
ಬೆಂಗಳೂರು (ಮಾ.12): ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (Karnataka State Road Transport Corporation) ಇನ್ನೊಂದು ಪ್ರಶಸ್ತಿಗೆ ಭಾಜನವಾಗಿದೆ. ಸಿಬ್ಬಂದಿಗಳ ಆನ್ ಲೈನ್ ಇ-ನಾಮಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಕಾರಣಕ್ಕಾಗಿ ಆಜಾದಿ ಕಾ ಅಮೃತ್ ಮಹೋತ್ಸವ (Azadi ka Ka Amruth Mahostav) ಪ್ರಶಸ್ತಿಯನ್ನು ಕೆಎಸ್‌ಆರ್‌ಟಿಸಿಯ (KSRTC) ಮಂಗಳೂರು (Manglore) ವಿಭಾಗಕ್ಕೆ ನೀಡಲಾಗಿದೆ.
ಅಸ್ಸಾಂ ನ ರಾಜಧಾನಿ ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವರ್ಚುವಲ್ ಆಗಿ ಪ್ರಧಾನ ಮಾಡಲಾಗಿದೆ. ಪ್ರತಿಷ್ಠಿತ ಎಕೆಎಎಂ ಪ್ರಶಸ್ತಿಯನ್ನು ಕೆಎಸ್ ಆರ್ ಟಿಸಿಯ ಮಂಗಳೂರು ವಿಭಾಗ ಜಯಿಸಿದೆ. ಕಾರ್ಮಿಕ ಇಲಾಖೆಯ ಇಪಿಎಫ್ ಆನ್ ಲೈನ್ ಇ-ನಾಮಿನೇಷನ್ ಅನ್ನು ಮಂಗಳೂರು ವಿಭಾಗದ ಎಲ್ಲಾ ಸಿಬ್ಬಂದಿಗೆ ಪೂರ್ಣಗೊಳಿಸುವ ಮೂಲಕ ರಾಷ್ಟ್ರಮಟ್ಟದ ಎಕೆಎಎಂ ಪ್ರಶಸ್ತಿಯನ್ನು ಜಯಿಸಿದೆ. ಈ ಪ್ರಶಸ್ತಿಯನ್ನು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಭೂಪೇಂದರ್ ಯಾದವ್ ಪ್ರದಾನ ಮಾಡಿದರು. ಮಂಗಳೂರು ಕೆಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ,ಅರುಣ ಎಸ್.ಎನ್ ಅವರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಅಖಿಲ ಭಾರತ ಮಟ್ಟದಲ್ಲಿ ಆಯ್ಕೆಯಾದ ಮೊದಲ 3 ಅಗ್ರ ಸ್ಥಾನಗಳಲ್ಲಿ ಮಂಗಳೂರು ವಿಭಾಗವೂ ಒಂದಾಗಿತ್ತು.
ಜಂಟಿ ಸಿಜಿಎ ಜಸ್ಪಾಲ್ ಕೌರ್ ಪ್ರದ್ಯೋತ್, ಹಣಕಾಸು ಕಾರ್ಯದರ್ಶಿ ವೈಡಬ್ಲ್ಯೂ ರಿಂಗು, ಡಿಸಿಜಿಎ ಹರ್ಷ ಎಎಚ್ ಮತ್ತು ಎಸಿಜಿಎ ನರೇಂದರ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಯೂನಿಯನ್ ಸಹಾಯಕ ನಿಯಂತ್ರಕ ಜನರಲ್ (ಪಿಎಫ್‌ಎಂಎಸ್) ಧರಿತ್ರಿ ಪಾಂಡ ಅವರು ಸೋಮವಾರ ಇಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ (ಎಕೆಎಎಂ) ವೆಬ್‌ನಾರ್ ಅನ್ನು ಉದ್ಘಾಟಿಸಿದ್ದರು.
ಕೆಎಸ್‌ಆರ್‌ಟಿಸಿಗೆ 2021ರ ಪಿಆರ್‌ಸಿಐ ಎಕ್ಸಲೆನ್ಸ್‌ನ ಐದು ಪ್ರಶಸ್ತಿ
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ(ಪಿಆರ್‌ಸಿಐ) ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ವಿನೂತನ ಉಪಕ್ರಮಗಳನ್ನು ಗುರುತಿಸಿ ಕೊಡಮಾಡುವ 2021ನೇ ಸಾಲಿನ ‘ಪಿಆರ್‌ಸಿಐ ಎಕ್‌ಸ್ಲೆನ್‌ಸ್’ ಪ್ರಶಸ್ತಿಗೆ ಕೆಎಸ್‌ಆರ್ಟಿಸಿ (KSRTC) ಐದು ವಿಭಾಗಗಳಲ್ಲಿ ಈ ಹಿಂದೆ ಭಾಜನವಾಗಿತ್ತು.
ISRO YUVIKA Programme: ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ಇಸ್ರೋದಿಂದ 150 ವಿದ್ಯಾರ್ಥಿಗಳ ಆಯ್ಕೆ
ಸಾರ್ವಜನಿಕ ವಲಯದಲ್ಲಿ ಕೋವಿಡ್ ನಿರ್ವಹಣೆಗೆ ಬೆಳ್ಳಿ ಪದಕ, ಅತ್ಯುತ್ತಮ ಸಾರ್ವಜನಿಕ ಉದ್ದಿಮೆ ಸಾಮಾಜಿಕ ಹೊಣೆಗಾರಿಕೆಯಲ್ಲಿನ ಉಪಕ್ರಮ ಅನುಷ್ಠಾನಕ್ಕೆ ಕಂಚಿನ ಪದಕ, ಆರೋಗ್ಯ ರಕ್ಷಣೆ ಸಂವಹನ ಸಾಕ್ಷ್ಯಚಿತ್ರಗಳಿಗೆ ಕಂಚಿನ ಪದಕ, ಆಂತರಿಕ ನಿಯತಕಾಲಿಕೆ ‘ಸಾರಿಗೆ ಸಂಪದ’ಕ್ಕೆ ಚಿನ್ನದ ಪದಕ ಹಾಗೂ ಕೋವಿಡ್ ಸಮಯದಲ್ಲಿನ ಗ್ರಾಹಕ ಸ್ನೇಹಿ ಉಪಕ್ರಮಕ್ಕೆ ಚಿನ್ನದ ಪದಕ ಲಭಿಸಿದೆ. 2021ರ ಸೆ.18ರಂದು ಗೋವಾದಲ್ಲಿ(Goa) ಆಯೋಜಿಸಿದ್ದ 15ನೇ ವಿಶ್ವ ಸಾರ್ವಜನಿಕ ಸಂಪರ್ಕ ಮಂಡಳಿ ಸಮ್ಮೇಳನದಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿ (Award) ಪ್ರದಾನ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