ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು: ಅಪ್ಪಟ ಮೋದಿ ಅಭಿಮಾನಿ

Published : Feb 27, 2023, 07:05 PM IST
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು: ಅಪ್ಪಟ ಮೋದಿ ಅಭಿಮಾನಿ

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ಮೋದಿ ಅಭಿಮಾನಿಯೊಬ್ಬ ಕಾರ್ಯಕ್ರಮದ ಕೆಲವೇ ಹೊತ್ತಿನಲ್ಲಿ  ಹೃದಯಾಘಾತದಿಂದ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.

ಶಿವಮೊಗ್ಗ (ಫೆ.27): ಶಿವಮೊಗ್ಗದ ಸೋಗಾನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ಮೋದಿ ಅಭಿಮಾನಿಯೊಬ್ಬ ಕಾರ್ಯಕ್ರಮದ ಕೆಲವೇ ಹೊತ್ತಿನಲ್ಲಿ  ಹೃದಯಾಘಾತದಿಂದ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.

ಸೊರಬ ತಾಲೂಕಿನ ಚಿಮಲೂರು ಗ್ರಾಮದ ಮಲ್ಲಿಕಾರ್ಜುನ (56 )ಸಾವನ್ನಪ್ಪಿದ ದುರ್ದೈವಿ ಆಗಿದ್ದಾನೆ. ಸೋಗಾನೆ ಏರ್ಪೋರ್ಟ್ ರಸ್ತೆಯಲ್ಲಿರುವ ಸಂತೆ ಕಡೂರು ಗ್ರಾಮದ ಬಳಿ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕಾಗಿ ಸೊರಬದಿಂದ ಮಲ್ಲಿಕಾರ್ಜುನ ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ವಾಪಾಸಾಗುವ ವೇಳೆ ಉಂಟಾಗಿದ್ದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಲ್ಲಿಕಾರ್ಜುನ ಅವರು ಮಾರ್ಗದ ಮಧ್ಯದಲ್ಲಿಯೇ ಸುಸ್ತಾಗಿ ಕುಸಿದು ಬಿದ್ದಿದ್ದಾರೆ. 

ಹಠ, ಹೋರಾಟ, ಔದಾರ್ಯ ಮತ್ತು ಮೋಹ = ಬಿ.ಎಸ್.ಯಡಿಯೂರಪ್ಪ

ಪ್ರಥಮ ಚಿಕಿತ್ಸೆ ನೀಡುವವರೂ ಇರಲಿಲ್ಲ: ಇನ್ನು ಅಕ್ಕಪಕ್ಕದಲ್ಲಿ ಇದ್ದವರು ಕುಸಿದು ಬಿದ್ದ ವ್ಯಕ್ತಿಯನ್ನು ಕೂಡಲೇ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ, ಯಾರೊಬ್ಬರಿಗೂ ವೈದ್ಯಕೀಯ ಚಿಕಿತ್ಸೆ ಅಥವಾ ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆ ನೀಡುವ ಮಾಹಿತಿ ಇರಲಿಲ್ಲ. ಹೀಗಾಗಿ, ಕೆಲವೇ ಕ್ಷಣಗಳಲ್ಲಿ ಮಲ್ಲಿಕಾರ್ಜುನ ಅವರ ಪ್ರಾಣಪಕ್ಷಿ ಕುಸಿದು ಬಿದ್ದ ಸ್ಥಳದಲ್ಲಿಯೇ ಹಾರಿ ಹೋಗಿದೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಅವರನ್ನು ಆಸ್ಪತ್ರೆಗೆ ರವಾನಿಸಿದರಾದರೂ ಅವರ ಪಜೀವ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮೃತ ದೇಹವನ್ನು ಚಿಮಲೂರು ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ. 

ಗ್ರಾಮದಲ್ಲಿ ನೀರವ ಮೌನ: ಇನ್ನು ನರೇಂದ್ರ ಮೋದಿ ಅವರು ತಮ್ಮ ಜಿಲ್ಲೆಗೆ ಬಂದು ನೆಚ್ಚಿನ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಶ್ರಮದಿಂದ ನಿರ್ಮಿಸಲಾದ ಸೋಗಾನೆ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ. ಇನ್ನು ಊರಿನಲ್ಲಿ ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ವಿಶೇಷ ಕಾರ್ಯಕ್ರವನ್ನೂ ಆಯೋಜನೆ ಮಾಡಲಾಗಿತ್ತು. ರಾತ್ರಿ ವೇಳೆ ಗ್ರಾಮದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣ ಆಗುವುದರಲ್ಲಿತ್ತು. ಆದರೆ, ಈಗ ಮೋದಿ ಹಾಗೂ ಯಡಿಯೂರಪ್ಪ ಅವರ ಅಭಿಮಾನಿ ಮಲ್ಲಿಕಾರ್ಜುನ ಹೃದಯಾಘಾತದಿಂದ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಇನ್ನು ಮೃತದೇಹ ಗ್ರಾಮಕ್ಕೆ ತರುತ್ತಿದ್ದಂತೆಯೇ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ನೀರವ ಮೌನ ಆವರಸಿತ್ತು.

ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ಮಲೆನಾಡಿನ ಅಭಿವೃದ್ಧಿ ಸಂಕೇತ: ಯಡಿಯೂರಪ್ಪ ಭಾವುಕ ಭಾಷಣ

ಹೆಗಲ ಮೇಲೆ ಮಾಸದ ಬಿಜೆಪಿ ಶಲ್ಯ: ಮಲ್ಲಿಕಾರ್ಜುನ ಅವರು ಬೆಳಗ್ಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಾರೆ ಅವರನ್ನು ನೋಡಲೇಬೇಕು ಎಂಬ ಆತುರದಿಂದ ಬಿಳಿ ಪಂಚೆ, ಬಿಳಿ ಅಂಗಿ ಹಾಗೂ ಕೇಸರಿ ಬಣ್ಣದ ಬಿಜೆಪಿ ಕಮಲದ ಹೂವು ಮುದ್ರಿತ ಶಲ್ಯವನ್ನು ಧರಿಸಿಕೊಂಡು ಕಾರ್ಯಕ್ರಮಕ್ಕೆ ಹೋಗಿದ್ದರು. ಇನ್ನು ಕಾರ್ಯಕ್ರಮ ಮುಗಿದು ಮೋದಿ ಅವರನ್ನು ನೋಡಿದ ಹಾಗೂ ಅವರ ಭಾಷಣವನ್ನು ಕೇಳಿದ ಖುಷಿಯಲ್ಲಿ ಮನೆಗೆ ವಾಪಾಸ್‌ ಆಗುತ್ತಿದ್ದರು. ಇನ್ನು ಇಡೀ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಾಹನಗಳಿಂದ ಟ್ರಾಫಿಕ್‌ ಜಾಮ್‌ ನಿರ್ಮಾಣ ಆಗಿತ್ತು. ಇದರಿಂದ ನಡೆದುಕೊಂಡು ಹೋಗುವುದೇ ಒಳಿತು ಎಂದು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಆದರೆ, ಹಠಾತ್ತನೇ ಹೃದಯಾಘಾತ ಆಗಿದ್ದು, ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