ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿ: ಸಿಎಂ ಬೊಮ್ಮಾಯಿ

Published : Mar 26, 2022, 10:40 PM IST
ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿ: ಸಿಎಂ ಬೊಮ್ಮಾಯಿ

ಸಾರಾಂಶ

* ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಸಹಾಯ  * ಹುಬ್ಬಳ್ಳಿ ಎಫ್.ಎಂ.ಜಿ.ಸಿ. ಕ್ಲಸ್ಟರ್ ಸ್ಥಾಪನೆ ವಿಶೇಷ ಪ್ರೋತ್ಸಾಹ * ಆಮ್ ಇವನಿಂಗ್ ವಿತ್ ಲೆಜೆಂಡ್ಸ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ- ಕ್ರಿಕೆಟರ್ ಕಪಿಲ್ ದೇವ್ ಭಾಗಿ 

ವರದಿ: ಗುರುರಾಜ ಹೂಗಾರ, ಹುಬ್ಬಳ್ಳಿ

ಹುಬ್ಬಳ್ಳಿ (ಮಾ.26): ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ಕೈಗಾರಿಕೆ ಹಾಗೂ ಉದ್ದಿಮೆ ಸ್ಥಾಪನೆ ಮಾಡಲು ಹೆಚ್ಚಿನ ಸವಲತ್ತು ಹಾಗೂ ಸಹಾಯಧನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಎಫ್.ಎಂ.ಸಿಜಿ ಕ್ಲಸ್ಟರ್ (FMCG Cluster) ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ನೀಡಿದ್ದು. ಒಂದು ಲಕ್ಷ ಉದ್ಯೋಗ (One Lakh Employment) ಅವಕಾಶಗಳು ಸೃಷ್ಠಿಯಾಗಲಿವೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

ಹುಬ್ಬಳ್ಳಿ ನವೀನ್ ಹೋಟೆಲ್‌ನಲ್ಲಿ 'ಟೈ (TIE Hubli) ಯುವ ಉದ್ದಿಮೆದಾರರ ಸಮಾವೇಶದಲ್ಲಿ ಆಯೋಜಿಸಲಾಗಿದ್ದ "ಆನ್ ಇವನಿಂಗ್ ವಿಥ್ ಲೆಜೆಂಡ್' (On Evening With Legends) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಿಯಾಂಡ್ ಬೆಂಗಳೂರು ಆಲೋಚನೆಗೆ ಒತ್ತು ನೀಡಿದ್ದು, ಬೆಂಗಳೂರು ಹೊರತಾಗಿ ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸಿ, ರಿಯಾಯಿತಿಗಳನ್ನು ಸಹ ನೀಡಲಾಗಿದೆ. ಚೆನ್ನೈ ಬೆಂಗಳೂರು ಹಾಗೂ ಚಿತ್ರದುರ್ಗ ಹಾಗೂ ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕೈಗಾರಿಕಾ ಟೌನ್‌ಶಿಪ್ (industrial Township) ನಿರ್ಮಿಸಲಾಗುವುದು ಎಂದರು.

