ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಮನೆ ಮೈಸೂರಿನ ಕುವೆಂಪುನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿ ಮೂರು ಮಹಡಿಯಲ್ಲಿ ಐಷಾರಾಮಿಯಾಗಿ ನಿರ್ಮಾಣವಾಗುತ್ತಿದೆ.
ಮೈಸೂರು (ಜು.31): ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಮನೆ ಮೈಸೂರಿನಲ್ಲಿ ಸಿದ್ಧವಾಗುತ್ತಿದೆ. ಮೈಸೂರಿನ ಕುವೆಂಪುನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿ ಸುಮಾರು 85/120 ವಿಸ್ತೀರ್ಣದಲ್ಲಿ ಒಟ್ಟು ಮೂರು ಮಹಡಿಯನ್ನು ಒಳಗೊಂಡಂತೆ ಐಷಾರಾಮಿಯಾಗಿ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಮನೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಸಿಎಂ ಸಿದ್ದರಾಮಯ್ಯ ಬಿಡುವು ಪಡೆದುಕೊಂಡು ಹೋಗಿ ಮನೆ ವೀಕ್ಷಣೆ ಮಾಡಿ ಬಂದಿದ್ದಾರೆ.
ಮೈಸೂರಿನ ಕುವೆಂಪುನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿ ಸುಮಾರು 85/120 ವಿಸ್ತೀರ್ಣದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರು ಮೂಲದ ಕಂಪನಿಯಿಂದ ಮನೆ ಕಟ್ಟಲಾಗುತ್ತಿದೆ. ಭವ್ಯವಾಗಿ ನಿರ್ಮಾಣ ಆಗುತ್ತಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಸೆಲ್ಲಾರ್, ಗ್ರೌಂಡ್ ಫ್ಲೋರ್, ಫಸ್ಟ್ ಹಾಗೂ ಸೆಕೆಂಡ್ ಫ್ಲೋರ್ ಒಳಗೊಂಡಿದೆ. ಇದು ಸಂಪೂರ್ಣವಾಗಿ ಕೇಂದ್ರೀಯ ಹವಾನಿಯಂತ್ರಿತ (ಸೆಂಟ್ರಲೈಸ್ಡ್ ಏರ್ ಕೂಲಿಂಗ್-ಎಸಿ) ವ್ಯವಸ್ಥೆಯುಳ್ಳ ಬಂಗಲೆಯಾಗಿ ನಿರ್ಮಿಸಲಾಗುತ್ತಿದೆ. ಇನ್ನು ಬಂಗಲೆ ಪ್ರವೇಶಕ್ಕೆ ಎರಡು ಮುಖ್ಯ ದ್ವಾರಗಳ ವ್ಯವಸ್ಥೆ ಮಾಡಲಾಗುತ್ತಿದೆ.
undefined
ನಾಳೆಯಿಂದ ಬೆಂಗಳೂರು- ಮೈಸೂರು ದಶಪಥದಲ್ಲಿ ಬೈಕ್, ಆಟೋ ನಿಷೇಧ: ನಿಯಮ ಉಲ್ಲಂಘಿಸಿದರೆ 500 ರೂ. ದಂಡ
ಮಗನ ಪುಣ್ಯತಿಥಿ ನೆರವೇರಿಸಿದ ಸಿದ್ದರಾಮಯ್ಯ: ಈಗಾಗಲೇ ಕಟ್ಟಡ ನಿರ್ಮಾಣ ಹಂತವು ಮುಕ್ತಾಯಕ್ಕೆ ಬಂದಿದ್ದು, ಕಟ್ಟಡದ ಪ್ಲಾಸ್ಟರಿಂಗ್, ವೈರಿಂಗ್ ಹಾಗೂ ವುಡ್‌ವರ್ಕ್ ಪ್ರಗತಿಯಲ್ಲಿದೆ. ಸೋಮವಾರ (ಜು.31ರಂದು) ತಮ್ಮ ಪುತ್ರ ರಾಕೇಶ್‌ನ ಪುಣ್ಯತಿಥಿಗೆ ಮೈಸೂರಿನ ಮನೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಬಂಗಲೆ ವೀಕ್ಷಣೆ ಮಾಡಿದ್ದಾರೆ. ಇನ್ನು ಮನೆಯ ಕಾಮಗಾರಿ ವೀಕ್ಷಣೆ ಮಾಡಿ ಇಂಜಿನಿಯರ್ ಹಾಗೂ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದರು. ಸುಮಾರು, ಅರ್ಧ ಗಂಟೆ ಮನೆ ಒಳಗೆ ಇದ್ದು ಕಾಮಗಾರಿ ವೀಕ್ಷಣೆ ಮಾಡಿದರು.
