ರಾತ್ರಿ ಮಲಗಿದಲ್ಲೇ ಹೃದಯಾಘಾತದಿಂದ ಪ್ಯಾರಾಮೆಡಿಕಲ್ ಇಂಟರ್ನಿ ಸಾವು!

Published : Feb 14, 2022, 01:21 PM IST
ರಾತ್ರಿ ಮಲಗಿದಲ್ಲೇ ಹೃದಯಾಘಾತದಿಂದ  ಪ್ಯಾರಾಮೆಡಿಕಲ್ ಇಂಟರ್ನಿ ಸಾವು!

ಸಾರಾಂಶ

* ರಾತ್ರಿ ಮಲಗಿದಲ್ಲೇ ಹೃದಯಾಘಾತದಿಂದ ಯುವಕ ಸಾವು * ಮಂಗಳೂರು ಹೊರವಲಯದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಘಟನೆ * ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿ ನಾಗೇಶ್(23) ಮೃತ ಯುವಕ

ಮಂಗಳೂರು(ಫೆ.14): ನರ್ಸ್‌ ಒಬ್ಬಾಕೆ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲೇ ಸಾವನ್ನಪ್ಪಿ, ಅಂಗಾಂಗ ದಾನದ ಮೂಲಕ ಆರು ಮಂದಿಗೆ ಜೀವ ದಾನ ಮಾಡಿದ್ದ ಶಿವಮೊಗ್ಗದ ಘಟನೆ ಇಡೀ ರಾಜ್ಯದಲ್ಲೇ ಸದ್ದು ಮಾಡಿತ್ತು. ಇದೀಗ ಈ ಘಟನೆಯ ಬೆನ್ನಲ್ಲೇ ರಾತ್ರಿ ಮಲಗಿದಲ್ಲೇ ಹೃದಯಾಘಾತದಿಂದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಹೌದು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿ ನಾಗೇಶ್(23) ಖಾಸಗಿ ಆಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ಇಂಟರ್ನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ನಿನ್ನೆ ರಾತ್ರಿ ಕೆಲಸ ಮುಗಿಸಿ ಆಸ್ಪತ್ರೆಯ ರೆಸ್ಟ್ ರೂಂನಲ್ಲಿ ನಿದ್ದೆಗೆ ಜಾರಿದ್ದ ನಾಗೇಶ್, ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಮೆದುಳು ನಿಷ್ಕ್ರಿಯ, ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ಮತ್ತಷ್ಟು ಆತಂಕ ಹುಟ್ಟು ಹಾಕಿದೆ. 

ಕುಸಿದುಬಿದ್ದು ನರ್ಸ್‌ ಬ್ರೇನ್‌ಡೆಡ್‌

ಆ ಶುಶ್ರೂಷಕಿ ಹೆಸರು ಟಿ.ಕೆ.ಗಾನವಿ. ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲೂಕಿನ ಹೊಸಕೊಪ್ಪ ಮೂಲದವರಾಗಿದ್ದು, ಶಿವಮೊಗ್ಗದ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಫೆ.8ರಂದು ರಾತ್ರಿ ಪಾಳಿ ಮಾಡುತ್ತಿರುವ ಸಂದರ್ಭದಲ್ಲಿ ದಿಢೀರ್‌ ಕುಸಿದು ಜ್ಞಾನ ತಪ್ಪಿದ್ದರು. ಹೆಚ್ಚುವರಿ ಚಿಕಿತ್ಸೆಗೆ ಬೆಂಗಳೂರು ಮೆಡಿಕಲ್‌ ಕಾಲೇಜಿನ ಪಿಎಂಎಸ್‌ಎಸ್‌ವೈ ಆಸ್ಪತ್ರೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಚಿಕಿತ್ಸೆ ಬಳಿಕವೂ ಚೇತರಿಕೆ ಕಾಣದ ಹಿನ್ನೆಲೆ ಫೆ.12ರಂದು ಮೆದುಳು ನಿಷ್ಕಿ್ರಯ ಎಂದು ವೈದ್ಯರು ಘೋಷಿಸಿದ್ದರು. ಶುಶ್ರೂಷಕಿಯ ಕುಟುಂಬಸ್ಥರು ಸ್ಥಳದಲ್ಲಿಯೇ ಅಂಗಾಂಗ ದಾನಕ್ಕೆ ಅನುಮತಿ ನೀಡಿದ್ದಾರೆ.

