Mann Ki Baat: ಪರಿಸರ ಕಾಳಜಿ ಜತೆಗೆ ಕನ್ನಡದ ಅರಿವು ಮೂಡಿಸುತ್ತಿರುವ ಸುರೇಶ್‌ ಕುಮಾರ್‌ ಶ್ಲಾಘಿಸಿದ ಮೋದಿ

By BK AshwinFirst Published Oct 30, 2022, 5:38 PM IST
Highlights

20 ವರ್ಷಗಳ ಹಿಂದೆ ಸುರೇಶ್‌ ಕುಮಾರ್ ಬೆಂಗಳೂರಿನ ಸಹಕಾರ ನಗರದಲ್ಲಿರುವ ಕಾಡಿಗೆ ಜೀವ ತರುವ ಪಣ ತೊಟ್ಟರು. ಈ ಕಾರ್ಯ ತೀವ್ರ ಕಷ್ಟದಿಂದ ಕೂಡಿತ್ತು. ಆದರೆ, 20 ವರ್ಷಗಳ ಹಿಂದೆ ಅವರು ನೆಟ್ಟ ಸಸಿಗಳು ಇಂದು 40 ಅಡಿಗಳಷ್ಟು ಬೆಳೆದು ದೊಡ್ಡ ಮರಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ತಮ್ಮ 94ನೇ ಮನ್‌ ಕೀ ಬಾತ್‌ (Mann Ki Baat) ವೇಳೆ ಬೆಂಗಳೂರಿನ ಸುರೇಶ್‌ ಕುಮಾರ್‌ (Suresh Kumar) ಅವರನ್ನು ಶ್ಲಾಘಿಸಿದ್ದಾರೆ. ಕನ್ನಡ (Kannada) ಕಲಾ ವೈಭವವನ್ನು ಸಾರುವ ಬಸ್ ನಿಲ್ದಾಣವನ್ನು (Bus Shelter) ನಿರ್ಮಾಣ ಮಾಡಿ ನಿತ್ಯವೂ ಕನ್ನಡ ಕಂಪನ್ನು ಪಸರಿಸುತ್ತಿರುವ ಸುರೇಶ್ ಕುಮಾರ್ ಅವರ ಪರಿಸರ (Nature), ಪರಂಪರೆ ಉಳಿವಿಗೆ ಶ್ರಮಿಸುತ್ತಿರುವ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ, ಬಿಜೆಪಿ ಹಾಗೂ ರಾಜ್ಯ ಬಿಜೆಪಿಯ ಹಲವು ನಾಯಕರು ಟ್ವೀಟ್‌ ಮಾಡಿದ್ದಾರೆ.

ಅಕ್ಟೋಬರ್ ತಿಂಗಳ ಕೊನೆಯ ಭಾನುವಾರ ಅಂದರೆ ಇಂದು ನಡೆದ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಲವು ವಿಚಾರಗಳ ಜತೆಗೆ ಬೆಂಗಳೂರಿನ ಸುರೇಶ್‌ ಕುಮಾರ್‌ ಅವರನ್ನು ಶ್ಲಾಘಿಸಿದ್ದಾರೆ. ಬಸ್‌ ನಿಲ್ದಾಣ ನಿರ್ಮಿಸಿ ಕನ್ನಡದ ಅರಿವು ಮೂಡಿಸುತ್ತಿರುವ ಸುರೇಶ್‌ ಕುಮಾರ್ ಅವರ ಕಾರ್ಯ ಶ್ಲಾಘನೀಯ ಎಂದೂ ಮೋದಿ ಹೇಳಿದ್ದಾರೆ. ಹಾಗೂ, ಅವರ ಪರಿಸರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನು ಓದಿ: Mann Ki Baat: ಬೆಂಗಳೂರಿನ ಯೂಥ್‌ ಫಾರ್‌ ಪರಿವರ್ತನ್‌ ಸಂಸ್ಥೆಗೆ ಮೋದಿ ಭೇಷ್‌

ಈ ಸಂಬಂಧ ಟ್ವೀಟ್‌ ಮಾಡಿದ ಪ್ರಧಾನಿ ಮೋದಿ, ‘’ಸುರೇಶ್ ಕುಮಾರ್ ಅವರು ಪರಿಸರ ಕುರಿತು ಅತೀವ ಕಾಳಜಿ ತೋರಿಸಿದ್ದಾರೆ ಮತ್ತು ಅವರು ಕರ್ನಾಟಕದ ವೈಭವೋಪೇತ ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಅವರ ಪರಿಶ್ರಮದ ಬಗ್ಗೆ ಇಂದು #MannKiBaat ನಲ್ಲಿ ಮಾತನಾಡಿದ್ದೇನೆ.’’ ಎಂದು ಶೇರ್‌ ಮಾಡಿಕೊಂಡಿದ್ದಾರೆ.

