Latest Videos

ಪಿಎಂ ಮೋದಿ ಜೊತೆ ಸಂವಾದಕ್ಕೆ ಕರ್ನಾಟಕದ ಇಬ್ಬರು ಕೃಷಿ ಸಖಿ ಆಯ್ಕೆ

By Kannadaprabha NewsFirst Published Jun 18, 2024, 7:09 AM IST
Highlights

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮೋತಕಪಲ್ಲಿ ಮೂಲದ ಕೃಷಿ ಸಖಿ ಅನುಷಾ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಜಂಬೇಸಾಲ ಗ್ರಾಮದ ಲತಾ ರಾಜೀವ ಹೆಗಡೆ ಆಯ್ಕೆಯಾದವರು. 

ಕಲಬುರಗಿ/ಯಲ್ಲಾಪುರ(ಜೂ.18):  ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನೈಸರ್ಗಿಕ ಕೃಷಿ ತರಬೇತಿ ಪಡೆದಿರುವ ಕೃಷಿ ಸಖಿಯರೊಂದಿಗೆ ಸಂವಾದ ನಡೆಸಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಇಬ್ಬರು ಕೃಷಿ ಸಖಿಯರು ಪಾಲ್ಗೊಳ್ಳಲಿದ್ದಾರೆ. 

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮೋತಕಪಲ್ಲಿ ಮೂಲದ ಕೃಷಿ ಸಖಿ ಅನುಷಾ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಜಂಬೇಸಾಲ ಗ್ರಾಮದ ಲತಾ ರಾಜೀವ ಹೆಗಡೆ ಆಯ್ಕೆಯಾದವರು. 

ಕಲಬುರಗಿ: ಸೇಡಂನಲ್ಲಿ ಭಾರೀ ಮಳೆ, ಪೊಲೀಸ್‌ ಠಾಣೆಗೆ ಮಳೆ ನೀರು ದಿಗ್ಬಂಧನ..!

ಲತಾ ಅವರು ತಮ್ಮ ಪತಿಯೊಂದಿಗೆ ನೈಸರ್ಗಿಕ ಪುಷ್ಪಕೃಷಿ, ಪಶು ಆಹಾರ ತಯಾರಿಕೆ, ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ.

click me!