ದಾನಿಯ ದೇಹವನ್ನು ಗ್ಯಾಸ್ಟೊ್ರೕ ಎಂಟ್ರೋಲಜಿ ಸೈನ್ಸಸ್‌ ಆಂಡ್‌ ಆರ್ಗನ್‌ ಟ್ರಾನ್ಸ್‌ಪ್ಲಾಂಟ್‌ (ಐಜಿಒಟಿ) ಆಸ್ಪತ್ರೆಗೆ ವರ್ಗಾಯಿಸಿ ಶನಿವಾರ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಗಿದೆ. ಯಕೃತ್‌, ಎರಡು ಮೂತ್ರಪಿಂಡ (ಕಿಡ್ನಿ), ಹೃದಯ ನಾಳಗಳು, ಎರಡು ಕಾರ್ನಿಯಾವನ್ನು ದಾನವಾಗಿ ಪಡೆಯಲಾಗಿದೆ. ಇವುಗಳನ್ನು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರು ಮಂದಿಗೆ ಕಸಿ ಮಾಡುವ ಕಾರ್ಯ ನಡೆಯುತ್ತಿದೆ.

ಈಗಾಗಲೇ ‘ಸಕ್ರಾ ಆಸ್ಪತ್ರೆಯ 48 ವರ್ಷದ ವ್ಯಕ್ತಿಗೆ ಯಕೃತ್‌, ಮಣಿಪಾಲ್‌ ಆಸ್ಪತ್ರೆಯ 40 ವರ್ಷದ ಮಹಿಳೆಗೆ ಬಲಭಾಗದ ಮೂತ್ರಪಿಂಡ, ಐಎನ್‌ಯು ಆಸ್ಪತ್ರೆಯ 35 ವರ್ಷದ ಪುರುಷನಿಗೆ ಎಡಭಾಗದ ಮೂತ್ರಪಿಂಡ ಕಸಿ ಮಾಡಲಾಗಿದೆ. ಮಣಿಪಾಲ್‌ ಆಸ್ಪತ್ರೆಗೆ ಹೃದಯ ನಾಳಗಳನ್ನು ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗೆ ಕಾರ್ನಿಯಾಗಳನ್ನು ಕಳಿಸಿದ್ದು, ಅರ್ಹ ಮೂರು ಮಂದಿಗೆ ಕಸಿ ಮಾಡಲಾಗುವುದು’ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Brain Deathಗೂ ಸಾವಿಗೂ ಇದೆಯೇ ವ್ಯತ್ಯಾಸ?

ಬ್ರೇನ್ ಡೆತ್ (Brain Death) ಅಥವಾ ಮೆದುಳಿನ ಸಾವು ಎಂದರೆ ಕೃತಕ ಉಸಿರಾಟ ಯಂತ್ರದಲ್ಲಿರುವ ವ್ಯಕ್ತಿಯು ಇನ್ನು ಮುಂದೆ ಯಾವುದೇ ಮೆದುಳಿನ ಕಾರ್ಯಗಳನ್ನು ನಡೆಸಲು ಸಾಧ್ಯವಿಲ್ಲ, ಅವರು ಇನ್ಯಾವತ್ತೂ ಪ್ರಜ್ಞೆಯನ್ನು ಮರಳಿ ಪಡೆಯುವುದಿಲ್ಲ ಅಥವಾ ಬೆಂಬಲವಿಲ್ಲದೆ ಉಸಿರಾಡಲು ಸಾಧ್ಯವಾಗುವುದಿಲ್ಲ ಎಂದು ಅರ್ಥ. ಬ್ರೈನ್ ಡೆಡ್ ಆಗಿರುವ ವ್ಯಕ್ತಿ ಸತ್ತಿದ್ದಾನೆ ಎಂದು ಕಾನೂನುಬದ್ಧವಾಗಿ (Legally) ದೃಢೀಕರಿಸಲಾಗುತ್ತದೆ. ಅಂದರೆ ಜೀವರಕ್ಷಕ ವ್ಯವಸ್ಥೆಯಲ್ಲಿ ಇರುವ ವ್ಯಕ್ತಿ ಸತ್ತಿದ್ದಾನೆ ಎಂದಾಗಬೇಕಿದ್ದರೆ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಬೇಕು. ಹೀಗಾಗಿ, ನಿಜಕ್ಕೂ ಬ್ರೇನ್ ಡೆತ್‌ಗೂ ಡೆತ್‌ಗೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಸಾವಿನ ಜೊತೆ ಮೆದುಳನ್ನು ಯಾಕೆ ಜೋಡಿಸಲಾಗುತ್ತದೆ?

