Karnataka Congress MLAs foreign tour: 'ನಮ್ಮನ್ನು ಯಾರೂ ಕರೆದಿಲ್ಲ, ಅವರದ್ದೇ ಒಂದು ಟೀಂ, ಮಜಾ ಮಾಡಿಕೊಂಡು ಬರ್ಲಿ ಬಿಡಿ ಎಂದ ಮಾಗಡಿ ಶಾಸಕ!

Kannadaprabha News, Ravi Janekal |   | Kannada Prabha
Published : Feb 19, 2026, 07:05 AM ISTUpdated : Feb 19, 2026, 07:07 AM IST
HC Balakrishna

ಸಾರಾಂಶ

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದ್ದು, ನಮ್ಮನ್ನು ಯಾರೂ ಕರೆದಿಲ್ಲ, ಸ್ನೇಹಿತರು ಮಜಾ ಮಾಡಲು ಹೋಗಿದ್ದಾರೆ ಎಂದಿದ್ದಾರೆ. ಆದರೆ, ಈ ಪ್ರವಾಸದ ಉದ್ದೇಶದ ಬಗ್ಗೆ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಮನಗರ (ಫೆ.19): ಫಾರಿನ್ ಟೂರ್‌ಗೆ ನಮ್ಮನ್ನು ಯಾರೂ ಕರೆದಿಲ್ಲ. ನಮ್ಮದೇ ಒಂದು ಟೀಮ್, ಅವರದ್ದೇ ಒಂದು ಟೀಮ್. ಅವರೆಲ್ಲರೂ ಸ್ನೇಹಿತರು ಹೋಗಿದ್ದಾರೆ. ಮಜಾ ಮಾಡಿಕೊಂಡು ಬರಲಿ ಬಿಡಿ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. 

ನಾನೂ ಸಹ ಹದಿನೈದು ದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದೆ

ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಕೆಲಸ ಜಾಸ್ತಿ ಇದೆ. ಹಾಗಾಗಿ ನಾವು ಫಾರಿನ್ ಟೂರ್‌ಗೆ ಹೋಗುತ್ತಿಲ್ಲ. ಅಷ್ಟಕ್ಕೂ ನಮ್ಮನ್ನು ಯಾರೂ ಕರೆದೂ ಇಲ್ಲ. ಅವರು ಬಿಡುವು ಮಾಡಿಕೊಂಡು ಹೋಗಿದ್ದಾರೆ ಎಂದರು. ನಾನೂ ಸಹ ಹದಿನೈದು ದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದೆ. ಈಗ ಫಾರಿನ್ ಟೂರ್‌ಗೆ ಹೋಗಿರುವ ಶಾಸಕರೆಲ್ಲರೂ ಸ್ನೇಹಿತರು, ಸಮಾನ ವಯಸ್ಸಿನವರು. ಅವರವರ ಹಣದಲ್ಲಿ ಹೋಗಿದ್ದಾರೆ. ನೂರು ಮಂದಿ ಶಾಸಕರೇನು ಹೋಗಿಲ್ಲ. ಅವರ್‍ಯಾರೋ 15 ಶಾಸಕರು ಹೋಗಿದ್ದಾರೆ ಅಷ್ಟೇ ಎಂದರು.

ಕೈ’ ಶಾಸಕರ ವಿದೇಶ ಪ್ರವಾಸ ಅನುಮಾನ ಮೂಡಿಸಿದೆ: ಟೆಂಗಿನಕಾಯಿ

ಹುಬ್ಬಳ್ಳಿ: \Bಕಾಂಗ್ರೆಸ್ ಶಾಸಕರು ಸ್ವಂತ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ತೆರಳಿದ್ದರೂ ಪ್ರವಾಸದ ಉದ್ದೇಶ ಮಾತ್ರ ಅನುಮಾನ ಮೂಡಿಸುವಂತಿದೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಆದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ನಡುವೆ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆದಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಬಣ ಬಡಿದಾಟ ಏರ್ಪಟ್ಟಿದೆ. ಈಗ ಶಾಸಕರು, ಸಚಿವರು ಸ್ವಂತ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ಹೋಗಿರಬಹುದು. ಆದರೆ, ಏಕಾಏಕಿ ಇಷ್ಟೊಂದು ಜನ ವಿದೇಶ ಪ್ರವಾಸಕ್ಕೆ ಹೋಗಿರುವುದು ಆಶ್ಚರ್ಯ ತಂದಿದೆ. ಅನುಮಾನ ಕೂಡ ಮೂಡಿಸಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೈದಿಗಳಿಗೆ ಇನ್ನು ಜೈಲಿನಲ್ಲಿ ಡ್ರಗ್ಸ್‌ ಪರೀಕ್ಷೆ ಕಡ್ಡಾಯ, ಒಂದು ವಾರದಲ್ಲಿ ಅನುಷ್ಠಾನ:ಡಿಜಿಪಿ ಅಲೋಕ್‌ ಕುಮಾರ್
Karnataka News Live: Karnataka Congress MLAs foreign tour - 'ನಮ್ಮನ್ನು ಯಾರೂ ಕರೆದಿಲ್ಲ, ಅವರದ್ದೇ ಒಂದು ಟೀಂ, ಮಜಾ ಮಾಡಿಕೊಂಡು ಬರ್ಲಿ ಬಿಡಿ ಎಂದ ಮಾಗಡಿ ಶಾಸಕ!