ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ, ದಾಖಲೆ ಮಳೆ ಎಲ್ಲೆಲ್ಲಿ ಎಷ್ಟೆಷ್ಟು..?

Published : Jul 08, 2022, 04:41 PM ISTUpdated : Jul 09, 2022, 09:11 AM IST
ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ,  ದಾಖಲೆ ಮಳೆ ಎಲ್ಲೆಲ್ಲಿ ಎಷ್ಟೆಷ್ಟು..?

ಸಾರಾಂಶ

* ಕರ್ನಾಟಕದಲ್ಲಿ ಮತ್ತೆ ಮಳೆಯ ಆರ್ಭಟ * ಮಳೆಯ  ರಣಾರ್ಭಟಕ್ಕೆ ತತ್ತರಿಸಿ ಹೋದ ಜನ * ಮಳೆ ಎಲ್ಲೆಲ್ಲಿ ಎಷ್ಟೆಷ್ಟು..?

ಬೆಂಗಳೂರು(ಜು.8): ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದಿದೆ. ಪರಿಣಾಮ ಹಲವು ಜಿಲ್ಲೆಗಳು ಮಳೆಯ  ರಣಾರ್ಭಟಕ್ಕೆ ತತ್ತರಿಸಿ ಹೋಗಿವೆ. ಇದರ ಜೊತೆಗೆ ಮುಂದಿನ ಮೂರು ದಿನಗಳು ಕೂಡ ಮಳೆ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರೋದು ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ. 

ಇನ್ನು ಮಳೆಯ ಪ್ರಮಾಣ ಹೇಗಿದೆ ಅಂತ ನೋಡೋದಾದ್ರೆ, ಕಳೆದ 24 ಗಂಟೆ ಅವಧಿಯಲ್ಲಿ ಮೂರು ಪ್ರದೇಶಗಳಲ್ಲಿ 200 mm ಗೂ ಅಧಿಕ ಮಳೆಯಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ದಾಖಲೆ ಮಳೆಯಾಗಿದೆ. ಉತ್ತರ ಕನ್ನಡದ ಶಿರಾಲಿಯಲ್ಲಿ 230.8 mm ದಾಖಲೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 224 mm ಮಳೆಯಾಗಿದೆ. ಉತ್ತರ ಕನ್ನಡದ ಕಾರವಾರದಲ್ಲಿ 205.2 mm ಮಳೆ ಯಾಗಿದೆ. ಒಟ್ಟು 15 ಪ್ರದೇಶಗಳಲ್ಲಿ 100 mm ರಿಂದ 200 mm ವರೆಗೂ ಮಳೆ ಸುರಿದಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲೇ ಅತಿ ಹೆಚ್ಚು ಮಳೆಯಾಗಿದೆ. 

Karnataka Reservoir Water Level: ಪ್ರವಾಹ ಭೀತಿಯ ನಡುವೆ ಸಂತಸದ ಸುದ್ದಿ, ಭರ್ತಿಯಾಗುತ್ತಿವೆ ಜಲಾಶಯಗಳು

ಯಾವ್ಯಾವ ಪ್ರದೇಶದಲ್ಲಿ ಹೆಚ್ಚು ಮಳೆ
ಉತ್ತರಕನ್ನಡ
- ಹೊನ್ನಾವರ - 198.7 mm
- ಅಂಕೋಲಾ - 177.4 mm
- ಮನ್ಕಿ - 177.4 mm
- ಗೇರುಸೊಪ್ಪ - 173 mm
- ಕುಮಟಾ - 144.8 mm
- ಸಿದ್ದಾಪುರ - 137.8 mm

ಉಡುಪಿ
- ಕುಂದಾಪುರ - 162.8mm
- ಬೆಳ್ತಂಗಡಿ - 134.2 mm

ದಕ್ಷಿಣ ಕನ್ನಡ
- ಪಣಂಬೂರು - 114 mm
- ಧರ್ಮಸ್ಥಳ - 107.8 mm
- ಮಂಗಳೂರು - 106.6 mm
- ಪುತ್ತೂರು - 102 mm 

ಶಿವಮೊಗ್ಗ
- ಲಿಂಗನಮಕ್ಕಿ - 125.4 mm

ಚಿಕ್ಕಮಗಳೂರು
- ಶೃಂಗೇರಿ - 117.6 mm 
- ಜಯಪುರ - 102.8 mm

ರಾಜ್ಯದಲ್ಲಿ ಮುಂದುವರೆದ ಮುಂಗಾರು ಮಳೆ, ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಕೂಡ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಇಂದು ಭಾರಿ ಮಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ನಾಳೆಯಿಂದ 3 ದಿನ ಯೆಲ್ಲೋ ಅಲರ್ಟ್ ಇರಲಿದೆ. ಬೆಳಗಾವಿ, ಕಲಬುರಗಿ ಮತ್ತು ಬೀದರ್‌ನಲ್ಲಿ ಮುಂದಿನ 72 ಗಂಟೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

ರಾಜ್ಯದಲ್ಲಿ ಜೂನ್‌ ತಿಂಗಳು ಮಳೆ ಕೊರತೆ ಎದುರಾಗಿತ್ತು. ಆದರೆ ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇಲ್ಲಿಯವರೆಗೆ ವಾಡಿಕೆಯಂತೆ 58 ಮಿಮೀ ಮಳೆ ಆಗಬೇಕಿತ್ತು. ಜುಲೈ 7 ರ ವರೆಗೆ 112 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಶೇ.94 ಕ್ಕೂ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