ಬಾಡಿಗೆ, ಆಪ್ತರ ಮನೆಯಲ್ಲಿಯೇ ವಾಸ: ಇನ್ನು ಮೈಸೂರಿನಲ್ಲಿ ಈವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು ಮೈಸೂರಿನಲ್ಲಿ ಬರೋಬ್ಬರಿ ನಾಲ್ಕು ಬಾರಿ ಮನೆ ಬದಲಿಸಿದ್ದಾರೆ. ಇನ್ನು ಈ ನಾಲ್ಕು ಮನೆಗಳು ಕೂಡ ಬಾಡಿಗೆ, ಬೆಂಬಲಿಗರು, ಸ್ನೇಹಿತರ ಮನೆಯಲ್ಲೇ ವಾಸ ಮಾಡುತ್ತಿದ್ದಾರೆ. ಈಗ ಸದ್ಯ ತಮ್ಮ ಆಪ್ತ ಮರಿಸ್ವಾಮಿ ಮನೆಯಲ್ಲಿ ವಾಸವಿದ್ದಾರೆ. ಇದಕ್ಕಿಂತ ಮೊದಲು ವಿಜಯನಗರ ಎರಡನೇ ಹಂತ ಬಡಾವಣೆಯಲ್ಲಿ ಸಿದ್ದರಾಮಯ್ಯ ಮೊದಲ ಮನೆ ಇತ್ತು. ಉಪ ಮುಖ್ಯಮಂತ್ರಿ ಆಗಿದ್ದ ವೇಳೆ ಆ ಮನೆಯನ್ನು ಸಿದ್ದರಾಮಯ್ಯ ಮಾರಿದ್ದರು. ನಂತರ ಬೇರೆಯವರ ಮನೆಯಲ್ಲೇ ಕಾಲ ಕಳೆದುಕೊಂಡು ಬಂದಿದ್ದರು. ಈಗ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಹೊಸ ವರ್ಷದೊಳಗೆ ಉದ್ಘಾಟನೆ ಆಗುವ ಸಾಧ್ಯತೆಯಿದೆ.
ಮೈಸೂರು ಅರಮನೆಗೆ ಎರಡು ದಿನ ಪ್ರವೇಶ ನಿಷೇಧ: ಪ್ರವಾಸಿಗರೇ ಗಮನಿಸಿ
ಸಿದ್ದರಾಮಯ್ಯ ಒಡೆತನದ ಒಂದೇ ಒಂದು ಮನೆ: ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿ ಆಗಿದ್ದರೂ ಸ್ವಂತ ಮನೆಯನ್ನು ಹೊಂದಿಲ್ಲ. ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದಾಗಲೇ ತಮಗೆ ಇದ್ದ ಒಂದು ಸ್ವಂತ ಮನೆಯನ್ನು ಮಾರಾಟ ಮಾಡಿದ್ದರು. ಅಂದಿನಿಂದ ಈವರೆಗೆ ಬಾಡಿಗೆ ಹಾಗೂ ಆಪ್ತರ ಮನೆಗಳು ಸೇರಿದಂತೆ ನಾಲ್ಕು ಮನೆಗಳನ್ನು ಬದಲಿಸಿದ್ದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಅವಧಿಯಲ್ಲಿಯೇ ತಮ್ಮ ಐಷಾರಾಮಿಯಾಗಿ ನಿರ್ಮಿಸಲಾಗುತ್ತಿರುವ ಹೊಸ ಮನೆಗೆ ಗೃಹ ಪ್ರವೇಶ ಮಾಡುವ ಸಾಧ್ಯತೆಯಿದೆ. ಇದು ಸಿದ್ದರಾಮಯ್ಯ ಒಡೆತನದ ಒಂದೇ ಒಂದು ಮನೆ ಆಗಿದೆ.