
ಪಣಜಿ (ಜು.31): ಮಹದಾಯಿ ವನ್ಯಜೀವಿ ಅಭಯಾರಣ್ಯ ಹಾಗೂ ಸುತ್ತಲಿನ ಪ್ರದೇಶಗಳನ್ನು ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಬೇಕೆಂದು ಬಾಂಬೆ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವ ಗೋವಾದ ಬಿಜೆಪಿ ಸರ್ಕಾರದ ನಿಲುವಿಗೆ ರಾಜ್ಯ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಹುಲಿ ರಕ್ಷಿತಾರಣ್ಯದ ಕುರಿತಾಗಿ ಹೈಕೋರ್ಟ್ ನೀಡಿರುವ ಆದೇಶವು ಕರ್ನಾಟಕದ ಜೊತೆಗಿನ ಮಹದಾಯಿ ವಿವಾದದ ಹಿನ್ನೆಲೆಯಲ್ಲಿ ಗೋವಾದ ಪರವಾಗಿಯೇ ಇದೆ. ಹೀಗಾಗಿ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವುದು ರಾಜ್ಯದ ಮಹದಾಯಿ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಪಾಟ್ಕರ್ ಹೇಳಿದ್ದಾರೆ.
ಬರೋಬ್ಬರಿ 35 ಬಾರಿ ಪರೀಕ್ಷೆಯಲ್ಲಿ ಫೇಲ್, UPSC ಎರಡು ಬಾರಿ ಪಾಸಾಗಿ ಐಎಎಸ್ ಅಧಿಕಾರಿಯಾದ ವ್ಯಕ್ತಿ!
ಮಹದಾಯಿ ಉಳಿಸಲು ಆದೇಶ ಜಾರಿಗೊಳಿಸಿ: ಮೂರು ತಿಂಗಳೊಳಗಾಗಿ ಮಹದಾಯಿ ಅಭಯಾರಣ್ಯವನ್ನು ಹುಲಿ ರಕ್ಷಿತಾರಣ್ಯವೆಂದು ಘೋಷಿಸುವಂತೆ ಇತ್ತೀಚೆಗೆ ಬಾಂಬೆ ಹೈಕೋರ್ಟ್ ನ ಗೋವಾ ಪೀಠ ಆದೇಶಿಸಿತ್ತು. ಅದರ ಬೆನ್ನಲ್ಲೇ ಈ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಗೋವಾದ ಅರಣ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದರು.
ಅದಕ್ಕೆ ಭಾನುವಾರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಕೋರ್ಟ್ ಆದೇಶ ನಮ್ಮ ಪರವಾಗಿದೆ. ನಮ್ಮ ಮಹದಾಯಿ ನದಿಯನ್ನು ರಕ್ಷಿಸಿಕೊಳ್ಳಬೇಕೆಂದರೆ ಈ ಆದೇಶ ಜಾರಿಗೊಳಿಸಬೇಕು. ಆದರೆ ಅದಕ್ಕೆ ವಿರುದ್ಧವಾದುದನ್ನು ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಹುಲಿ ರಕ್ಷಿತಾರಣ್ಯವನ್ನು ಘೋಷಿಸಿದರೆ 10ರಿಂದ 15 ಸಾವಿರ ಜನರನ್ನು ಕಾಡಿನಿಂದ ಒಕ್ಕಲೆಬ್ಬಿಸಲಾಗುತ್ತದೆ ಎಂದು ಸುಳ್ಳು ಭಯ ಹುಟ್ಟಿಸಲಾಗುತ್ತಿದೆ. ಜನವಸತಿ ಪ್ರದೇಶಗಳನ್ನು ಈಗಾಗಲೇ ಹುಲಿ ರಕ್ಷಿತಾರಣ್ಯದ ಯೋಜನೆಯಿಂದ ಅರಣ್ಯ ಇಲಾಖೆ ಹೊರಗಿಟ್ಟಿದೆ. ಈ ಬಗ್ಗೆ ಅಲ್ಲಿನ ಎಸ್‌ಸಿ, ಎಸ್‌ಟಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸ್ವತಃ ಕೋರ್ಟ್ ಹೇಳಿದೆ’ ಎಂದು ತಿಳಿಸಿದೆ.
ಪ್ರವಾಸಿಗರಿಗೆ ಗುಡ್‌ನ್ಯೂಸ್: ವೀಕ್ಷಣೆಗೆ ಮುಕ್ತಗೊಂಡ ಮುಳ್ಳಯ್ಯನಗಿರಿ, ದತ್ತಪೀಠ ಹಾ
ಹುಲಿ ರಕ್ಷಿತಾರಣ್ಯ ಘೋಷಿಸಿದರೆ ಅದರಲ್ಲಿ ಕಳಸಾ-ಬಂಡೂರಾ ನಾಲಾ ತಿರುವು ಯೋಜನೆಯನ್ನು (ಮಹದಾಯಿ ನದಿಯ ನೀರಿನ ಬಳಕೆ ಯೋಜನೆ) ಜಾರಿಗೊಳಿಸಲು ಉದ್ದೇಶಿಸಿರುವ ಕರ್ನಾಟಕದ ಕೆಲ ಅರಣ್ಯ ಭಾಗಗಳೂ ಸೇರುತ್ತವೆಯೆಂದು ಕರ್ನಾಟಕ ಆತಂಕದಲ್ಲಿದೆ. ಅತ್ತ ಗೋವಾ ಸರ್ಕಾರ ಕೂಡ ಹುಲಿ ರಕ್ಷಿತಾರಣ್ಯದ ವಿರುದ್ಧವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿರೋಧ ಮಹತ್ವ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