ಹಿಂದೂ ಧರ್ಮ ಅಂದ್ರೆ ಅದು ಹಿಂದೂಗಳ ಧರ್ಮ ಅಲ್ಲ, ಬ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ ಎಂದು ಮಹಿಷ ದಸರಾ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.
ಮೈಸೂರು (ಸೆ.29): ಹಿಂದೂ ಧರ್ಮ ಅಂದ್ರೆ ಅದು ಹಿಂದೂಗಳ ಧರ್ಮ ಅಲ್ಲ, ಬ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ ಎಂದು ಮಹಿಷ ದಸರಾ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.
ಮೈಸೂರಿನ ಟೌನ್‌ಹಾಲ್‌ನಲ್ಲಿ ಆಯೋಜಿಸಿರುವ ಮಹಿಷ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಎಸ್ ಭಗವಾನ್, ಬೌದ್ಧರನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ ಮತ್ತೆ ಹೀನವಾಗಿ ಮಾತನಾಡಿದರು.
ರಾಜ, ಪುರೋಹಿತರು ಮಾಡಿದ ಇತಿಹಾಸ ಒಡೆಯುವ ಕಾಲ ಬಂದಿದೆ: ಯೋಗೇಶ್ ಮಾಸ್ಟರ್
ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಬ್ರಾಹ್ಮಣರ ಗುಲಾಮರಾಗಿದ್ದಾರೆ. ಹಿಂದೂಗಳೆಂದರೆ ಹಿಂದಕ್ಕೆ ಹೋಗುವ ಜನ. ತಾವೂ ಮುಂದಕ್ಕೆ ಬಾರದೆ, ಬೇರೆಯವರನ್ನು ಮುಂದಕ್ಕೆ ಬಿಡದ ಜನ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಅನ್ನುವುದಿಲ್ಲ. ಅವರನ್ನು ಸಹ ಶೂದ್ರರು ಅಂತಾರೆ. ದೇವಸ್ಥಾನ ಕಟ್ಟೋದು ಶೂದ್ರರು. ದೇವಸ್ಥಾನದ ಒಳಗೆ ಇರೋರು ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಒಳಗೆ ಬಿಟ್ಟುಕೊಳ್ಳಲ್ಲ. ನಾವು ಶೂದ್ರರಲ್ಲಾ ಎಂದು ಹೇಳಬೇಕು. ಶೂದ್ರರು ಬ್ರಾಹ್ಮಣರ ದೇವಸ್ಥಾನಗಳಿಗೆ ಹೋಗೋದನ್ನು ಮೊದಲು ನಿಲ್ಲಿಸಬೇಕು ಎಂದು ಕರೆ ನೀಡಿದರು.
ನಾನು 50 ವರ್ಷ ಆಯ್ತು ದೇವಸ್ಥಾನಕ್ಕೆ ಹೋಗಿ. ದೇವಸ್ಥಾನಕ್ಕೆ ಹೋದ್ರೆ ಏನೂ ಆಗೊಲ್ಲ, ಹೋಗದಿದ್ರೂ ಏನೂ ಆಗೊಲ್ಲ. ತಟ್ಟೆಗೆ ದುಡ್ಡು ಹಾಕ್ತೀರಾ. ಒಡೆದ ಕಾಯಿಯ ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡ್ತಾರೆ ಅಷ್ಟೇ. ಶೂದ್ರರಿಗೆ ಮಾನ ಮರ್ಯಾದೆ ಅನ್ನೋದು ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ಮನುಸ್ಮೃತಿಯಲ್ಲಿ ಶೂದ್ರ ಅಂದರೆ ಸೂಳೆಗೆ ಹುಟ್ಟಿದವನು ಅಂತಾ ಇದೆ. ಹೇಳಿ ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ? ಎಂದು ಪ್ರಶ್ನಿಸಿದರು.
ಮೈಸೂರು: 'ಚಾಮುಂಡಿ ಕಾಲ್ಪನಿಕ, ಮಹಿಷಾಸುರನನ್ನು ಕೊಂದಿಲ್ಲ' - ನಂಜರಾಜೇ ಅರಸ್
ಹಿಂದೂ ಧರ್ಮ ನಮ್ಮದಲ್ಲ. ನಮಗೆ ಹಿಂದೂ ಧರ್ಮ ಬೇಕಿಲ್ಲ. ಎಲ್ಲರೂ ಬೌದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದು ನಂಬಿ ಅಂತಾ ಬುದ್ಧ ಹೇಳೊಲ್ಲ. ಆದರೆ ನಾನು ಹೇಳಿದ್ದನ್ನು ಕೇಳಿ ಅಂತಾ ಏಸು ಹೇಳ್ತಾರೆ. ನಾನು ಹೇಳಿದ್ದು ಕೇಳದಿದ್ರೆ ನರಕಕ್ಕೆ ಹೋಗ್ತೀರಿ ಅಂತಾ ಕೃಷ್ಣ ಹೇಳ್ತಾನೆ. ಗುಲಾಮ, ಸೂ* ಮಗ ಎಂದು ಹೇಳುವ ಹಿಂದೂ ಧರ್ಮದಲ್ಲಿ ನಾವು ಇರಬಾರದು. ಬೌದ್ಧ ಧರ್ಮಕ್ಕೆ ಹೋಗಬೇಕು. ಸೂ*ಮಗ ಎನ್ನುವ ಹಿಂದೂ ಧರ್ಮಕ್ಕೆ ನಮ್ಮ ಎಡಗಾಲು ಎಕ್ಕಡ ತಗೊಂಡು ಹೊಡೆಯಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕಾಗಿದೆ ಎಂದ ಭಗವಾನ್.