Mann Ki Baat: ಪ್ರಧಾನಿ ಮೋದಿ ಪ್ರಶಂಸಿದ ಕೊಳ್ಳೇಗಾಲದ ಕವಿ ಮಂಜುನಾಥ್ ಮನೆಗೆ ಶಾಸಕ ಮಹೇಶ್ ಭೇಟಿ

By Suvarna News  |  First Published Feb 26, 2023, 6:02 PM IST

ಕೊಳ್ಳೇಗಾಲ ಪಟ್ಟಣದ ನಿವಾಸಿ ಕವಿ ಮಂಜುನಾಥ್ ಗೆ ಮನ್‌ ಕೀ ಬಾತ್‌ ನಲ್ಲಿ ಮೋದಿ ಪ್ರಶಂಸೆ ಸಿಕ್ಕಿದೆ. ಮಲಗು ಕಂದ ಮಲಗು ಕೂಸೆ ಎಂಬ ಜೋಗುಳ ಗೀತೆಯ ಮೂಲಕ  ಮಂಜುನಾಥ್ ಪ್ರಧಾನಿ ಮನಗೆದ್ದಿದ್ದಾರೆ. ಚಾಮರಾಜನಗರ ಜಿಲ್ಲೆಗೆ ಸಂದ ಗೌರವಕ್ಕೆ ಸ್ವತ ಶಾಸಕ ಎನ್ ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನ ಕವಿ ಮಂಜುನಾಥ್ ನಿವಾಸಕ್ಕೆ ತೆರಳಿ ಸನ್ಮಾನಿಸಿ ಅಭಿನಂದಿಸಿದ್ದಾರೆ.


ವರದಿ: ಪುಟ್ಟರಾಜು. ಆರ್. ಸಿ.  ಏಷಿಯಾನೆಟ್  ಸುವರ್ಣ  ನ್ಯೂಸ್,

ಚಾಮರಾಜನಗರ (ಫೆ.26): ಮನ್ ಕಿ ಬಾತ್  ಇದು  ಪ್ರಧಾನಿ  ನರೇಂದ್ರ  ಮೋದಿ  ಅವರು  ಪ್ರತಿ ತಿಂಗಳು ಆಕಾಶವಾಣಿಯಲ್ಲಿ ನಡೆಸಿಕೊಡುವ ಕಾರ್ಯಕ್ರಮ. ಸರ್ಕಾರದ ಆಶಯಗಳನ್ನು ತಿಳಿಸುತ್ತಲೇ ದೇಶದ  ವಿವಿದೆಡೆ ಎಲೆ ಮರೆಕಾಯಿಯಂತೆ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿರುವವರ ಹಾಗು ವಿವಿಧ ಕ್ಷೇತ್ರಗಳಲ್ಲಿ  ಬೆಳಕಿಗೆ ಬಾರದಂತೆ ಗಣನೀಯ ಸಾಧನೆ ಮಾಡುತ್ತಿರುವವರ ವಿವರಗಳನ್ನು ತಿಳಿಸಿ ಬೆನ್ನುತಟ್ಟುತ್ತಿರುವ  ಕಾರ್ಯವನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ದು ಈ ಬಾರಿ ಗಡಿ ಜಿಲ್ಲೆ ಚಾಮರಾಜನಗರದ ಬಾಳಗುಣಸೆ ಮಂಜುನಾಥ್ ಎಂಬ ಕವಿ ಬರೆದ ಜೋಗುಳ ಗೀತೆಯನ್ನು ಪ್ರಸ್ತಾಪಿಸಿ ಪ್ರಶಂಸಿದ್ದಾರೆ.

Tap to resize

Latest Videos

undefined

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಷ್ಟ್ರಮಟ್ಟದಲ್ಲಿ   ನಡೆಸಿದ  ಪೆನ್  ಎ  ಲೋರಿ   ಎಂಬ   ಜೋಗುಳ   ಗೀತೆ     ಸ್ಪರ್ಧೆಯಲ್ಲಿ   ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಎಂಬ ಕವಿ  ಪ್ರಥಮ ಸ್ಥಾನ ಪಡೆದಿದ್ದಾರೆ.  ಮಲಗು ಕಂದ ಮಲಗು ಕೂಸೆ ಎಂಬ ಈ ಲಾಲಿ ಹಾಡಿಗೆ ಅವರ ತಾಯಿ, ಅಜ್ಜಿ ಹಾಡುತ್ತಿದ್ದ ಜೋಗುಳಗಳೇ ಸ್ಫೂರ್ತಿಯಾಗಿವೆ. ಇದನ್ನು ಕೇಳಿದರೆ ನಿಮಗೂ ಆನಂದವಾಗುತ್ತದೆ ಎಂದು ಮನ್.ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಪ್ರಶಂಸಿದ್ದಾರೆ.

