ಜಗತ್ತಿನಲ್ಲಿ ಸೂರ್ಯ ಚಂದ್ರರಿರೋದು ಎಷ್ಟುಸತ್ಯವೋ, ನಮ್ಮ ಸರ್ಕಾರ ಬರೋದು ಅಷ್ಟೇ ಸತ್ಯ ಎಂದು ಸಚಿವ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ (ಫೆ.26): ಜಗತ್ತಿನಲ್ಲಿ ಸೂರ್ಯ ಚಂದ್ರರಿರೋದು ಎಷ್ಟುಸತ್ಯವೋ, ನಮ್ಮ ಸರ್ಕಾರ ಬರೋದು ಅಷ್ಟೇ ಸತ್ಯ ಎಂದು ಸಚಿವ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಲಾದಗಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರೋ ಬೆನ್ನಲ್ಲೇ ಕೇಂದ್ರ ಬಿಜೆಪಿ ನಾಯಕರು ಬೆಂಗಳೂರಲ್ಲಿ ಮನೆ ಮಾಡುವ ವಿಚಾರದ ಕುರಿತು ಸುದ್ದಿಗಾರರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಮೀತ್ ಶಾ, ಧಮೇಂರ್‍ದ್ರ ಪ್ರಧಾನ್ ಅವರೆಲ್ಲರೂ ಸಹ ಬಿಜೆಪಿ ಗೆಲ್ಲಿಸಬೇಕು ಎಂದು ಇಲ್ಲಿಗೆ ಬರುತ್ತಾರೆ. ಅವರು ಕಾಂಗ್ರೆಸ್‌ನವರ ಹಾಗೆ ಮುಂಗುಸಿಯಂತೆ ಮುಖ ತೋರಿಸಿ, ಭಾಷಣ ಮಾಡಿ ಓಡಿ ಹೋಗಲ್ಲ. ನಮ್ಮದು ನಾಳೆ ಬಾ ಅನ್ನೋ ಪಾರ್ಟಿ ಅಲ್ಲ ಎಂದರು.
ಪ್ರಜಾಧ್ವನಿಗೆ ಟಾಂಗ್: ನಮ್ಮ ಬಿಜೆಪಿಯ ಕಾರ್ಯಕ್ರಮಗಳು ಎಂದರೆ ಜನರಿಗೆ ತಲಪುವ ಕಾರ್ಯಕ್ರಮಗಳು. ಜನರೆದುರು ಬುರುಡೆ ಬಿಡುವ ಕಾರ್ಯಕ್ರಮವಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ನೇರ ಟಾಂಗ್ ನೀಡಿದ ಅವರು, ದೊಡ್ಡ ಕಾರ್ಯಕ್ರಮ ಮಾಡಿ ಏನೋ ಮಾಡಿಬಿಡುತ್ತೇನೆ, ಎಲ್ಲವೂ ಕೊಟ್ಟು ಬಿಡುತ್ತೇನೆ. ನಮ್ಮನ್ನು ಗೆಲ್ಲಿಸಿ. ಎಷ್ಟುದುಡ್ಡು ಬೇಕೋ ಅಷ್ಟುಕೊಡುತ್ತೇನೆ ಅಂತ ಹೇಳಿ ಹೋಗುವ ಕಾರ್ಯಕ್ರಮ ಅಲ್ಲ. ನಾಳೆ ಬಾ ಅನ್ನೋ ಸ್ಕೀಮ್ ಯಾವುದೂ ಇಲ್ಲ. 13 ಸಾವಿರ ಫಲಾನುಭವಿ ಗಳಿಗೆ ಸ್ಥಳದಲ್ಲೇ ಸರ್ಕಾರದ ಯೋಜನೆಯನ್ನು ಕೊಡುವ ವ್ಯವಸ್ಥೆ ಮಾಡಿದ್ದೇನೆ ಎಂದರು.
