Karnataka Assembly Session: ಜಂಟಿ ಅಧಿವೇಶನ ಉದ್ದೇಶಿಸಿ ಥಾವರ್‌ಚಂದ್‌ ಗೆಹಲೋತ್‌ ಭಾಷಣ!

By Suvarna News  |  First Published Feb 14, 2022, 11:55 AM IST

* 10 ದಿನ ವಿಧಾನಮಂಡಲ ಕಲಾಪ

* ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

* ಮೊದಲ ಬಾರಿಗೆ ಅವರು ರಾಜ್ಯದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ 


ಬೆಂಗಳೂರು(ಫೆ.14): ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲದ ಅಧಿವೇಶನ ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಇದು ಮೊದಲ ಅಧಿವೇಶನವಾಗಿದೆ. ಗೆಹ್ಲೋಟ್ ಅವರು ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಆರು ತಿಂಗಳು ಕಳೆದಿದೆ. ಇದೇ ಮೊದಲ ಬಾರಿಗೆ ಅವರು ರಾಜ್ಯದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. 

ರಾಜ್ಯಪಾಲರ ಭಾಷಣದ ಹೈಲೈಟ್ಸ್

Tap to resize

Latest Videos

ರಾಜ್ಯ, ಕೇಂದ್ರಗಳಿಂದ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಮಾಡಲಾಗಿದೆ. 9.33 ಕೋಟಿ ಜನರಿಗೆ ರಾಜ್ಯದಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ. 100% ಮೊದಲ ಡೋಸ್, 85% ಎರಡನೇ ಡೋಸ್ ನೀಡಲಾಗಿದ್ದು, ರಾಜ್ಯದಲ್ಲಿ ಒಟ್ಟು 6 ಕೋಟಿ ಟೆಸ್ಟ್ ಮಾಡಲಾಗಿದೆ. ರಾಜ್ಯಗಳ ಆಸ್ಪತ್ರೆಗಳಲ್ಲಿ 55,256 ಎಚ್ಡಿಯು ಬೆಡ್ ಗಳು, 7216 ಐಸಿಯು ಬೆಡ್ ಗಳು, 123 ಐಸಿಯು ವೆಂಟಿಲೇಟರ್ ಬೆಡ್ ಗಳು‌ಲಭ್ಯವಿವೆ ಎಂದಿದ್ದಾರೆ.

2018ನೇ ಸಾಲಿನಿಂದ ಅತಿವೃಷ್ಟಿಯಿಂದ ಸತತವಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ರಾಜ್ಯದಲ್ಲಿ ಜನರ ಹಾಗೂ ಪ್ರಾಣಿಗಳ ಜೀವ ಹಾಸಿ, ಮನೆ ಹಾನಿ ಬೆಳೆ ಹಾನಿ ಹಾಗೂ ಮೂಲಸೌಕರ್ಯಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. 2021-22ನೇ ಸಾಲಿನಲ್ಲಿ ಅಕಾಲಿಕ ಮಳೆ ಹಾಗೂ ನೆರೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಕುಟುಂಬಗಳು ಹಾನಿಗೊಳಗಾಗಿರುತ್ತವೆ, ನೆರೆ ಸಂತ್ರಸ್ತರ ರಕ್ಷಣೆಗಾಗಿ 496 ಕಾಳಜಿ ಕೇಂದ್ರಗಳನ್ನು ತೆರೆದು 1,38,504 ಜನರಿಗೆ ಆಶ್ರಯ ನೀಡಲಾಯಿತು. ನದಿಗಳ ಹರಿವಿನ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವು ಸಕಾಲದಲ್ಲಿ ಮುನ್ಸೂಚನೆಯನ್ನು ನೀಡಿದ್ದರಿಂದ, ಜನರನ್ನು ತರಿತ ಗತಿಯಲ್ಲಿ ಸ್ಮಳಾಂತರಿಸಲಾಗಿದೆ.

ಇತ್ತೀಚೆಗೆ ಸುರಿದ  ಮಳೆಯಿಂದಾಗಿ ನೀರು ನುಗ್ಗಿ ಹಾನಿಗೊಳಗಾದ ಪ್ರತಿ ಮನೆಯ ಕುಟುಂಬಕ್ಕೆ ನನ್ನ ಸರ್ಕಾರವು ನಿಗದಿತ ಮೊತ್ತಕ್ಕಿಂತ ರೂ. 6,200/- ರಷ್ಟು ಸೇರಿಸಿ ಒಟ್ಟು
ರೂ.10,000/-ಪರಿಹಾರವನ್ನು ಪಾವತಿಸಿದೆ. ಸುಮಾರು 85,862 ನೆರ ಸಂತ್ರಸ್ತರ ಕುಟುಂಬಗಳಿಗೆ ರೂ.85.86 ಕೋಟಿ ಪರಿಹಾರ ನೀಡಲಾಗಿದೆ. ಪ್ರತಿ ಮನೆ ಹಾನಿಗೆ ಉಂಟಾದ ಹಾನಿಯ ಪ್ರಮಾಣದ ಪ್ರಕಾರ ತಲಾ ರೂ.5.00 ಲಕ್ಷ, ರೂ.3.00ಲಕ್ಷ ಹಾಗೂ ರೂ.50,000/- ದಂತೆ ಒಟ್ಟು ರೂ.400.52 ಕೋಟಿ ಮೊತ್ತದ ಆರ್ಥಿಕ ನೆರವನ್ನು ನೀಡಿ ಮನೆಗಳ ಪುನರ್ನಿರ್ಮಾಣಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. 

ಸರ್ಕರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜು

ಹಿಜಾಬ್‌-ಕೇಸರಿ ವಸ್ತ್ರ ವಿವಾದ ನಿರ್ವಹಣೆ, ಬಿಟ್‌ಕಾಯಿನ್‌ ಹಗರಣ, ಗುತ್ತಿಗೆ ಕಾಮಗಾರಿಯಲ್ಲಿ ಶೇ.40ರಷ್ಟುಕಮಿಷನ್‌ ಆರೋಪ, ಕೊರೋನಾದಿಂದ ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬ, ಮೇಕೆದಾಟು, ಮಹದಾಯಿ ಯೋಜನೆ ಜಾರಿ ಸೇರಿದಂತೆ ವಿವಿಧ ವಿಷಯಗಳು ಸೋಮವಾರದಿಂದ ಆರಂಭವಾಗಲಿರುವ ಹತ್ತು ದಿನಗಳ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಸಾಕಷ್ಟುಬಿಸಿ ಬಿಸಿ ಚರ್ಚೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಬೆಳೆ ವಿಮೆ ಸಮಸ್ಯೆ, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಮಿತಿ ನಿಗದಿಪಡಿಸಿರುವುದು, ಎಪಿಎಂಸಿ ಕಾಯ್ದೆ ವಾಪಸು ಪಡೆಯುವುದು, ಕೃಷಿ ಭೂಮಿಯನ್ನು ಖಾಸಗಿಯವರು ಖರೀದಿಸುವ ಅವಕಾಶ ನೀಡುವ ಕಾಯ್ದೆ ವಾಪಸ್‌ ಪಡೆಯಬೇಕೆಂಬ ವಿಷಯಗಳು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆಗೆ ಒಳಗಾಗುವ ಸಂಭವವಿದೆ.

click me!