ಸುರೇಶ್ ಕುಮಾರ್ ಅವರು ಪರಿಸರ ಕುರಿತು ಅತೀವ ಕಾಳಜಿ ತೋರಿಸಿದ್ದಾರೆ ಮತ್ತು ಅವರು ಕರ್ನಾಟಕದ ವೈಭವೋಪೇತ ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಅವರ ಪರಿಶ್ರಮದ ಬಗ್ಗೆ ಇಂದು ನಲ್ಲಿ ಮಾತನಾಡಿದ್ದೇನೆ. pic.twitter.com/Wpj9jbB9kU

— Narendra Modi (@narendramodi)

ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ ಮೋದಿ, ಪರಿಸರದ ಬಗ್ಗೆ ಸಂವೇದನಾಶೀಲತೆ ಹೊಂದಿರುವುದು ನಮ್ಮ ಸಮಾಜದಲ್ಲಿ ಬಹುಮುಖ್ಯವಾಗಿದೆ. ನಾವು, ಇದನ್ನು ಎಲ್ಲ ಕಡೆಯೂ ನೋಡಬಹುದು. ದೇಶದಲ್ಲಿ ಪರಿಸರಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಜನರಿಗೇನೂ ಕೊರತೆ ಇಲ್ಲ. ಕರ್ನಾಟಕದ ಬೆಂಗಳೂರಿನ ಸುರೇಶ್‌ ಕುಮಾರ್‌ ಅವರಿಂದ ಸಹ ನಾವು ಹಲವು ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ.

ಅವರು ಪರಿಸರ ಹಾಗೂ ಪ್ರಕೃತಿಯನ್ನು ಉಳಿಸುವ ಬಗ್ಗೆ ತೀವ್ರ ಒಲವು ಹೊಂದಿದ್ದಾರೆ. 20 ವರ್ಷಗಳ ಹಿಂದೆ ಅವರು, ನಗರದ ಸಹಕಾರ ನಗರದಲ್ಲಿರುವ ಕಾಡಿಗೆ ಜೀವ ತರುವ ಪಣ ತೊಟ್ಟರು. ಈ ಕಾರ್ಯ ತೀವ್ರ ಕಷ್ಟದಿಂದ ಕೂಡಿತ್ತು. ಆದರೆ, 20 ವರ್ಷಗಳ ಹಿಂದೆ ಅವರು ನೆಟ್ಟ ಸಸಿಗಳು ಇಂದು 40 ಅಡಿಗಳಷ್ಟು ಬೆಳೆದು ದೊಡ್ಡ ಮರಗಳಾಗಿವೆ. ಈಗ ಆ ಮರಗಳ ಅಂದ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಬಗ್ಗೆ ನಿವಾಸಿಗಳು ಸಹ ಬಹಳ ಹೆಮ್ಮೆ ಪಡುತ್ತಾರೆ ಎಂದೂ ಮೋದಿ ಮನ್‌ ಕೀ ಬಾತ್‌ನಲ್ಲಿ ಹೇಳಿದರು.

ಇದನ್ನೂ ಓದಿ: Mann Ki Baat: ಬಾಹ್ಯಾಕಾಶ ಹಾಗೂ ಸೌರ ವಿದ್ಯುತ್‌ ವಲಯದಲ್ಲಿ ನಾವು ಅಚ್ಚರಿಗಳನ್ನು ನೀಡುತ್ತಿದ್ದೇವೆ!

ಕನ್ನಡ ಕಲಾ ವೈಭವವನ್ನು ಸಾರುವ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ನಿತ್ಯವೂ ಕನ್ನಡ ಕಂಪನ್ನು ಪಸರಿಸುತ್ತಿರುವ ಸುರೇಶ್ ಕುಮಾರ್ ಅವರ ಪರಿಸರ, ಪರಂಪರೆ ಉಳಿವಿಗೆ ಶ್ರಮಿಸುತ್ತಿರುವ ಕಾರ್ಯವನ್ನು ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಶ್ರೀ ಅವರು ಶ್ಲಾಘಿಸಿದರು. pic.twitter.com/8ZLTLCzJ6O

— BJP Karnataka (@BJP4Karnataka)

ಜತೆಗೆ, ಸುರೇಶ್‌ ಕುಮಾರ್‌ ಮತ್ತೊಂದು ಅದ್ಭುತವಾದ ಕೆಲಸವನ್ನೂ ಮಾಡಿದ್ದಾರೆ. ಅವರು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಬೆಂಗಳೂರಿನ ಸಹಕಾರ ನಗರದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ್ದಾರೆ. ಅಲ್ಲದೆ, ಅವರು ನೂರಾರು ಜನರಿಗೆ ಕನ್ನಡದಲ್ಲಿ ಬರೆದಿರುವ ಹಿತ್ತಾಳೆ ಪ್ಲೇಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೊಂದು ಅದ್ಭುತವಾದ ಕೆಲಸ ಎಂದು ಪ್ರಧಾನಿ ಮೋದಿ ತಮ್ಮ ಅಕ್ಟೋಬರ್ 30, 2022ರ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. 

click me!