ಕಾಂಗ್ರೆಸ್ಸಿಗರಿಂದ ಅಲ್ಪಸಂಖ್ಯಾತರ ಓಲೈಕೆ: ರೇಣುಕಾಚಾರ್ಯ

Published : Mar 26, 2022, 11:57 PM IST
ಕಾಂಗ್ರೆಸ್ಸಿಗರಿಂದ ಅಲ್ಪಸಂಖ್ಯಾತರ ಓಲೈಕೆ: ರೇಣುಕಾಚಾರ್ಯ

ಸಾರಾಂಶ

ಹಿಜಾಬ್‌ ಇದೀಗ ಮುಗಿದ ಆಧ್ಯಾಯ ಆದರೂ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಜಾಬ್‌ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

ಹೊನ್ನಾಳಿ (ಮಾ.26): ಹಿಜಾಬ್‌ (Hijab) ಇದೀಗ ಮುಗಿದ ಆಧ್ಯಾಯ ಆದರೂ ಕಾಂಗ್ರೆಸ್ ನಾಯಕರು (Congress Leader) ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಜಾಬ್‌ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ಹೇಳಿದರು. 

ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಜಾಬ್‌ ಸೇರಿದಂತೆ ಕೇಸರಿ ಶಾಲು ಹಾಗೂ ಇತರ ಧರ್ಮಗಳನ್ನು ಪ್ರತಿಬಿಂಬಿಸುವ ವಸ್ತ್ರಗಳನ್ನು ಧರಿಸಬಾರದು ಎಂದು ನ್ಯಾಯಾಲಯ ಸ್ಪಷ್ಟವಾದ ಆದೇಶ ನೀಡಿದೆ. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ಕೆಲ ವಿದ್ಯಾರ್ಥಿನಿಯರ ವಾದವನ್ನೂ ಸುಪ್ರೀಂ ಕೋರ್ಟ್‌ ಪುಷ್ಠಿಕರಿಸಿಲ್ಲ, ಆದ್ದರಿಂದ ಹಿಜಾಬ್‌ ವಿವಾದ ಈಗ ಮುಗಿದ ಅಧ್ಯಾಯ ಎಂದರು.

ಮದರಸಾ ನಿಷೇಧಿಸಲು ಒತ್ತಾಯ: ನಮ್ಮ ರಾಜ್ಯದಲ್ಲಿ ಮದರಸಾಗಳ ಅಗತ್ಯ ಇಲ್ಲ. ಮದರಸಾಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಮಕ್ಕಳ ಮನಸ್ಸನ್ನು ಕೆಡಿಸಲಾಗುತ್ತದೆ. ಆದ್ದರಿಂದ, ನಮ್ಮ ರಾಜ್ಯದಲ್ಲಿನ ಮದರಸಾಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಮದರಸಾ ನಿಷೇಧಿಸಲು ಆಗದಿದ್ದರೆ ಶಾಲಾ-ಕಾಲೇಜುಗಳಲ್ಲಿ ಸಿಗುವಂತೆ ಸಾರ್ವತ್ರಿಕ ಶಿಕ್ಷಣ ನೀಡಬೇಕು. ನಮ್ಮ ಮಠ-ಮಂದಿರಗಳಿಗೆ ಎಲ್ಲರಿಗೂ ಮುಕ್ತವಾಗಿ ಪ್ರವೇಶಾವಕಾಶ ನೀಡಲಾಗಿದೆ. ಅದೇ ರೀತಿ ನಿಮ್ಮ ಮಸೀದಿಗಳನ್ನೂ ಜನರ ಪ್ರವೇಶಕ್ಕೆ ಮುಕ್ತಗೊಳಿಸಬೇಕು ಎಂದು ತಿಳಿಸಿದರು. 