ಯಾಕೆಂದರೆ, ವ್ಯಕ್ತಿಯ ಬೇರೆ ಯಾವುದೇ ಅಂಗ ಕೆಲಸ ನಿಲ್ಲಿಸಿದರೆ ಅದನ್ನು ದುರಸ್ತಿ ಮಾಡಬಹುದು, ಕಸಿ ಮಾಡಬಹುದು ಅಥವಾ ಬೇರೆ ಅಂಗವನ್ನು ಜೋಡಿಸಬಹುದು. ಆದರೆ ಮೆದುಳು ನಿಷ್ಕ್ರಿಯವಾದರೆ, ಏನೂ ಮಾಡಲು ಸಾಧ್ಯವಿಲ್ಲ. ಮೆದುಳು ಕೆಲಕಾಲ ಕೆಲಸ ಮಾಡುವಂತೆ ಆಮ್ಲಜನಕ ಪೂರೈಸಬಹುದು, ಜೀವರಕ್ಷಕ ವ್ಯವಸ್ಥೆಯಲ್ಲಿ ದೇಹವನ್ನು ಇಡಬಹುದು. ಆದರೆ ವ್ಯಕ್ತಿಯ ಪ್ರಜ್ಞೆ (Consious) ಮರಳುವುದಿಲ್ಲ. ಆತ ಮಲಗಿದಲ್ಲಿಂದ ಏಳಲು ಸಾಧ್ಯವಿಲ್ಲ. ಹಾಗೂ ಮೆದುಳು ಇತರ ಅಂಗಗಳಿಗೆ ಆದೇಶಗಳನ್ನು ರವಾನಿಸುವುದಿಲ್ಲ. ಅಂದರೆ ಇಲ್ಲಿ ಜೀವರಕ್ಷಕ ವ್ಯವಸ್ಥೆಯು ಹೃದಯ (Heart) ರಕ್ತ (blood) ಪಂಪ್ ಮಾಡುವಂತೆ ಮಾಡುತ್ತದೆ, ಶ್ವಾಸಕೋಶ (Lungs) ಉಸಿರಾಡುವಂತೆ ಮಾಡುತ್ತದೆ; ಆದರೆ ಮೆದುಳು ಕಾರ್ಯಾಚರಿಸುವಂತೆ ಮಾಡುವ ಯಾವುದೇ ವ್ಯವಸ್ಥೆ ಇಲ್ಲ. ಆದ್ದರಿಂಧ ಮೆದುಳು ಸತ್ತಿತೆಂಧರೆ ವ್ಯಕ್ತಿ ಸತ್ತನೆಂದೇ ಅರ್ಥ

ಬ್ರೇನ್ ಡೆತ್ ಎಂಬುದು ಒಬ್ಬ ವ್ಯಕ್ತಿಯ ಸಾವಿನ ಕಾನೂನಿನ ಪ್ರಕಾರದ ವ್ಯಾಖ್ಯೆ.

