
ಬೆಂಗಳೂರು(ಜೂ.18): ರಾಜ್ಯದ 8ನೇ ವಂದೇ ಭಾರತ್ ರೈಲು ಸೋಮವಾರ ಮದುರೈ- ಸರ್‌ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಮೊದಲ ಪ್ರಾಯೋಗಿಕ ಸಂಚಾರ ನಡೆಸಿತು. ಸೋಮವಾರ ಬೆಳಗ್ಗೆ 5.15ಕ್ಕೆ ಮಧುರೈ ನಿಲ್ದಾಣದಿಂದ ಹೊರಟು ಬೆಂಗಳೂರನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿ ಪುನಃ ತೆರಳಿತು.
ಎರಡು ನಗರಗಳನ್ನು ಸರಿ ಸುಮಾರು 6 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ರೈಲಿನ ವೇಗ, ನಿಲುಗಡೆ ನಿಲ್ದಾಣ ನಿಗದಿ ಬಳಿಕ ರೈಲಿನ ವೇಳಾಪಟ್ಟಿ, ದರವನ್ನು ಪ್ರಕಟಿಸಿ, ವಾಣಿಜ್ಯ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ. ಪ್ರಾಥಮಿಕ ಮಾಹಿತಿಯಂತೆ ರೈಲು ದಿಂಡಿಗಲ್, ಕರೂರ್, ಸೇಲಂ, ಧರ್ಮಪುರಿ ಹೊಸೂರು ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ.
ವಂದೇ ಭಾರತ್ ರೈಲಿನಲ್ಲಿ ಸ್ಮೋಕ್ ಸೆನ್ಸಾರ್, ಸಿಗರೇಟ್ ಸೇದಿದ್ರೆ ಹೊಡಕೊಳ್ಳುತ್ತೆ ಅಲಾರಂ, ಬೀಳುತ್ತೆ ಫೈನ್!
ವಿಸ್ತರಣೆಗೆ ಒತ್ತಾಯ
ಮಧುರೈ-ವಿಶ್ವೇಶ್ವರಯ್ಯ ಟರ್ಮಿನಲ್ ರೈಲಿನಿಂದ ರಾಜ್ಯದವರಿಗೆ ಹೆಚ್ಚು ಪ್ರಯೋಜನ ಆಗಲಾರದು. ಧಾರ್ಮಿಕ ಯಾತ್ರಾ ಕ್ಷೇತ್ರ ಮಧುರೈ, ತಮಿಳುನಾಡಿಗೆ ಹೋಗುವವರಿಗೆ ಅನುಕೂಲ. ಕೃಷ್ಣರಾಜಪುರ, ಬಂಗಾರಪೇಟೆಯಲ್ಲಿ ನಿಲುಗಡೆ ಆದಲ್ಲಿ ಬೆಂಗಳೂರು, ಕೋಲಾರದವರಿಗೆ ಪ್ರಯೋಜನ ಆಗುತ್ತದೆ. ಜೊತೆಗೆ ಎಸ್‌ಎಂವಿಟಿ ಬದಲು ಕೆಎಸ್‌ಆರ್, ಯಶವಂತಪುರ ಅಥವಾ ಕಂಟೋನ್ವೆಂಟ್ ರೈಲ್ವೆ ನಿಲ್ದಾಣದವರೆಗೆ ತಂದಲ್ಲಿ ಒಂದಿಷ್ಟು ಅನುಕೂಲ ಆಗಲಿದೆ ಎಂದು ರೈಲ್ವೆ ಸಾರಿಗೆ ತಜ್ಞ ಕೃಷ್ಣಪ್ರಸಾದ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