Latest Videos

ಕರ್ನಾಟಕದಲ್ಲಿ 30 ವರ್ಷದಿಂದ ಬಾಕಿ ಉಳಿದ 9 ರೈಲ್ವೆ ಯೋಜನೆಗಳು 2 ವರ್ಷದಲ್ಲಿ ಪೂರ್ಣ: ಕೇಂದ್ರ ಸಚಿವ ಸೋಮಣ್ಣ

By Kannadaprabha NewsFirst Published Jun 18, 2024, 6:57 AM IST
Highlights

ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ 1264 4.2. ಒಳಗೊಂಡಒಂಬತ್ತು ರೈಲ್ವೇ ಯೋಜನೆ ಕಾಮಗಾರಿಗೆ ಚುರುಕು ನೀಡಿ 2025- 2026ರ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ

ಬೆಂಗಳೂರು(ಜೂ.18):  ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ 1264 4.2. ಒಳಗೊಂಡಒಂಬತ್ತು ರೈಲ್ವೇ ಯೋಜನೆ ಕಾಮಗಾರಿಗೆ ಚುರುಕು ನೀಡಿ 2025- 2026ರ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಮವಾರ ಮೊದಲ ಬಾರಿಗೆ ನೈಋತ್ಯ ರೈಲ್ವೇ ಅಧಿಕಾರಿಗಳ ಜತೆಗೆ ರಾಜ್ಯದ ರೈಲ್ವೇ ಸ್ಥಿತಿಗತಿ ಕುರಿತು ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಮುಖ್ಯವಾಗಿ 1995ರಿಂದಲೂ ಬಾಕಿ ಇರುವ ರೈಲ್ವೇ ಯೋಜನೆಗಳ ಕುರಿತು ಅಧಿಕಾರಿಗಳಿಂದ ವಿವರ ಪಡೆದರು.

ಮಾನ್ಸೂನ್‌ ಎಫೆಕ್ಟ್‌, ಕೊಂಕಣ್‌ ಲೈನ್‌ನಲ್ಲಿ ಪ್ರಯಾಣಿಸಲಿರುವ ರೈಲುಗಳ ವೇಳಾಪಟ್ಟಿ ಬದಲು!

ಯಾವ್ಯಾವ ಯೋಜನೆಗೆ ಎರಡು ವರ್ಷ ಟಾರ್ಗೆಟ್?

1 ತುಮಕೂರು- ಕಲ್ಯಾಣದುರ್ಗ ಮೂಲಕ ರಾಯದುರ್ಗ
2 ತುಮಕೂರು ಚಿತ್ರದುರ್ಗ- ದಾವಣಗೆರೆ
3 ಗಿಣಿಗೇರಾ- ರಾಯಚೂರು
4 ಬಾಗಲಕೋಟ- ಕುಡಚಿ
5 ಗದಗ-ವಾಡಿ
6 ಕಡೂರು- ಚಿಕ್ಕಮಗಳೂರು
7 ಶಿವಮೊಗ್ಗ - ಶಿಕಾರಿಪುರ - ರಾಣೆಬೆನ್ನೂರು
8 ಬೆಳಗಾವಿ- ಕಿತ್ತೂರು ಮಾರ್ಗವಾಗಿ ಧಾರವಾಡ
 9 ಹಾಸನ ಬೇಲೂರು

ಉಪನಗರ ರೈಲ್ವೆಗೆ ತಜ್ಞರ ನೇಮಕ

ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕಾಮ ಗಾರಿ ಚುರುಕಾಗಬೇಕು. ಇದಕ್ಕಾಗಿ ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆ-ರೈಡ್) ಮುಂದಿನ ಹದಿನೈದು ದಿನಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನ ತಾಂತ್ರಿಕ ತಜ್ಞರ ನೇಮಕಾತಿಗೆ ಕ್ರಮ ವಹಿಸಲಿದ್ದೇವೆ. ಕೆ-ರೈಡ್ ಸೇರಿದಂತೆ ವಿವಿಧ ಭಾಗಿದಾರರ ನಡುವಿನ ಸಹಯೋಗದೊಂದಿಗೆ ಈ ಯೋಜನೆ ಪೂರ್ಣಗೊಳಿಸಲು ಕ್ರಮವಹಿಸ ಲಾಗುವುದು ಎಂದು ಇದೇ ವೇಳೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದರು.

click me!