ಮೆದುಳಿನ ಕಾಂಡವು ಬೆನ್ನುಹುರಿಗೆ (ಬೆನ್ನುಹುರಿಯಲ್ಲಿನ ಕೇಂದ್ರ ನರಮಂಡಲದ ಭಾಗ) ಸಂಪರ್ಕ ಹೊಂದಿದ ಮೆದುಳಿನ ಕೆಳಗಿನ ಭಾಗ. ಮೆದುಳಿನ ಕಾಂಡವು ಜೀವನಕ್ಕೆ ಅಗತ್ಯವಾದ ದೇಹದ ಹೆಚ್ಚಿನ ಸ್ವಯಂಚಾಲಿತ ಕಾರ್ಯಗಳನ್ನು ನಿಯಂತ್ರಿಸಲು ಕಾರಣ. ಇದು ನಿಯಂತ್ರಿಸುವ ಕಾರ್ಯಗಳು-

ಉಸಿರಾಟ (breathing) 

ಹೃದಯ ಬಡಿತ (Heart beat)

ರಕ್ತದೊತ್ತಡ (Blood preasure)

ನುಂಗುವುದು 

ಮೆದುಳಿನ ಕಾಂಡವು ಮೆದುಳಿನಿಂದ ದೇಹದ ಉಳಿದ ಭಾಗಗಳಿಗೆ ಮಾಹಿತಿಯನ್ನು ಪ್ರಸಾರ ಮಾಡುತ್ತದೆ, ಆದ್ದರಿಂದ ಇದು ಪ್ರಜ್ಞೆ, ಅರಿವು ಮತ್ತು ಚಲನೆಯಂತಹ ಮೆದುಳಿನ ಪ್ರಮುಖ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆದುಳು ಸತ್ತರೆ ಇದು ಕಾರ್ಯ ನಿರ್ವಹಿಸುವುದಿಲ್ಲ. ಮೆದುಳಿಗೆ ರಕ್ತ ಮತ್ತು/ಅಥವಾ ಆಮ್ಲಜನಕದ ಪೂರೈಕೆಯನ್ನು ನಿಲ್ಲಿಸಿದಾಗ ಮೆದುಳಿನ ಸಾವು ಸಂಭವಿಸಬಹುದು.

Cancer Symptoms: ಉಗುರಲ್ಲೇ ಗೊತ್ತಾಗುತ್ತೆ ಮಾರಾಣಾಂತಿಕ ರೋಗದ ಕುರುಹು!

ಇದು ಕೆಳಗಿನ ಕಾರಣಗಳಿಂದ ಉಂಟಾಗಬಹುದು

ಹೃದಯ ಸ್ತಂಭನ - ಹೃದಯ ಬಡಿತವನ್ನು ನಿಲ್ಲಿಸಿದಾಗ ಮತ್ತು ಮೆದುಳು ಆಮ್ಲಜನಕದ (Oxygen) ಹಸಿವಿನಿಂದ ಬಳಲುತ್ತಿರುವಾಗ

ಹೃದಯಾಘಾತ - ಹೃದಯಕ್ಕೆ ರಕ್ತ ಪೂರೈಕೆಯು ಇದ್ದಕ್ಕಿದ್ದಂತೆ ನಿಂತಾಗ

ಪಾರ್ಶ್ವವಾಯು - ಮೆದುಳಿಗೆ ರಕ್ತ ಪೂರೈಕೆಯನ್ನು ನಿರ್ಬಂಧಿಸಿದಾಗ ಅಥವಾ ಅಡ್ಡಿಪಡಿಸಿದಾಗ

ರಕ್ತ ಹೆಪ್ಪುಗಟ್ಟುವಿಕೆ (blood clot) - ನಿಮ್ಮ ದೇಹದಲ್ಲಿ ರಕ್ತದ ಹರಿವನ್ನು ಅಡ್ಡಿಪಡಿಸುವ ಅಥವಾ ತಡೆಯುವ ರಕ್ತನಾಳದಲ್ಲಿನ ಅಡಚಣೆ.