ಸಿಎಂ ಬಸವರಾಜ್‌ ಬೊಮ್ಮಾಯಿ ಟ್ವೀಟರ್‌ ಖಾತೆ ಹ್ಯಾಕ್?‌

ಟೈ ಉತ್ತಮ ಕೆಲಸ ಮಾಡುತ್ತಿದೆ. ಯುವ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತದೆ. ಯುವಜನರು ಭವಿಷ್ಯದ ಬಗ್ಗೆ ಆಶಾದಾಯಕಾಗಿರಬೇಕು. ಆತ್ಮ ಸ್ಥೈರ್ಯ ಹೊಂದಬೇಕು. ಉದ್ದಿಮೆ ಸ್ಥಾಪಿಸಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕು. ವೈಯಕ್ತಿಕವಾಗಿ ಭಗವದ್ಗೀತೆಯನ್ನು ನಾನು ಓದುತ್ತೇನೆ. ನಮ್ಮ ಜೀವನದ ಎಲ್ಲಾ ಪ್ರಶ್ನೆಗಳಿಗೆ ಭಗವದ್ಗೀತೆ ಉತ್ತರ ನೀಡುತ್ತದೆ. ಅನುಭವ ಎಲ್ಲದಕ್ಕಿಂತ ದೊಡ್ಡದು. ನಮ್ಮ ಪ್ರಜ್ಞೆಗೆ ವಿರುದ್ಧ ಕೆಲಸ ಮಾಡಬಾರದು. ಪ್ರತಿ ಕೆಲಸ ಮಾಡುವಾಗ ಅಂತಃಸಾಕ್ಷಿ ಮಾತನ್ನು ಕೇಳಿ. ವಿಮರ್ಶೆ ಹಾಗೂ ವಿರೋಧಗಳಿಗೆ ಹೆದರದಿರಿ ಎಂದು ಯುವ ಉದ್ದಿಮೆದಾರರಿಗೆ ಕಿವಿಮಾತು( Advise) ಹೇಳಿದರು.

ರಾಜಕೀಯಕ್ಕೆ ದೇಶ ಜನರ ಜೀವನದಲ್ಲಿ ಬದಲಾವಣೆ ತರುವ ಶಕ್ತಿಯಿದೆ. ಇಚ್ಛಾಶಕ್ತಿ ಉಳ್ಳನಾಯಕರು‌ ಉತ್ತಮ ಬದಲಾವಣೆ ತರಬಲ್ಲರು. ಪ್ರತಿಯೊಬ್ಬರು ನಾಯತ್ವದ ಗುಣ ಬೆಳೆಸಿಕೊಳ್ಳಬೇಕು. ರಾಜಕೀಯಕ್ಕೆ ರಂಗಮುಕ್ತ ಅವಕಾಶಗಳಿವೆ. ಯಾವುದೇ ನಿರ್ಬಂಧಗಳಿಲ್ಲ. ಕಪಿಲ್‌ದೇವ್ ವಿಶ್ವಕಪ್ ಗೆಲ್ಲುವುದರ ಮೂಲಕ ದೇಶದ ಜನರ ಮನಗಳನ್ನು ಗೆದ್ದರು. ಹುಬ್ಬಳ್ಳಿಯ ಉದ್ದಿಮೆದಾರರು ಸಣ್ಣನಗರದ ಮನಸ್ಥಿತಿಯನ್ನು ತೊರೆದು, ಮುಕ್ತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕು. ಹೊಸರೀತಿ ಉದ್ದಿಮೆ ಹಾಗೂ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇಂದು ವಿಶ್ವವೇ ಒಂದು ಹಳ್ಳಿಯಾಗಿದೆ. 

ಶಾದಿ ಮಹಲ್‌ ಬಿಟ್ಟು ಅಲ್ಪಸಂಖ್ಯಾತರ ಬೇರೆ ಸ್ಕೀಂ ರದ್ದಿಲ್ಲ: ಸಿಎಂ ಬೊಮ್ಮಾಯಿ

ವ್ಯಾಪಾರಸ್ಥರು ವಾರದ ಮಧ್ಯದಿನವಾದ ಬುಧವಾರದಂದು ತಮ್ಮ ವ್ಯಾಪಾರ ವಹಿವಾಟುಗಳಿಗೆ ರಜೆ ಘೋಷಿಸುತ್ತಾರೆ. ಇದರಿಂದ ಹಲವು ಕೈಗಾರಿಕೆಗಳಲ್ಲಿ ನಷ್ಟ ಉಂಟಾಗುತ್ತದೆ. ಇದು ಸಂಪ್ರದಾಯ ತಪ್ಪಬೇಕು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ದೇವ್,ಹುಬ್ಬಳ್ಳಿ ಕೆ.ಎಲ್.ಇ. ಸಂಸ್ಥೆಯ ಶಂಕರಣ್ಣ ಮುನವಳ್ಳಿ, ಹುಬ್ಬಳ್ಳಿ ಟೈ ಪ್ರೆಸಿಡೆಂಟ್ ವಿಜೇಶ್ ಸೈಗಲ್, ಇಸ್ಕಾನ್ ಸಂಸ್ಥೆಯ ಗೋವರ್ಧನ್ ಪ್ರಭುದಾಸ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು