ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಮ್ಯಾಂಡಸ್’ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಚಂಡಮಾರುತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮಂಗಳೂರು ಸಮೀಪದ ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರಸ್ನಾನಕ್ಕೆ ತೆರಳಿದ್ದ ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್ (47) ಎಂಬುವರು ಮೃತಪಟ್ಟಿದ್ದಾರೆ.
ಬೆಂಗಳೂರು/ಮಂಗಳೂರು/ಹುಬ್ಬಳ್ಳಿ (ಡಿ.12): ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಮ್ಯಾಂಡಸ್’ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಚಂಡಮಾರುತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮಂಗಳೂರು ಸಮೀಪದ ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರಸ್ನಾನಕ್ಕೆ ತೆರಳಿದ್ದ ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್ (47) ಎಂಬುವರು ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಮಳೆ ಹಿನ್ನೆಲೆಯಲ್ಲಿ ಮನೆಯ ಚಾವಣಿ ಮುಚ್ಚಲು ಹೋದ ರಾಜಶೇಖರ (28) ಎಂಬುವರು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಪರ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ಮಾಂಡೌಸ್ ಚಂಡಮಾರುತ: ರಾಜ್ಯ-ರಾಜಧಾನಿಯಲ್ಲಿ ಇನ್ನು ಮೂರು ದಿನ ಮಳೆ
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಉಪ್ಪಾರಹಳ್ಳಿ ತಾಂಡದಲ್ಲಿ ಸಿಡಿಲು ಬಡಿದು 10 ಕುರಿಗಳು ಸಾವನ್ನಪ್ಪಿವೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೌಡರಹಟ್ಟಿಯಲ್ಲಿ ಚಳಿಗೆ ಏಳು ಕುರಿಗಳು ಬಲಿಯಾಗಿವೆ. ಈ ಮಧ್ಯೆ, ತುಂತುರು ಮಳೆ, ಶೀತ ಗಾಳಿಯಿಂದ ಜನ ಕಂಗೆಟ್ಟಿದ್ದು, ವೃದ್ದರು, ಸಣ್ಣ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ಕಡಲೆ, ಶೇಂಗಾ, ಗೋಧಿ, ಸೂರ್ಯಕಾಂತಿ, ಬಿಳಿಜೋಳ, ಕುಸಬಿ, ಭತ್ತ, ಅಡಕೆ, ಮಾವು ಸೇರಿದಂತೆ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಸ್ಲೆತ್ರೖಕೋನ್‌ಗೆ ಬೆಂಡಾದ ಜನ: ಮಿಳುನಾಡಿನಲ್ಲಿ ಉಂಟಾಗಿರುವ ಮಾಂಡೌಸ್ ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನದಿಂದ ಬಿಟ್ಟು ಬಿಟ್ಟು ಬರುತ್ತಿರುವ ತುಂತುರು ಮಳೆ ಮತ್ತು ಮೈಕೊರೆಯುವ ಚಳಿಯಿಂದಾಗಿ ಜನರು ಬೆಂಡಾಗಿ, ಜನ ಜೀವನ ಅಸ್ತವ್ಯಸ್ಥವಾಗಿದೆ, ಬೀದಿ ಬದಿ ವ್ಯಾಪಾರಿಗಳು, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಈ ತುಂತುರು ಮಳೆ ಮತ್ತು ಚಳಿಯಿಂದಾಗಿ ತಲೆ ಮೇಲೆ ಬುಟ್ಟಿಹೊತ್ತು ಹಣ್ಣು, ತರಕಾರಿ ಮಾರಾಟ ಮಾಡುವವರು, ತಳ್ಳು ಗಾಡಿಯವರು, ವಾಹನಸವಾರರು ಪರದಾಡುವಂತಾಗಿ ಜನಜೀವನ ಅಸ್ತತ್ರವ್ಯಸ್ಥಗೊಂಡಿದೆ. ಇನ್ನೆರಡು ದಿನಗಳ ಕಾಲ ಇದೇ ಸ್ಥಿತಿ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಜಿಲ್ಲಾ ಕೇಂದ್ರ ಮತ್ತಷ್ಟುಅಸ್ತತ್ರವ್ಯಸ್ಥವಾಗುವುದರಲ್ಲಿ ಅನುಮಾನವಿಲ್ಲ, ಮಳೆಯಿಂದಾಗಿ ಬಸವೇಶ್ವರ ಚಿತ್ರ ಮಂದಿರ ಮುಂಭಾಗ, ಕೆಇಬಿ ಮುಂಭಾಗ, ಭುವನೇಶ್ವರಿ ವೃತ್ತದಲ್ಲಿ, ಕೆಸರು ಮಣ್ಣಿನಿಂದಾಗಿ ಜನರು ತಿರುಗಾಡಲು ಪರದಾಡುವಂತಾಗಿದೆ.
ತಮಿಳುನಾಡನಲ್ಲಿ ಮ್ಯಾಂಡಸ್ ಅಬ್ಬರ: 400 ಮರಗಳು ಧರೆಗೆ, 4 ಸಾವು
ಮಂಗಳವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದಿಂದಾಗಿ ಪೌರ ಕಾರ್ಮಿಕರು ಮಳೆ ರಕ್ಷಾ ಕವಚ ಧರಿಸಿ ಅಲ್ಲಲ್ಲಿ ಸ್ವಚ್ಚ ಮಾಡುತ್ತಾ, ಮಳೆ ನೀರು ಸಲೀಸಾಗಿ ಹರಿದು ಹೋಗುವಂತೆ ಮಾಡುತ್ತಿದ್ದಾರೆ. ಶುಕ್ರವಾರದಿಂದಲೇ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇತ್ತು. ಶನಿವಾರ ಹಾಗೂ ಭಾನುವಾರ ದಿನವಿಡೀ ಜಿಲ್ಲೆಯ ಹಲವು ಕಡೆಗಳಲ್ಲಿ ಚದುರಿದಂತೆ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಳೆ ರಜೆಯ ಮಜಾ ಕಸಿದಿದೆ. ತುಂತುರು ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆ ಮಾಡಲಾಗದೆ ಪರದಾಡುತ್ತಿದ್ದು ಮನೆಯಿಂದ ಹೊರ ಹೋಗಲು ಕೊಡೆ ಆಶ್ರಯಿಸಲೇ ಬೇಕಾಗಿದೆ.