೈನಾನ್ಸ್ ಕಾಟಕ್ಕೆ ಕರ್ನಾಟಕದಲ್ಲಿ ಮತ್ತೆ 4 ಬಲಿ!

ಇನ್ನು ಸಹೋದರನ ಅನಾರೋಗ್ಯ ಹಿನ್ನೆಲೆಯಲ್ಲಿ ಪಡೆದಿದ್ದ 10 ಸಾವಿರ ಕೈಗಡ ವಾಪಸ್ ನೀಡದ ಕಾರಣ ಸಾಲ ಕೊಟ್ಟ ವ್ಯಕ್ತಿ ವೃದ್ಧೆ ಉಷಾದೇವಿಯನ್ನು ಮನೆಯಿಂದ ಹೊರಗಟ್ಟಿ ಬೀಗ ಹಾಕಲಾಗಿದೆ. ಗದಗ ಜಿಲ್ಲೆಯ ರೋಣದ ಶ್ಯಾನ ಭೋಗರ ಬಡಾವಣೆ ನಿವಾಸಿ ಉಷಾದೇವಿ ಸಂಕಷ್ಟಕ್ಕೆ ಸಿಲುಕಿದ್ದರು. 14 ತಿಂಗಳ ಹಿಂದೆ ಉಷಾದೇವಿ ಮನೆ ಹತ್ತಿರದ ನಿವಾಸಿ ಲಾರಿ ಚಾಲಕ ಮೌಲಾಸಾಬ್ ಬೇಟಗೇರಿ ಬಳಿ ₹10 ಸಾವಿರ ಕೈಗಡ ಪಡೆದಿದ್ದರು. 4 ತಿಂಗಳಲ್ಲಿ ಕೊಡುತ್ತೇನೆ ಎಂದಿದ್ದರು. ಎರಡು ಕುಟುಂಬ ಮಧ್ಯೆ ಮಾತಿನ ಚಕಮಕಿ ನಡೆದು, ಮೌಲಾಸಾಬ ಬಾಂಡ್ ಬರೆದು ಕೊಡಿ ಇಲ್ಲ ಮನೆ ಖಾಲಿ ಮಾಡಿ ಎಂದು ಬಲವಂತದಿಂದ ವೃದ್ಧೆ ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಹಾಕಿದರು. ಪೊಲೀಸರು ಮಧ್ಯಪ್ರವೇಶಿಸಿ ಮನೆಗೆ ಹಾಕಿದ್ದ ಬೀಗ ತೆಗೆಸಿ ವೃದ್ಧೆಗೆ ಮನೆಯಲ್ಲಿ ವಾಸಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಟ್ರೋ ಟಿಕೆಟ್ ದರ ಸೋಮವಾರದಿಂದ ಮತ್ತೆ ಏರಿಕೆ;  ಗ್ಯಾರಂಟಿ ಹೊರೆ ನಮ್ಮೇಲೆ ಹಾಕ್ತೀರಾ? ಪ್ರಯಾಣಿಕರು ಆಕ್ರೋಶ!
ಪುನೀತ್ ಕೆರೆಹಳ್ಳಿ ಮಾಡಿದ್ದು ಅಪರಾಧವೋ ಅಥವಾ ಸರ್ಕಾರದ ಕೆಲಸವೋ? ಅಕ್ರಮ ವಲಸಿಗರ ವಿಚಾರದಲ್ಲಿ ಪೊಲೀಸರಿಗೆ ಹೈಕೋರ್ಟ್ ತಪರಾಕಿ!