ಬಿ.ಎನ್ ಮಂಜುನಾಥ್ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೋಕಿನ ಕಾಡಂಚಿನ ಬಾಳೆಗುಣಸೆ ಎಂಬ ಗ್ರಾಮದವರು . ಎಲ್ಐಸಿ ಪ್ರತಿನಿಧಿ ಆಗಿರುವ  ಮಂಜುನಾಥ್ ಪ್ರವೃತ್ತಿಯಲ್ಲಿ ಕವಿ.   ಕೇಂದ್ರ ಸಂಸ್ಕೃತಿ  ಸಚಿವಾಲಯ ಜೋಗುಳ ಗೀತೆ ರಚಿಸುವ  ಸ್ಪರ್ಧೆಗೆ ಆಹ್ವಾನಿಸಿದಾಗ ಪತ್ನಿ ಹಾಗು ಮಗನ ಒತ್ತಾಯಕ್ಕೆ ಕಟ್ಟುಬಿದ್ದ ಮಂಜುನಾಥ್ ಮಲಗು ಕಂದ ಮಲಗು ಕೂಸೆ ಎಂಬ ಜೋಗುಳ ಗೀತೆ ರಚಿಸಿ ಕಳುಹಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ, ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಈ ಜೋಗುಳ ಗೀತೆಯನ್ನು  ಸ್ವತಃ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿ ಮಂಜುನಾಥ್ ಅವರನ್ನು ಪ್ರಶಂಸಿದ್ದಾರೆ.

ಸ್ವತಃ ಪ್ರಧಾನಿ ಹೊಗಳಿಕೆಯ ಬಗ್ಗೆ ಹರ್ಷಗೊಂಡಿರುವ ಕವಿ  ಮಂಜುನಾಥ್ ಮತ್ತು ಕುಟುಂಬ  ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ,  ಖಂಡಿತ ವಾಗಿಯೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪತ್ನಿ ಹಾಗು ಕುಟುಂಬದವರಂತು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಬಂದಿರುವುದಕ್ಕೆ ಫುಲ್ ದಿಲ್ ಖುಷ್ ಆಗಿದ್ದಾರೆ.

ನಾಟು ನಾಟು... ಹಾಡಿಗೆ ಕುಣಿದ ಕೊರಿಯನ್ನರಿಗೆ ಪ್ರಧಾನಿ ಮೋದಿ ಫಿದಾ

ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್  ನಲ್ಲಿ ಕವಿ  ಮಂಜುನಾಥ್   ಅವರ ಜೋಗುಳದ ಗೀತೆಯನ್ನು ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಂತೆ ಮಂಜುನಾಥ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಾಮರಾಜನಗರ ಜಿಲ್ಲೆಗೆ ಸಂದ ಗೌರವಕ್ಕೆ ಸ್ವತ ಶಾಸಕ ಎನ್ ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನ ಕವಿ ಮಂಜುನಾಥ್ ನಿವಾಸಕ್ಕೆ ತೆರಳಿ ಸನ್ಮಾನಿಸಿ ಅಭಿನಂದಿಸಿದ್ದಾರೆ.

Mann Ki Baat: ಏಕತಾ ದಿನದ ಸ್ಪರ್ಧೆ ವಿಜೇತ ಚಾಮರಾಜನಗರ ಜಿಲ್ಲೆಯ ಮಂಜುನಾಥ್‌ಗೆ ಪ್ರಧಾನಿ ಮೋದಿ ಶ್ಲಾಘನೆ

ಕವಿ  ಬಾಳಗುಣಸೆ  ಮಂಜುನಾಥ್   ಅವರು  ಚಿತ್ತ  ಚಿತ್ತಾರದ  ಹೂವು  ಎಂಬ ಕವನ ಸಂಕಲನ ಹಾಗೂ ಶಾಪ ಎಂಬ ನಾಟಕದ ಪುಸ್ತಕಗಳನ್ನು ಹೊರತಂದಿದ್ದಾರೆ. ಇನ್ನೆರಡು ಕೃತಿಗಳು ಅಚ್ಚಿನ ಹಂತದಲ್ಲಿವೆ. ಈ ನಡುವೆ ಪ್ರಧಾನಿ ಮೋದಿ ಅವರ ಪ್ರಶಂಸಯಿಂದ ಮಂಜುನಾಥ್ ಅವರ ಕುಟುಂಬ ಸಂತಸದ ಹೊನಲಿನಲ್ಲಿ ತೇಲುತ್ತಿದೆ.

click me!