ಬೆಂಗಳೂರು (ಜು.01): ಕೊರೋನಾ ಹೋರಾಟದಲ್ಲಿ ಹುತಾತ್ಮರಾದ ವೈದ್ಯರ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುಧಾಕರ್ ಶೀಘ್ರದಲ್ಲೇ ಹುತಾತ್ಮರಾದ ವೈದ್ಯರ ಸ್ಮಾರಕ ನಿರ್ಮಾಣ ಮಾಡುತ್ತೇವೆ. ಆರೋಗ್ಯ ಇಲಾಖೆಯ ಆವರಣದಲ್ಲೇ ಈ ಸ್ಮಾರಕ ನಿರ್ಮಿಸುತ್ತೇವೆ. ಸ್ವಾತಂತ್ರ್ಯ ಹೋರಾಟಗಾರರ ಹೇಗೆ ನೆನೆಯುತ್ತೇವೋ ಅದೇ ರೀತಿ ಕೊರೋನಾದಿಂದ ಜೀವ ಕಳೆದುಕೊಂಡ ವೈದ್ಯರನ್ನ ನೆನೆಯಬೇಕು ಎಂದರು.
undefined
ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ: ಸಚಿವ ಸುಧಾಕರ್ ಹೇಳಿದ್ದಿಷ್ಟು .
ಹೀಗಾಗಿ ಹುತಾತ್ಮ ವೈದ್ಯರ ನೆನಪಿನಾರ್ಥ ಸ್ಮಾರಕ ಮಾಡುತ್ತೇವೆ. ಕೆಲವೇ ವಾರದಲ್ಲೇ ಅದರ ವಿನ್ಯಾಸ ರಚನೆ ಪೂರ್ಣಗೊಳಿಸಲಾಗುತ್ತದೆ. ವರ್ಷದಲ್ಲಿ ಒಂದು ದಿನ ಹುತಾತ್ಮ ವೈದ್ಯರ ಸ್ಮರಣೆ ಮಾಡುವ ಕಾರ್ಯಕ್ರಮ ಕೂಡ ಮಾಡಲಾಗತ್ತದೆ ಎಂದು ಸುಧಾಕರ್ ಹೇಳಿದರು.
ವೈದ್ಯರ ಮೇಲೆ ಹಲ್ಲೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ : ನಮ್ಮಲ್ಲಿ ಕೆಲವು ಕಠಿಣ ರೂಲ್ಸ್‌ಗಳಿವೆ. ಅನೇಕ ಸಂದರ್ಭದಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ವೈದ್ಯರ ಮೇಲೆ ಹಲ್ಲೆ ನಡೆಯುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆರೋಗ್ಯ ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಬೇಡಿ ಎಂದು ಸಚಿವರು ಹೇಳಿದರು.
ಡಾ.ಬಿ.ಸಿ.ರಾಯ್ ಸ್ಮರಣಾರ್ಥ ವೈದ್ಯರ ದಿನ : ಡಾ.ಬಿ.ಸಿ.ರಾಯ್ ಅವರ ಮೌಲ್ಯ, ವ್ಯವಸ್ಥೆಗಳು ಚಿರಕಾಲ ಉಳಿಯುವಂತದ್ದು. ಅವರ ಸ್ಮರಣಾರ್ಥ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದಲ್ಲಿ ಮೊದಲ ಮೆಂಟಲ್ ಹೆಲ್ತ್ ಇನ್ಸ್ಟಿಟ್ಯೂಷನ್ ಸ್ಥಾಪಿಸಿದ ಹೆಗ್ಗಳಿಕೆ ಬಿ.ಸಿ.ರಾಯ್ ಅವರದ್ದು. ವೈದ್ಯಕೀಯ ಜಗತ್ತಿಗೆ ಅವರ ಕೊಡುಗೆ ಅಮೋಘವಾದುದು ಎಂದರು.
ನಮ್ಮ ಜೀವ, ನೀವು ಉಳಿಸಿದ ಸಂಪತ್ತು: ಜೀವರಕ್ಷಕ ವೈದ್ಯರೇ ನಿಮಗೆ ಸಲಾಮ್! ...
ವೈದ್ಯೋ ನಾರಾಯಣ ಹರಿ ಎಂಬ ವಿಶೇಷ ಸ್ಥಾನಮಾನ ನಮ್ಮ ಸಮಾಜದಲ್ಲಿ ಇದೆ. ವೈದ್ಯ ವೃತ್ತಿ ನೋಬಲೆಸ್ಟ್ ವೃತ್ತಿ. ಪರರಿಗಾಗಿ, ಅವರ ಆರೋಗ್ಯಕ್ಕಾಗಿ ವೃತ್ತಿ ನಿಷ್ಠೆ ಮೆರೆದವರು ವೈದ್ಯರು. ಈಡಿ ದೇಶದಲ್ಲಿ 800 ಕ್ಕೂ ಹೆಚ್ಚು ವೈದ್ಯರು ಮಹಾಮಾರಿಗೆ ಬಲಿಯಾಗಿದ್ದಾರೆ.
