ಪೊಲೀಸರು ಹಿಂದೆ ಸರಿದರೆ ಕನ್ನಡ ಸಂಘಟನೆಯ ಮುಖಂಡರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಎಂಇಎಸ್ ಮುಖಂಡ ಮಾಳೋಜಿರಾವ್ ಅಷ್ಟೆಕರ ವಿವಾದಾತ್ಮಕ ಹೇಳಿಕೆ ನೀಡಿದರು.
ಬೆಳಗಾವಿ (ಜ.18): ಪೊಲೀಸರು ಹಿಂದೆ ಸರಿದರೆ ಕನ್ನಡ ಸಂಘಟನೆಯ ಮುಖಂಡರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಎಂಇಎಸ್ ಮುಖಂಡ ಮಾಳೋಜಿರಾವ್ ಅಷ್ಟೆಕರ ವಿವಾದಾತ್ಮಕ ಹೇಳಿಕೆ ನೀಡಿದರು. ನಗರದ ಹುತಾತ್ಮಚೌಕ ಬಳಿ ಎಂಇಎಸ್ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಹುತಾತ್ಮ ದಿನಾಚರಣೆಯ ಮೌನ ಮೆರವಣಿಗೆ ಮಾಡಿ ಅವರು ಮಾತನಾಡಿದರು.
ಮರಾಠಿ ಭಾಷಿಕರ ಮೇಲೆ ನಿರಂತರವಾಗಿ ಜಿಲ್ಲಾಡಳಿತದಿಂದ ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಮರಾಠಿಗರಿಗೆ ತೊಂದರೆ ನೀಡುತ್ತಿದ್ದಾರೆ. ಬೆಳಗಾವಿಯಲ್ಲಿ ಮರಾಠಿಗರ ಉಳಿವಿಗಾಗಿ ಕಳೆದ 70 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ ಕೆಲ ಕನ್ನಡ ಸಂಘಟನೆಗಳು ನಮ್ಮ ವ್ಯಾಪಾರ ವಹಿವಾಟು ಹಾಗೂ ಎಂಇಎಸ್ ಮುಖಂಡರ ಮೇಲೆ ಮರಾಠಿ ಭಾಷೆಯ ನಾಮಫಲಕ ತೆರವುಗೊಳಿಸುವಂತೆ ಪೊಲೀಸರ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದರು.
ಕೊಲ್ಲಾಪುರ ಅಂಗಡಿಗಳ ಕನ್ನಡ ಫಲಕಕ್ಕೆ ಶಿವಸೇನೆಯಿಂದ ಬೆಂಕಿ: ಉದ್ಧಟತನ ಪ್ರದರ್ಶನ!
ಕನ್ನಡ ಸಂಘಟನೆಗಳಿಗೆ ಪೊಲೀಸ್ ರಕ್ಷಣೆ ಇಲ್ಲದಿದ್ದರೆ ಸಂಘಟನೆಗಳ ಮುಖಂಡರನ್ನು ಎದುರಿಸುವ ಶಕ್ತಿ ನಮಗೆ ಇದೆ. ನಮಲ್ಲಿ ಬಲ ಇದೆ ಎಂದು ಉದ್ಧಟನ ಮೆರೆದರು. ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿರುವ ಫುಲೆ ಆರೋಗ್ಯ ಯೋಜನೆಗೂ ಕರ್ನಾಟಕ ಸರ್ಕಾರ ತಗಾದೆ ತೆಗೆದಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ರಮಾಕಾಂತ ಕೊಂಡುಸ್ಕರ್, ರಂಜೀತ ಚೌಹಾಣ ಪಾಟೀಲ, ಮದನ ಭಾಮನೆ, ಪ್ರಕಾಶ ಶಿರೋಳ್ಕರ್, ಬಂಡು ಕೇಳವಾಡ್ಕರ್, ಮಾಜಿ ಮೇಯರ್ ಸರೀತಾ ಪಾಟೀಲ, ರೇಣು ಕಿಲ್ಲೇಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕನ್ನಡ ಕಾರ್ಯಕರ್ತನ ಪೋಟೊ ಎಡಿಟ್ ಮಾಡಿ ವೈರಲ್: ಕನ್ನಡಪರ ಸಂಘಟನೆ ಕಾರ್ಯಕರ್ತರೊಬ್ಬರ ಫೋಟೊವನ್ನು ಎಡಿಟ್ ಮಾಡಿ ಫೋಟೊಗೆ ಕಿವಿಯೋಲೆ, ಮೂಗುತಿ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಎಂಇಎಸ್ ಉದ್ಧಟತನ ಪ್ರದರ್ಶನ ಮಾಡಿದೆ. ಕರುನಾಡು ವಿಜಯಸೇನೆ ಜಿಲ್ಲಾಧ್ಯಕ್ಷ ಸಂಪತ್ ದೇಸಾಯಿ ಫೋಟೊ ಎಡಿಟ್ ಮಾಡಿ ವೈರಲ್ ಮಾಡಿದೆ.
ಡಿಸಿಎಂ ಹುದ್ದೆಗಾಗಿ ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
ಅಲ್ಲದೇ ಮೆಸೆಂಜರ್‌ಗೆ ಅಸಭ್ಯ ಸಂದೇಶ ರವಾನಿಸಿ ಜೀವ ಬೆದರಿಕೆ ಹಾಕಿದ್ದು, ನಾಡದ್ರೋಹಿ ಎಂಇಎಸ್ ಕಾರ್ಯಕರ್ತರ ಈ ಕೃತ್ಯಕ್ಕೆ ಕನ್ನಡಪರ ಸಂಘಟನೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಾಮಫಲಕಗಳಿಗೆ ಶೇ. 60ರಷ್ಟು ಕನ್ನಡ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಎಂಇಎಸ್ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು. ಎಂಇಎಸ್ ನಡೆ ಖಂಡಿಸಿ ಅದೇ ದಿನ ಜಿಲ್ಲಾಧಿಕಾರಿ ಕಚೇರಿ ಒಳಗೆ ಸಂಪತ್ ದೇಸಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.