ಕಾವೇರಿ ನೀರು ನಿಗಮದ ಅಧಿಕಾರಿಗಳಿಗೆ ಸಚಿವರ ಎದುರೇ ಶಾಸಕ ನರೇಂದ್ರಸ್ವಾಮಿ ಹಿಗ್ಗಾಮುಗ್ಗಾ ತರಾಟೆ!

By Ravi JanekalFirst Published Sep 19, 2023, 3:51 PM IST
Highlights

ಮಳೆಯಾಶ್ರಿತ ಪ್ರದೇಶಗಳಲ್ಲಿ ಕೆರೆಕಟ್ಟೆಗಳಿಗೆ ನೀರು ತುಂಬಿಸದಿರೋದಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಶಾಸಕ ನರೇಂದ್ರಸ್ವಾಮಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಮಂಡ್ಯ (ಸೆ.19): ಮಳೆಯಾಶ್ರಿತ ಪ್ರದೇಶಗಳಲ್ಲಿ ಕೆರೆಕಟ್ಟೆಗಳಿಗೆ ನೀರು ತುಂಬಿಸದಿರೋದಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಶಾಸಕ ನರೇಂದ್ರಸ್ವಾಮಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಮಂಡ್ಯದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ಅವಲೋಕನ ಸಂಬಂಧ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Latest Videos

ನೀರಾವರಿ ನಿಗಮದ ಇಂಜಿನಿಯರ್‌ಗಳಾಗಿ ನೀವೇನು ಕೆಲಸ ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ ಶಾಸಕರು, ಬೆಳೆಗೆ ನೀರು ಕೇಳ್ತಿಲ್ಲ, ಕೆರೆ ಕಟ್ಟೆಗಳಿಗೆ ಯಾಕೆ ನೀರು ತುಂಬಿಸಿಲ್ಲ. ಕನ್ನಂಬಾಡಿ ಕಟ್ಟೆ ನೀರು ಎರಡು ತಾಲೂಕಿಗೆ ಮಾತ್ರ  ಸೀಮಿತವಾಗಿದೆಯ? ಮಳವಳ್ಳಿ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರೇ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ವೇಳೆ ತಬ್ಬಿಬ್ಬಾದ ಅಧಿಕಾರಿಗಳು.

ಹಿಂದಿನ ಕಾಮಗಾರಿ ನಡೆದಿಲ್ಲ, ಬಿಲ್‌ಪಾಸ್‌ ಮಾಡಬಾರದು: ಶಾಸಕ ನರೇಂದ್ರಸ್ವಾಮಿ ಸೂಚನೆ

ಕೆರೆ ಕಟ್ಟೆಗಳಿಗೆ ನೀರು ಬಿಟ್ಟಿದ್ದೇವೆ ಎಂದು ಸಬೂಬು ಹೇಳುತ್ತಿದ್ದಂತೆ ಮತ್ತಷ್ಟು ಕೋಪಗೊಂಡ ಶಾಸಕರು,
ಎಷ್ಟು ಕೆರೆಗೆ ನೀರು ತುಂಬಿಸಿದ್ದೀರಿ ಮಾಹಿತಿ ಕೊಡಿ ಎನ್ನುತ್ತಿದ್ದಂತೆ ತಡಬಡಾಯಿಸಿದರು. ಮೊದಲು ನಮ್ಮ ಭಾಗದ ಕೆರೆಕಟ್ಟೆಗಳಿಗೆ ನೀರು ತುಂಬಿಸಿ. ನಾವು ನಿಮ್ ಸಹವಾಸಕ್ಕೇ ಬರೋದಿಲ್ಲ ಎಂದರು. ಬಳಿಕ ಸಚಿವ ಚಲುವರಾಯಸ್ವಾಮಿಗೆ ಮನವಿ ಮಾಡಿದರು.

click me!