ವೈದ್ಯರು, ದಾದಿಯರನ್ನು ಕೊರೋನಾ ವಾರಿಯರ್ಸ್ ಎಂದು ಪ್ರಧಾನಿ ಘೋಷಿಸಿದ್ದಾರೆ. ವೈದ್ಯರು, ಯೋಧರೆಂದು ಘೋಷಿಸಲಾಗಿದೆ, ಹೀಗಾಗಿ ಕೋವಿಡ್ ಗೆ ಬಲಿಯಾದ ಹುತಾತ್ಮ ವೈದ್ಯರಿಗೆ ನಮಿಸಬೇಕು. ಸಿಎಂ ನೇತೃತ್ವದಲ್ಲಿ ವೈದ್ಯಕೀಯ ಭತ್ಯೆಗಳ ಹೆಚ್ಚಳ ಆಗಿದೆ. ನೇರ ನೇಮಕಾತಿ ಪ್ರಕ್ರಿಯೆ ಇತಿಹಾಸದಲ್ಲಿ ಮೊದಲ ಬಾರಿಗೆ ನೇಮಿಸಲಾಗಿದೆ ಎಂದರು.
1 ಸಾವಿರ ವೈದ್ಯರನ್ನು ವೈದ್ಯಕೀಯ ಶಿಕ್ಷಣ ಇಲಾಖೆ, 1500 ವೈದ್ಯರನ್ನು ಆರೋಗ್ಯ ಇಲಾಖೆಯಡಿ ನೇಮಿಸಲಾಗಿದೆ. ಖಾಸಗಿ ವಲಯ ಕೂಡ ಶ್ರಮಿಸಿದೆ. ಕಠಿಣ ಸಂದರ್ಭದಲ್ಲಿ ಅಧಿಕ ಬಿಲ್ ವಸೂಲಿ ಮಾಡುವ ಮೂಲಕ ಕೆಲ ಖಾಸಗಿ ಆಸ್ಪತ್ರೆಗಳು ಟೀಕೆಗೆ ಕಾರಣವಾಗಿದೆ. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಕೆಲ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ, ಇದು ಖಂಡನೀಯ ಎಂದರು.
ಡಾ. ಬಿಸಿ ರಾಯ್ ನೆನಪಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ! ...
ರಾಜ್ಯದಲ್ಲಿ ಲಸಿಕೆ ಕೊರತೆ ವಿಚಾರ : ಸಿದ್ದರಾಮಯ್ಯ ವಿರುದ್ದ ಸುಧಕಾರ್ ಆಕ್ರೋಶ ವ್ಯಕ್ತಪಡಿಸಿದ ಸುಧಾಕರ್ ರಾಜ್ಯದಲ್ಲಿ ಈವರಗೆ 2 ಕೋಟಿ 28 ಲಕ್ಷ ಲಸಿಕೆ ಕೊಟ್ಟಿದ್ದೇವೆ. ಲಸಿಕೆ ಕೊರತೆ ಇದ್ದರೆ ಇಷ್ಟು ಲಸಿಕೆ ಕೊಡಲು ಆಗುತ್ತಿತ್ತಾ?
ಇದರಲ್ಲಿ ನಾವು ಸುಳ್ಳು ಹೇಳೋಕೆ ಆಗುತ್ತಾ? ಕಾಂಗ್ರೆಸ್ ನವರು ಮೊದಲಿನಿಂದಲೂ ಅನಗತ್ಯ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡ್ತಿದ್ದಾರೆ.
ಕಾಂಗ್ರೆಸ್ ಲಸಿಕೆ ಯಲ್ಲಿ ರಾಜಕೀಯ ಮಾಡಬಾರದು. ಒಂದೆರಡು ದಿನ ಕಡಿಮೆ ಲಸಿಕೆ ಬಂದಿರಬಹುದು. ಆದರೆ ಲಸಿಕೆ ಇಲ್ಲ ಎಂದು ಹೇಳುವುದು ಸರಿಯಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಲಸಿಕೆ ಕೊಟ್ಟಿರೋದು ಭಾರತ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ನಾನು ಸೋಮವಾರ ದೆಹಲಿಗೆ ತೆರಳುತ್ತಿದ್ದೇನೆ. ಲಸಿಕೆ ಹೆಚ್ಚಳ ಮಾಡಲು ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಇಂದು ರಾಜ್ಯಕ್ಕೆ 9 ಲಕ್ಷ ಕೋವಿಶೀಲ್ಡ್ ಬರುತ್ತಿದೆ. ಸುಮ್ಮನೆ ಮಾಹಿತಿ ಇಲ್ಲದೆ ಕಾಂಗ್ರೆಸ್ ನವರು ರಾಜಕೀಯ ಮಾಡುವುದು ಬೇಡ ಎಂದು ಕಾಂಗ್ರೆಸ್ ವಿರುದ್ದ ಸುಧಾಕರ್ ಕಿಡಿ ಕಾರಿದರು.
ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು : ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸಚಿವರ ಮೇಲೆ ಎಫ್ ಐಆರ್ ಹಾಕಬೇಕು ಎನ್ನುವ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದರು.
ಎಫ್ ಐಆರ್ ಮಾಡಲಿ ಯಾರು ಬೇಡ ಎಂದಿದ್ದಾರೆ. ಎಫ್ ಐಆರ್ ಮಾಡಿಸಲಿ ಎಂದು ಸಚಿವ ಸುಧಾಕರ್ ಸವಾಲು ಹಾಕಿದರು.