ಸಾಲು ಸಾಲು ರಜೆ : ಶೃಂಗೇರಿ, ಮಡಿಕೇರಿ, ಧರ್ಮಸ್ಥಳದತ್ತ ಪ್ರವಾಸಿಗರ ದಂಡು!

Published : Oct 02, 2023, 11:37 AM IST
ಸಾಲು ಸಾಲು ರಜೆ : ಶೃಂಗೇರಿ, ಮಡಿಕೇರಿ, ಧರ್ಮಸ್ಥಳದತ್ತ ಪ್ರವಾಸಿಗರ ದಂಡು!

ಸಾರಾಂಶ

ಕಳೆದೆರೆಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾನುವಾರವೂ ಬೆಳಿಗ್ಗೆಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿತ್ತು. ಮಳೆಯ ನಡುವೆಯೂ ಶೃಂಗೇರಿಗೆ ಪ್ರವಾಸಿಗರ ದಂಡು ಹರಿದುಬರುತ್ತಿದೆ.

ಶೃಂಗೇರಿ (ಅ.2): ಕಳೆದೆರೆಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾನುವಾರವೂ ಬೆಳಿಗ್ಗೆಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿತ್ತು. ಮಳೆಯ ನಡುವೆಯೂ ಶೃಂಗೇರಿಗೆ ಪ್ರವಾಸಿಗರ ದಂಡು ಹರಿದುಬರುತ್ತಿದೆ.

ಸಾಲು ಸಾಲು ರಜೆ ಇದ್ದರಿಂದ ಭಾನುವಾರ ಬೆಳಿಗ್ಗೆಯಿಂದಲೇ ಶ್ರೀಮಠದ ಆವರಣ ಭಕ್ತಗಣದಿಂದ ಗಿಜಿಗಿಡುತ್ತಿತ್ತು. ಗಾಂಧಿ ಮೈದಾನ, ಭಾರತೀ ಬೀದಿ, ಬಸ್‌ ನಿಲ್ದಾಣದಲ್ಲಿ ಜನಜಂಗುಳಿ ಕಂಡುಬಂದಿತು. ವೀಕೆಂಡ್‌ ಆದ್ದರಿಂದ ಸರ್ಕಾರಿ ಬಸ್‌ ಗಳಲ್ಲಿ ನಾರಿಮಣಿಯರೇ ಹೆಚ್ಚಾಗಿ ಪ್ರಯಾಣಿಸುತ್ತಿದ್ದು ಎಲ್ಲಾ ಬಸ್‌ಗಳು ಭರ್ತಿಯಾಗಿ ಸಂಚರಿಸುತ್ತಿದ್ದವು.

ಬೃಹತ್ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗುತ್ತಿದ್ದ ಐವರು ಪ್ರವಾಸಿಗರನ್ನ ರಕ್ಷಿಸಿದ ಲೈಫ್‌ ಗಾರ್ಡ್

ಮಳೆಯನ್ನು ಲೆಕ್ಕಿಸದೇ ವಿವಿಧೆಡೆಗಳಿಂದ ಪ್ರವಾಸಿಗರು ಶೃಂಗೇರಿಯತ್ತ ಬರುತ್ತಿದ್ದಾರೆ. ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಶ್ರೀಮಠದ ನರಸಿಂಹವನ, ಭೋಜನಾ ಶಾಲೆ ಎಲ್ಲೆಡೆ ಭಕ್ತರ ನೂಕುನುಗ್ಗಲು ಇತ್ತು. ವಾಹನ, ಜನ ದಟ್ಟಣೆಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಆಗಾಗ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿತ್ತು.

ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿಯ ಉಗಮ ಸ್ಥಳವಾದ ಪಶ್ಚಿಮಘಟ್ಟದ ತಪ್ಪಲಿನ ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಉಪನದಿಗಳಾದ ನಂದಿನಿ, ನಳಿನಿ ನದಿಗಳು ಹರಿದು ಬರುವ ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಪ್ರವಾಹದ ಭೀತಿ ಎದುರಾಗಿಲ್ಲ.

ಕೊಡಗಿನಲ್ಲೂ ಪ್ರವಾಸಿಗರ ದಂಡು:

ಮಡಿಕೇರಿ: ಸಾಲು ಸಾಲು ಸಾರ್ವಜನಿಕ ರಜೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡು ಹರಿದುಬಂದಿದೆ. ಇದರಿಂದ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿದ್ದವು.

ಸಫಾರಿಗರ ಮುಂದೆ ಭದ್ರಾ ಹುಲಿಗಳ ಮಿಲನೋತ್ಸವ! ವಿಡಿಯೋ ಹರಿಬಿಟ್ಟ ಪ್ರವಾಸಿಗರು

ಪ್ರವಾಸಿಗರ ಆಗಮನ ಹೆಚ್ಚಳ ಹಿನ್ನೆಲೆಯಲ್ಲಿ ಹೋಂಸ್ಟೇ, ರೆಸಾರ್ಟ್ ಗಳು ಹಾಗೂ ಹೊಟೇಲ್‌ಗಳು ಹೌಸ್ ಫುಲ್ ಆಗಿತ್ತು. ಕುಶಾಲನಗರ ತಾಲೂಕಿನ ಕಾವೇರಿ ನಿಸರ್ಗಧಾಮದಲ್ಲಿಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಜಿಲ್ಲೆಯಲ್ಲಿ ಕಳೆದ ಮುರ್ನಾಲ್ಕು ದಿನದಿಂದ ಮಳೆ ಕೂಡ ಆಗುತ್ತಿದ್ದು, ತಂಪಾದ ವಾತಾವರಣದಲ್ಲಿ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.

ಮಡಿಕೇರಿ ನಗರದ ಅಬ್ಬಿಫಾಲ್ಸ್, ರಾಜಾಸೀಟು ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಸೇರಿದ್ದು, ಕೊಡಗಿನ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