ಮಂಗಳೂರು-ಪುತ್ತೂರು ವಿದ್ಯುತ್‌ ಚಾಲಿತ ರೈಲು ಎಂಜಿನ್‌ ಪ್ರಾಯೋಗಿಕ ಸಂಚಾರ

Published : Jul 29, 2023, 09:14 AM IST
ಮಂಗಳೂರು-ಪುತ್ತೂರು ವಿದ್ಯುತ್‌ ಚಾಲಿತ ರೈಲು ಎಂಜಿನ್‌ ಪ್ರಾಯೋಗಿಕ ಸಂಚಾರ

ಸಾರಾಂಶ

ಮಂಗಳೂರು ಹೊರವಲಯದ ಪಡೀಲ…- ಕಬಕ ಪುತ್ತೂರು ನಡುವಿನ 46 ಕಿ.ಮೀ. ತನಕದ ವಿದ್ಯುದೀಕರಣಗೊಂಡ ರೈಲು ಮಾರ್ಗದಲ್ಲಿ ಶುಕ್ರವಾರ ವಿದ್ಯುತ್‌ ಚಾಲಿತ ರೈಲು ಎಂಜಿನ್‌ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿದೆ.

ಮಂಗಳೂರು (ಜು.29) :  ಮಂಗಳೂರು ಹೊರವಲಯದ ಪಡೀಲ…- ಕಬಕ ಪುತ್ತೂರು ನಡುವಿನ 46 ಕಿ.ಮೀ. ತನಕದ ವಿದ್ಯುದೀಕರಣಗೊಂಡ ರೈಲು ಮಾರ್ಗದಲ್ಲಿ ಶುಕ್ರವಾರ ವಿದ್ಯುತ್‌ ಚಾಲಿತ ರೈಲು ಎಂಜಿನ್‌ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿದೆ.

ಮಧ್ಯಾಹ್ನ ಸುಮಾರು 2.30ಕ್ಕೆ ಪಡೀಲ್‌ನಿಂದ ಹೊರಟ ರೈಲು ಸಂಜೆ 4 ಗಂಟೆಗೆ ಕಬಕ- ಪುತ್ತೂರು ತಲುಪಿತು. ನಂತರ ಹಿಮ್ಮುಖ ದಿಕ್ಕಿನಲ್ಲಿ ಚಲಿಸುವಾಗ ವೇಗದ ಪ್ರಯೋಗ ನಡೆಸಲಾಯಿತು ಎಂದು ಮೈಸೂರು ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್‌ (ಎಲೆಕ್ಟ್ರಿಕಲ…) ಸೌಂದರ್‌ ರಾಜನ್‌ ತಿಳಿಸಿದ್ದಾರೆ.

ಮಂಗಳೂರು: ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ನೈಸರ್ಗಿಕ ತಂತ್ರಜ್ಞಾನಕ್ಕೆ ಮೊರೆ

ನೈರುತ್ಯ ರೈಲ್ವೆ ಪ್ರಿನ್ಸಿಪಲ್‌ ಚೀಫ್‌ ಇಲೆಕ್ಟ್ರಿಕಲ್‌ ಇಂಜಿನಿಯರ್‌ ಜೈಪಾಲ್‌ ಸಿಂಗ್‌ ಅವರು ಈ ಪ್ರಾಯೋಗಿಕ ಓಡಾಟ ಮತ್ತು ಪರಿಶೀಲನೆಯ ನೇತೃತ್ವ ವಹಿಸಿದ್ದರು.

ಪ್ರಾಯೋಗಿಕ ಓಡಾಟ ನಡೆಸಿದ ವಿದ್ಯುದ್ಧೀಕರಗೊಂಡ ಮಾರ್ಗದಲ್ಲಿ ರೈಲುಗಳನ್ನು ಓಡಿಸಲು ಟ್ರ್ಯಾಕ್‌ ಫಿಟ್‌ ಪ್ರಮಾಣಪತ್ರ ಶೀಘ್ರದಲ್ಲೇ ದೊರೆಯಬಹುದು ಎಂದು ಸೌಂರ್ದ ರಾಜನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರು-ಹಾಸನ-ಮಂಗಳೂರು ಮಾರ್ಗ

Weather forecast: ದಕ್ಷಿಣಕನ್ನಡದಲ್ಲಿ ಮಳೆ ಇಳಿಮುಖ, ಉಡುಪಿಯಲ್ಲಿ ಮುಂದುವರಿಕೆ

ಜುಲೈ 2021 ರಲ್ಲಿ ಅರಸೀಕೆರೆ- ಹಾಸನ (47 ಕಿ.ಮೀ.) ಸಹಿತ ಮೈಸೂರು- ಹಾಸನ- ಮಂಗಳೂರು ಮಾರ್ಗವನ್ನು (300 ಕಿ.ಮೀ.) ವಿದ್ಯುದ್ದೀಕರಿಸುವ ಗುತ್ತಿಗೆಯನ್ನು ಒದಗಿಸಲಾಗಿತ್ತು. ಕೇಂದ್ರ ಬಜೆಟ್‌ 2018 ರಲ್ಲಿ ಈ ಯೋಜನೆಗೆ 315 ಕೋಟಿ ರು. ಮೀಸಲಿಡಲಾಗಿದೆ. ಯೋಜನೆಯನ್ನು ಪೂರ್ಣಗೊಳಿಸಲು ಅಂತಿಮ ದಿನಾಂಕವನ್ನು ಜೂನ್‌ 2024ಕ್ಕೆ ನಿಗದಿಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