ರಾಮ ಮಂದಿರ ಉದ್ಘಾಟನೆ ದಿನ ಮದ್ಯ, ಮಾಂಸ ಮಾರಾಟ ನಿಷೇಧಿಸಿ; ಶ್ರೀರಾಮ ಸೇನೆ ವಿಶೇಷ ಅಭಿಯಾನ

By Sathish Kumar KHFirst Published Jan 18, 2024, 11:24 AM IST
Highlights

ಆಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯ ಜ.22ರಂದು ರಾಜ್ಯಾದ್ಯಂತ ಮಾಂಸ ಹಾಗೂ ಮದ್ಯ ಮಾರಾಟ ನಿಷೇಧಿಸುವಂತೆ ಶ್ರೀರಾಮ ಸೇನೆಯಿಂದ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ.

ಬೆಂಗಳೂರು (ಜ.18): ದೇಶದ ಎಲ್ಲ ಹಿಂದೂಗಳ ಆರಾಧ್ಯ ದೈವವಾಗಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯನ್ನು ಅಯೋಧ್ಯೆ ರಾಮಮಂದಿರದಲ್ಲಿ ನೆರವೇರಿಸುವ ಜ.22ರಂದು ಕರ್ನಾಟಕದಲ್ಲಿಯೂ ಮಾಂಸ ಮತ್ತು ಮದ್ಯಾ ಮಾರಾಟ ನಿಷೇಧಿಸಬೇಕು ಎಂದು ಶ್ರೀರಾಮ ಸೇನೆಯಿಂದ ಆಭಿಯಾನವನ್ನು ಆರಂಭಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 500 ವರ್ಷಗಳ ಬಳಿಕ ಬೃಹತ್ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಇನ್ನು ನಾಲ್ಕು ದಿನಗಳಲ್ಲಿ (ಜ.22ರ ಸೋಮವಾರ) ಮಂದಿರದಲ್ಲಿ ರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದು ಜಗತ್ತಿನ 100 ಕೋಟಿಗೂ ಅಧಿಕ ಹಿಂದೂಗಳ ಸಂತಸ ಹಾಗೂ ಭಾವೈಕ್ಯತೆಯ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಆದ್ದರಿಂದ ಜ.22ರಂದು ಈಗಾಗಲೇ ಉತ್ತರ ಪ್ರದೇಶ ರಾಜ್ಯಾದ್ಯಂತ ಮಾಂಸ ಹಾಗೂ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.

Latest Videos

ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಸೇವೆ ಪ್ರಾರಂಭ

ಇನ್ನು ಉತ್ತರ ಪ್ರದೇಶ ರಾಜ್ಯದ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಜ.22ರ ರಾಮೋತ್ಸವದ ದಿನದಂದು ಮಾಂಸ ಹಾಗೂ ಮದ್ಯಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಶ್ರೀರಾಮ ಸೇನೆಯ ವತಿಯಿಂದ ಅಭಿಯಾನವನ್ನು ಆರಂಭಿಸಲಾಗಿದೆ. ಇನ್ನು ರಾಜ್ಯಾದ್ಯಂತ ಶ್ರೀರಾಮ ಸೇನೆ ವತಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ನಗರ ಪಟ್ಟಣಗಳಲ್ಲಿ ಶ್ರೀರಾಮ ಮಂದಿರ ಉದ್ಘಾಟನಾ ದಿನದಂದು ಮಾಂಸ, ಮದ್ಯ ಮಾರಾಟ ನಿಷೇಧ ಮಾಡಬೇಕು ಎಂದು ಅಭಿಯಾನ ಆರಂಭಿಸಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ. ಇಂದು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಶ್ರೀರಾಮ ಸೇನೆಯು ಶ್ರೀರಾಮೋತ್ಸವದ ವೇಳೆ ಮದ್ಯ, ಮಾಂಸ ಸೇವನೆಯನ್ನು ವರ್ಜಿಸಬೇಕು ಎಂದು ಜಾಗೃತಿ ಅಭಿಯಾನ ಮಾಡಲಾಗುತ್ತಿದೆ.

ಅಯೋಧ್ಯೆ ಶ್ರೀರಾಮನನ್ನು ನೋಡಿದರೆ, ಟೂರಿಂಗ್ ಟಾಕೀಸಿನಲ್ಲಿರೋ ಗೊಂಬೆ ಅನಿಸ್ತಿದೆ: ಸಚಿವ ಕೆ.ಎನ್. ರಾಜಣ್ಣ

ಮಾಂಸದಂಗಡಿ, ಬಾರ್‌ಗಳಿಗೆ ತೆರಳಿ ಜಾಗೃತಿ: ಶ್ರೀರಾಮಸೇನೆ ಬೆಂಗಳೂರು ಘಟಕದಿಂದ ಜಾಗೃತಿ ಅಭಿಯಾನ ಆರಂಭಿಸಲಾಗಿದ್ದು, ಇದೇ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮಾಂಸದ ಅಂಗಡಿ, ಬಾರ್ ಗಳನ್ನ ಬಂದ್ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಾಲಹಳ್ಳಿ, ದಾಸರಹಳ್ಳಿ ಭಾಗದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರಿಂದ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ. ಈ ವೇಳೆ ಕರಪತ್ರಗಳನ್ನ ಹಂಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬಾರ್ ಹಾಗೂ ಮಾಂಸದ ಅಂಗಡಿಗಳಿಗೆ ತೆರಳಿ ಸ್ವಯಂ ಆಗಿ ಬಂದ್ ಮಾಡುವಂತೆ ಕರಪತ್ರ ಹಂಚಲಾಗುತ್ತಿದೆ.

click me!