ತೀವ್ರ ತಲೆ ಗಾಯ (Wound)

ಮೆದುಳಿನ ರಕ್ತಸ್ರಾವ (Brain internal bleeding)

ಎನ್ಸೆಫಲೈಟಿಸ್‌ನಂತಹ ಸೋಂಕುಗಳು (ensephalitis)

ಮೆದುಳಿನ ಗೆಡ್ಡೆ (Tumor)

ಬ್ರೇನ್ ಡೆತ್ ಮತ್ತು ಕೋಮಾ (Coma) ಬೇರೆ ಬೇರೆ

ಮೆದುಳಿನ ಸಾವು ಎಂಬುದು ಕೋಮಾ ಅಥವಾ ಶಾಶ್ವತ ಕೋಮಾಗಿಂತ ಭಿನ್ನವಾದ ಸ್ಥಿತಿ. ಕೋಮಾ ವ್ಯಾಪಕವಾದ ಮಿದುಳಿನ ಹಾನಿಯ ನಂತರ ಸಂಭವಿಸಬಹುದು, ಈ ಸ್ಥಿತಿಯಿಂದ ಚೇತರಿಸಿಕೊಳ್ಳಲು ಸಾಧ್ಯವಿದೆ, ಆದರೆ ಮೆದುಳಿನ ಸಾವು ಶಾಶ್ವತ. ಇದರಿಂದ ಹಿಂದಿರುಗಿ ಬರಲು ಸಾಧ್ಯವಿಲ್ಲ.

Exercise Tips: ದಿನಕ್ಕೆ ಜಸ್ಟ್ ಮೂರು ಸೆಕೆಂಡ್ ವ್ಯಾಯಾಮ ಮಾಡಿದರೂ ಸಾಕು !

  • ಕೋಮಾದಲ್ಲಿರುವ ವ್ಯಕ್ತಿ ಇನ್ನೂ ಕಾರ್ಯನಿರ್ವಹಿಸುವ ಮೆದುಳಿನ ಕಾಂಡವನ್ನು ಹೊಂದಿರುತ್ತಾನೆ.
  • ಪ್ರಜ್ಞೆಯ ಕೆಲವು ರೂಪಗಳು ಅಸ್ತಿತ್ವದಲ್ಲಿರಬಹುದು
  • ಸಹಾಯವಿಲ್ಲದೆ ಉಸಿರಾಡುವುದು ಸಾಮಾನ್ಯವಾಗಿ ಸಾಧ್ಯ
  • ಮೆದುಳಿನ ಕಾಂಡದ ಮುಖ್ಯ ಕಾರ್ಯಗಳು ಪರಿಣಾಮ ಬೀರದ ಕಾರಣ ಚೇತರಿಸಿಕೊಳ್ಳಲು ಕಡಿಮೆ ಅವಕಾಶ.
  • ಕೋಮಾದಲ್ಲಿರುವ ವ್ಯಕ್ತಿ ಎಚ್ಚರವಾಗಿರುವ ಲಕ್ಷಣಗಳನ್ನು ತೋರಿಸಬಹುದು. ಉದಾಹರಣೆಗೆ, ಕಣ್ಣುಗಳನ್ನು ತೆರೆಯಬಹುದು, ಆದರೆ ಸುತ್ತಮುತ್ತಲಿನವರಿಗೆ ಪ್ರತಿಕ್ರಿಯಿಸುವುದಿಲ್ಲ.
  • ಅಪರೂಪದ ಸಂದರ್ಭಗಳಲ್ಲಿ, ಕೋಮಾದಲ್ಲಿರುವ ವ್ಯಕ್ತಿಯ ಮೆದುಳಿನ ಸ್ಕ್ಯಾನ್ ಅನ್ನು ಬಳಸಿಕೊಂಡು ಅವರ ಕೆಲವು ಪ್ರತಿಕ್ರಿಯೆಗಳ ಅರ್ಥವನ್ನು ಕಂಡುಹಿಡಿಯಬಹುದು. ಆದರೆ ಅವರು ಸುತ್ತಮುತ್ತಲಿನವರ ಜೊತೆಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