ಬಿಜೆಪಿ ಶಾಸಕ ರೇಣುಕಾಚಾರ್ಯ 'ಎಸ್‌ಸಿ' ರಹಸ್ಯ ಬಯಲು, ದಾಖಲೆ ರಿಲೀಸ್

ಜಿ.ಪಂ ಮಾಜಿ ಉಪಾಧ್ಯಕ್ಷ ಸಿ.ಸುರೇಂದ್ರನಾಯ್ಕ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಕುಳಗಟ್ಟೆಕೆ.ಎಲ್‌.ರಂಗನಾಥ್‌, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಜಿ.ಬಿ.ಮಾರುತಿನಾಯ್ಕ, ಮುಖಂಡರಾದ ನೆಲಹೊನ್ನೆ ಎನ್‌.ಎಸ್‌. ಮಂಜುನಾಥ್‌, ಅರಕೆರೆ ಎ.ಎಂ. ನಾಗರಾಜ್‌, ಎಚ್‌. ಅಜ್ಜಯ್ಯ, ಜುಂಜಾನಾಯ್ಕ, ಚನ್ನಾನಾಯ್ಕ, ಮಂಜುನಾಥ್‌, ಬಿ.ಎನ್‌. ಉಮೇಶ್‌ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಮದರಸಗಳಲ್ಲಿ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ಹೈ ಕೋರ್ಟ್ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಹಿಜಾಬ್ ಎಳೆದು ತಂದಿದ್ದು ಬಿಜೆಪಿ ಅಲ್ಲ ಅದನ್ನು  ಎಳೆದು ತಂದಿದ್ದು ಪಿಎಪ್ ಐ, ಎಸ್ ಡಿಪಿಐ ಸಂಘಟನೆಗಳು ಎಂದು ಹೊನ್ನಾಳಿ  ಶಾಸಕ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ನಾನು ಯಾವುದೇ ನಕಲಿ ಪ್ರಮಾಣ ಪತ್ರ ‌ಪಡೆದಿಲ್ಲಾ, ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಪ್ರತಿಪಕ್ಷ ನಾಯಕರಾದ ಸಿದ್ಧರಾಮಯ್ಯನವರ ಬಗ್ಗೆ ಆಪಾರ ಗೌರವವಿದೆ ಅವರು ಹೇಳಿದಂತೆ ಹಿಜಾಬ್ ಗೆ ಕಾರಣ ನಾವಲ್ಲ.  ಹಿಜಾಬ್ ಸೃಷ್ಟಿ ಮಾಡಿದ್ದು ನಾವಲ್ಲ ಕೆಲ ದೇಶದ್ರೋಹಿ ಸಂಘಟನೆಗಳು ಯುಟಿ ಖಾದರ್, ಜಮೀರ್ ಅಹಮದ್ ಅಂತವರು ಹಿಜಾಬ್ ಎಳೆದು ತಂದರು. ಅದನ್ನು ಸದನಕ್ಕೆ ಎಳೆದು ತಂದಿದ್ದು ರಾಜಕೀಯವಾಗಿ ಬಳಕೆಮಾಡಿಕೊಂಡಿದ್ದು ಕಾಂಗ್ರೆಸ್ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.  

ಹಿಜಾಬ್ ತೀರ್ಪು: 'ಕಪಾಳಮೋಕ್ಷ' ಎಂದ ರೇಣುಕಾಚಾರ್ಯಗೆ ತಿವಿದ ಸಿದ್ದರಾಮಯ್ಯ!

ಹಿಜಾಬ್ ಈಗ ಮುಗಿದ ಅಧ್ಯಾಯ, ಈ ನೆಲೆದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಆದ್ರೆ  ಕೆಲ ದೇಶ ದ್ರೋಹಿ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ಕೊಟ್ಟವು, ಪ್ರತಿಭಟನೆ ಮಾಡಿದವು. ಇದನ್ನೇನು ಪಾಕಿಸ್ತಾನ್, ಬಾಂಗ್ಲಾ ಮಾಡಿಕೊಂಡಿದ್ದೀರಾ?  ಅದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ. ಹಿಜಾಬ್ ನ್ನು ಬಹಿಷ್ಕಾರ ಮಾಡಿ ಎಂದು ನಾವು ಎಲ್ಲೂ ಹೇಳಿಲ್ಲ. ಸದನದಲ್ಲಿ ಅದರ ಪರವಾಗಿ ಧ್ವನಿ ಎತ್ತಿದವರು ಕಾಂಗ್ರೆಸ್ಸಿಗರು ಹಿಜಾಬ್ ಅನ್ನು ಕಾಂಗ್ರೆಸ್ಸಿಗರು ಸೃಷ್ಟಿ ಮಾಡಿದ್ದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಸ್ಪಂದನಾ ಸೋಮಣ್ಣ ಮುಂದೆ ರಜತ್‌ ಅಸಭ್ಯ ವರ್ತನೆ ಮಾಡಿದ್ರು - ಧ್ರುವಂತ್‌ ವಿರುದ್ಧ ರಜತ್‌ ಆರೋಪ