undefined
‘ಕಾಂಗ್ರೆಸ್’ ಯೋಜನೆಗಳಿಗೆ ಗ್ಯಾರಂಟಿ ಇಲ್ಲ: ಸಚಿವ ಬಿ.ಸಿ.ಪಾಟೀಲ್ ಗೇಲಿ
ಗ್ರಾಮ ವಾಸ್ತವ್ಯ ತೃಪ್ತಿ ಕೊಟ್ಟಿದೆ: ಕಂದಾಯ ಸಚಿವನಾದ ಬಳಿಕ ಅಲ್ಲಿಂದ ಇಲ್ಲಿವರೆಗೂ ಎಲ್ಲೆಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೋ ಅವೆಲ್ಲವೂ ನನಗೆ ತೃಪ್ತಿ ಕೊಟ್ಟಿದೆ. ನಾನು ಕಾಡಿನ ಅಂಚಿನಲ್ಲೂ ವಾಸ್ತವ್ಯ ಮಾಡಿದ್ದೇನೆ. ನನ್ನ ಹೆಚ್ಚು ಗ್ರಾಮ ವಾಸ್ತವ್ಯಗಳು ಆಗಿದ್ದು ಉತ್ತರ ಕರ್ನಾಟಕ ಭಾಗದಲ್ಲೇ, ಹಳೇ ಮೈಸೂರು ಭಾಗದಲ್ಲೂ ಮೂರ್ನಾಲ್ಕು ಆಗಿವೆ. ಉತ್ತರ ಕರ್ನಾಟಕದ ಜನ ತುಂಬಾ ಪ್ರೀತಿ ತೋರಿಸಿದ್ದಾರೆ ಎಂದರು.
ಗ್ರಾಮ ವಾಸ್ತವ್ಯ ಒಂದು ಪಾಠ ಶಾಲೆ: ಗ್ರಾಮ ವಾಸ್ತವ್ಯ ಎಂಬುವುದು ಪಾಠ ಶಾಲೆ ಇದ್ದಹಾಗೆ. ಇಲ್ಲಿ ಬಹಳಷ್ಟುಕಲಿಯೋದಿದೆ. ಬೆಂಗಳೂರು, ಡಿಸಿ ಕಚೇರಿಯಲ್ಲಿ ಕೂತು ಕೊಂಡರೆ ಏನನ್ನೂ ಕಲಿಯೋಕಾಗಲ್ಲ. ಬರೀ ಪುಸ್ತಕ ನೋಡಬೇಕಾಗುತ್ತದೆ. ಪ್ರಾಯೋಗಿಕವಾಗಿ ಜನರ ಬವಣೆ ನೋಡಬೇಕು ಅಂದರೆ ನೀವು ಹಳ್ಳಿಗೆ ಬರಬೇಕು. 1 ಗಂಟೆ, ಅರ್ಧ ಗಂಟೆ ಕಳೆದರೆ ಆಗಲ್ಲ. 24 ಗಂಟೆ ಅವರ ಜೊತೆಗಿದ್ದರೆ ಜನರ ಕಷ್ಟನಮ್ಮ ಗಮನಕ್ಕೆ ಬರುತ್ತವೆ. ಮುಖ್ಯಮಂತ್ರಿ ಹೇಳಿದಂತೆ ನಾವು ಕ್ರಾಂತಿಕಾರಿ ಬದಲಾವಣೆ ಮಾಡಿದ್ದೇವೆ. ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮೂಲ ಕಾರಣವೇ ಗ್ರಾಮ ವಾಸ್ತವ್ಯ ಎಂದು ತಿಳಿಸಿದರು.
ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಪರ ಉತ್ತಮ ಅಲೆಯಿದೆ: ಎಚ್.ಡಿ.ಕುಮಾರಸ್ವಾಮಿ
ಎನ್‌ಪಿಎಸ್ ನನ್ನ ಇಲಾಖೆಗೆ ಬರಲ್ಲ. ಆದರೂ ಸಹ ಶಿಕ್ಷಣ ಇಲಾಖೆ ಮಂತ್ರಿ ಜೊತೆ ಮಾತನಾಡುತ್ತೇನೆ. ಎಲ್ಲರಿಗೂ ನ್ಯಾಯ ಕೊಡಬೇಕು. ನ್ಯಾಯ ಕೊಡುವುದರಲ್ಲಿ ತಪ್ಪಾದರೆ ನಿಜಕ್ಕೂ ಅಧಿಕಾರಿಗಳಿಗೆ ನಾವು ಎಚ್ಚರಿಕೆ ಕೊಡಬೇಕು. ಆ ದೃಷ್ಟಿಯಿಂದ ಇಲಾಖೆಯ ಮುಖ್ಯಸ್ಥರ ಜೊತೆ ನಾನು ಚರ್ಚಿಸಿ, ನ್ಯಾಯ ಸಿಗುವಂತೆ ಮಾಡುತ್ತೇನೆ.
- ಆರ್.ಅಶೋಕ್, ಕಂದಾಯ ಸಚಿವ