ಬೆಳ್ಳಂಬೆಳಗ್ಗೆ ಭ್ರಷ್ಟರ ಚಳಿ ಬಿಡಿಸಿದ ಅಧಿಕಾರಿಗಳು: ರಾಜ್ಯಾದ್ಯಾಂತ ಬೃಹತ್ ಐಟಿ ರೇಡ್

Published : Feb 05, 2025, 08:12 AM IST
ಬೆಳ್ಳಂಬೆಳಗ್ಗೆ ಭ್ರಷ್ಟರ ಚಳಿ ಬಿಡಿಸಿದ ಅಧಿಕಾರಿಗಳು: ರಾಜ್ಯಾದ್ಯಾಂತ ಬೃಹತ್ ಐಟಿ ರೇಡ್

ಸಾರಾಂಶ

ಆದಾಯ ತೆರಿಗೆ ವಂಚನೆ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದೆಹಲಿ, ಚೆನೈ, ಗೋವಾ,ಕೋಲ್ಕತ್ತಾದಿಂದ ಅಧಿಕಾರಿಗಳು ಬಂದಿದ್ದಾರೆ. ಬೆಳಗ್ಗೆ 5 ಗಂಟೆಗೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು ಭ್ರಷ್ಟರಿಗೆ ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. 

ಬೆಂಗಳೂರು(ಫೆ.05):  ಬೆಂಗಳೂರು, ಮೈಸೂರು, ಮಂಡ್ಯ, ಆರ್.ಟಿ.ನಗರ, ಇಳವಾಲ, ರಾಮಕೃಷ್ಣ ಸೇರಿದಂತೆ 30 ಕಡೆ ಇಂದು(ಬುಧವಾರ) ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿಗಳು, ಬಿಲ್ಡರ್‌ಗಳ ಮನೆ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. 

ಮನೆ, ಕಚೇರಿ, ಕಲ್ಯಾಣ ಮಂಟಪ ಸೇರಿ ಎಲ್ಲಾ ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳು ಸುಮಾರು 90 ವಾಹನಗಳಲ್ಲಿ ಹೋಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮನೆ, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. 

ದೇಶದ ಅತಿದೊಡ್ಡ ಐಟಿ ದಾಳಿ; 10 ದಿನ ಪರಿಶೀಲನೆ, ಹಣ ಎಣಿಕೆಗಾಗಿ 36 ಯಂತ್ರಗಳ ಬಳಕೆ; ಸಿಕ್ಕ ನಗದು ಎಷ್ಟು?

ಆದಾಯ ತೆರಿಗೆ ವಂಚನೆ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದೆಹಲಿ, ಚೆನೈ, ಗೋವಾ,ಕೋಲ್ಕತ್ತಾದಿಂದ ಅಧಿಕಾರಿಗಳು ಬಂದಿದ್ದಾರೆ. ಬೆಳಗ್ಗೆ 5 ಗಂಟೆಗೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು ಭ್ರಷ್ಟರಿಗೆ ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. 

ದೊಡ್ಡ ಪ್ರಮಾಣದಲ್ಲಿ ಐಟಿ ದಾಳಿ ನಡೆದಿದ್ದು ಮನೆ ಕಚೇರಿಗಳ ಶೋಧ ಕಾರ್ಯ ನಡೆಸಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗುವ ರೀತಿ ಕಾರ್ ಗಳನ್ನು ಸಿಂಗರಿಸಿಕೊಂಡು ಬಂದು ದಾಳಿ ನಡೆಸಲಾಗಿದೆ. ಮಾಹಿತಿ ಸೋರಿಕೆಯಾದ ಹಿನ್ನಲೆಯಲ್ಲಿ ಮದುವೆಗೆ ಹೋಗುವ ಕಾರ್ ರೀತಿ ಸಿಂಗರಿಸಿ ದಾಳಿ ನಡೆಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಳ್ಳಾರಿ: ಮನೆಯಿಂದ 10 ಕಿಲೋಮೀಟರ್‌ ದೂರ ಇರುವಾಗ ಅಪಘಾತ, ಒಂದೇ ಕುಟುಂಬದ ಮೂವರ ಸಾವು!
ದರ್ಶನ್ ಬಳಿಕ ಅಭಿಮಾನಿಗಳ ಅಶ್ಲೀಲ ಕಾಮೆಂಟ್‌ಗೆ ವಿಜಯಲಕ್ಷ್ಮಿ ಕೆಂಡಾಮಂಡಲ; 150 ಫೊಟೋ ಸಮೇತ ದೂರು!