ಕಲಬುರಗಿಯಿಂದ ಖರ್ಗೆ ಅಳಿಯ ರಾಧಾಕೃಷ್ಣ ಲೋಕಸಭೆಗೆ ಸ್ಪರ್ಧೆ: ಚಿಂಚನಸೂರು ಅಚ್ಚರಿ ಹೇಳಿಕೆ

By Kannadaprabha News  |  First Published Oct 2, 2023, 12:28 PM IST

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಹೇಳಿಕೆ ಇಲ್ಲೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಕಲಬುರಗಿ (ಅ.2): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಹೇಳಿಕೆ ಇಲ್ಲೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್‌ ಹೈಕಮಾಂಡ್ ಇಂತಹ ದಾಳ ಉರುಳಿಸಬಹುದೇ ಎಂಬ ಬಗ್ಗೆ ಭಾನುವಾರ ಗುರುಮಠಕಲ್‌ನಲ್ಲಿ ಬಾಬುರಾವ್‌ ನೀಡಿರುವ ಈ ಹೇಳಿಕೆ ಅಚ್ಚರಿ ಮೂಡಿಸಿದೆ.

Tap to resize

Latest Videos

ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಯಾರನ್ನು ನಿಲ್ಲಿಸುತ್ತಾರೋ ಗೊತ್ತಿಲ್ಲ ಎಂದ ಚಿಂಚನಸೂರು, ತಮಗೆ ಇರುವ ಮಾಹಿತಿಯಿಂತೆ ರಾಧಾಕೃಷ್ಣ ಅವರನ್ನು ನಿಲ್ಲಿಸಬಹುದು ಎಂದಿದ್ದಾರೆ. ರಾಧಾಕೃಷ್ಣ ನಿಂತರೆ ಅವರಿಗೆ ಹೆಚ್ಚಿನ ಮತ ನೀಡಿ ಎಂಪಿ ಮಾಡುತ್ತೇವೆ. ಅವರಿಗೇ ಟಿಕೆಟ್ ನೀಡುವಂತೆ ನಾವು ಒತ್ತಾಯ ಮಾಡುತ್ತೇವೆ ಎಂದು ಬಾಬುರಾವ್‌ ಮಾಧ್ಯಮಗಳಿಗೆ ತಿಳಿಸಿದರು.

ಕರ್ನಾಟಕ ಡಿಸಿಎಂ ಆಗಿಯೇ ನಿವೃತ್ತಿ ಪಡೆಯುತ್ತೇನೆ: ಬಾಬುರಾವ್ ಚಿಂಚನಸೂರು

ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ಚಿಂಚನಸೂರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಪರಿಣಾಮ ಬೀರದು:

ಬಿಜೆಪಿ, ಜೆಡಿಎಸ್‌ ಪಕ್ಷಗಳ ಮೈತ್ರಿಯಿಂದ ರಾಜಕೀಯದಲ್ಲಿ ಏನೂ ಪರಿಣಾಮ ಬೀರುವುದಿಲ್ಲ ಎಂದ ಚಿಂಚನಸೂರು, ಬಿಜೆಪಿ ನೀರಿನಲ್ಲಿ ಮುಳುಗುವ ಹಡಗಿನಂತಾಗಿದ್ದು, ಅದರ ಜೊತೆಗೆ ದಳವೂ ಮುಳುಗುತ್ತಿದೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು 5 ಗ್ಯಾರೆಂಟಿಗಳ ಮೂಲಕ ಜನಮನ ಗೆದ್ದಿದೆ. ಡಾ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್‌ ಮಯವಾಗಲಿದೆ ಎಂದರು.

ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರದ ಮತದಾರರು ಪ್ರತಿಯೊಂದು ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿ ಒಂದು ಮತವೂ ವಿರೋಧ ಪಕ್ಷಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷವೇ ಮತ್ತೆ ಬಲಿಷ್ಠಗೊಳ್ಳುತ್ತದೆ, ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ ಬರುವುದು ಎಂದು ಭವಿಷ್ಯ ನುಡಿದರು.

ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರ ಆಯ್ಕೆ ಮಾಡೋ ಅಭ್ಯಾಸ ಹೊಂದಿವೆ: ಖರ್ಗೆ ಹೇಳಿಕೆಗೆ ಸಂಸತ್ತಲ್ಲಿ ಕೋಲಾಹಲ

ಕಳೆದ ಚುನಾವಣೆಯಲ್ಲಿ ವಿರೋಧಿಗಳು ನನ್ನ ಕಥೆ ಮುಗಿಯಿತು ಎಂದು ಸುಳ್ಳಿನ ಅಪಪ್ರಚಾರ ಮಾಡಿ ಸೋಲಿಸಿದ್ದಾರೆ. ನಾನಿನ್ನೂ ಸತ್ತಿಲ್ಲ ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ಖರ್ಗೆಯವರ ಕೈಯನ್ನು ಭದ್ರಪಡಿಸಬೇಕು ಎಂದರು.

click me!