ರಾಜ, ಪುರೋಹಿತರು ಮಾಡಿದ ಇತಿಹಾಸ ಒಡೆಯುವ ಕಾಲ ಬಂದಿದೆ: ಯೋಗೇಶ್ ಮಾಸ್ಟರ್

Published : Sep 29, 2024, 01:48 PM IST
ರಾಜ, ಪುರೋಹಿತರು ಮಾಡಿದ ಇತಿಹಾಸ ಒಡೆಯುವ ಕಾಲ ಬಂದಿದೆ: ಯೋಗೇಶ್ ಮಾಸ್ಟರ್

ಸಾರಾಂಶ

ಮಹಿಷ ದಸರಾ 2024: ಮಹಿಷ ದಸರಾ ನಿಜವಾದ ಪ್ರಜಾಪ್ರಭುತ್ವದ ಉತ್ಸವವಾಗಿದೆ. ಆಳುವ ವರ್ಗದ ಭಟ್ಟಂಗಿಗಳ ಚರಿತ್ರೆಗಳನ್ನು ಓದುತ್ತಿದ್ದೇವೆ. ನಮಗೆ ಬೇಕಾಗಿರುವುದು ಜನರ ಚರಿತ್ರೆ ಎಂದು ಚಿಂತಕ ಯೋಗೇಶ್ ಮಾಸ್ಟರ್ ನುಡಿದರು.

ಮೈಸೂರು (ಸೆ.29): ಮಹಿಷ ದಸರಾ 2024: ಮಹಿಷ ದಸರಾ ನಿಜವಾದ ಪ್ರಜಾಪ್ರಭುತ್ವದ ಉತ್ಸವವಾಗಿದೆ. ಆಳುವ ವರ್ಗದ ಭಟ್ಟಂಗಿಗಳ ಚರಿತ್ರೆಗಳನ್ನು ಓದುತ್ತಿದ್ದೇವೆ. ನಮಗೆ ಬೇಕಾಗಿರುವುದು ಜನರ ಚರಿತ್ರೆ ಎಂದು ಚಿಂತಕ ಯೋಗೇಶ್ ಮಾಸ್ಟರ್ ನುಡಿದರು.

ಮೈಸೂರಿನ ಟೌನ್‌ಹಾಲ್‌ನಲ್ಲಿ ಆಯೋಜಿಸಿರುವ ಮಹಿಷ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಬುದ್ಧ, ಅಂಬೇಡ್ಕರ್, ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಯೋಗೇಶ್ ಮಾಸ್ಟರ್, ಮಹಿಷಾಸುರ ರಾಕ್ಷಸನಲ್ಲ, ದೊರೆ. ರಾಕ್ಷಸ, ಅಸುರರೆಂದರೆ ಸಿನಿಮಾಗಳಲ್ಲಿ ತೋರಿಸಿದಂತೆ ದುಷ್ಟರಲ್ಲ. ಅಸುರರು ಕಬ್ಬಿಣ ವಿದ್ಯೆಯಲ್ಲಿ ಪ್ರಾವೀಣ್ಯರು. ರಾಕ್ಷಸರು ಎಂದರೆ ರಕ್ಷಕರು ಎಂದರ್ಥ. ತಮ್ಮ ದೃಷ್ಟಿಗೆ ತಕ್ಕಂತೆ ಒಂದು ವರ್ಗ ಬರೆದದನ್ನ ಎಲ್ಲರೂ ಒಪ್ಪಬೇಕು ಎಂದೆನಿಲ್ಲ. ಚಂಡ ಮುಂಡರನ್ನ ಕೊಂದವಳು ಚಾಮುಂಡಿ ಅಂತಾ ಹೇಳ್ತಾರೆ. ಹಾಗಾದ್ರೆ ಮಹಿಷಾಸುರನನ್ನು ಕೊಂದ ಚಾಮುಂಡಿ ಹೇಗಾದಳು? ಎಂದು ಪ್ರಶ್ನಿಸಿದರು.

ಮಹಿಷ ದಸರಾ ವಿರೋಧಿಸಿದ ಸಂಸದ ಪ್ರತಾಪ್ ಸಿಂಹನಿಗೆ ರಾಮಮಂದಿರ ಪೂಜೆಗೆ ಬಹಿಷ್ಕರಿಸಿದ ಕಾಂಗ್ರೆಸ್!

ಆವೇಶಕ್ಕೆ ಒಳಗಾಗದೆ ನಾವು ಇದೆಲ್ಲವನ್ನ ಗಮನಿಸಬೇಕು. ರಾಜರು, ಪುರೋಹಿತರು ಸೇರಿ ಮಾಡಿರುವ ಇತಿಹಾಸ ಒಡೆಯುವ ಕಾಲ ಬಂದಿದೆ. ಮಹಿಷಾಸುರನ ನಿಜವಾದ ವ್ಯಕ್ತಿತ್ವ ಹೊರತರಬೇಕು. ಸಂಸ್ಕೃತ ಕಲಿಯದಿದ್ರೆ ಸ್ವರ್ಗಕ್ಕೆ ಹೋಗಲು ಆಗಲ್ಲ ಎಂದು ಸ್ವಾಮೀಜಿಗಳೊಬ್ಬರು ಹೇಳಿದ್ದಾರೆ. ಬಹುಶಃ ಅವರು ಹೋಗಲು ಆಗಲ್ಲ ಎನಿಸುತ್ತದೆ. ಸಂಸ್ಕೃತಕ್ಕಿಂತಲೂ ಮೊದಲು ದೇಶದಲ್ಲಿ ಹಲವು ಭಾಷೆಗಳಿದ್ದವೂ. ರಾಮಾಯಣ ಮಹಾಭಾರತ ಮಹಾನ್ ಕಾವ್ಯಗಳು. ಕಾವ್ಯಗಳು ಹುಟ್ಟುವುದು ಜನರಿಂದ. ಕಾವ್ಯಗಳನ್ನ ಅನ್ವಯಿಸಿಕೊಳ್ಳುತ್ತಾ ಇಡೀ ದೇಶದಾದ್ಯಂತ ರಾಮಾಯಣ, ಮಹಾಭಾರತ ಸಂಚರಿಸಿತು. ಪೂರ್ವನಿರ್ಧಾರಿತ ಕಥನ, ರೂಪಕಗಳನ್ನ ಬಿಡಿಸಿ ನೋಡಬೇಕು. ಏಕಪಕ್ಷೀಯವಾದ ಗ್ರಂಥಗಳು, ಜೋತಿಷ್ಯಗಳಿಂದ ಎಚ್ಚೆತ್ತುಕೊಳ್ಳಬೇಕು ಎಂದರು.
Chikkamagaluru: ಮಹಿಷ ದಸರಾ ಆಚರಣೆಗೆ ಯತ್ನ: ಹಲವರ ಬಂಧನ, ಸರ್ಕಾರದ ವಿರುದ್ಧ ಪ್ರತಿಭಟನೆ

ಕಾರ್ಯಕ್ರಮದಲ್ಲಿ  ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ ಕೆ ಎಸ್ ಭಗವಾನ್, ಮಾಜಿ‌ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