ಮಡಿಕೇರಿ ದಸರಾ ಅವೈಜ್ಞಾನಿಕ ಮಂಟಪಗಳಿಂದ ತೀವ್ರ ಸಮಸ್ಯೆ : ಕೊಡಗು ಎಸ್ಪಿ ಕೆ. ರಾಮರಾಜನ್

By Ravi Janekal  |  First Published Nov 5, 2023, 5:11 PM IST

ಮೈಸೂರು ದಸರಾಕ್ಕಿಂತ ವಿಭಿನ್ನವಾಗಿ ನಡೆಯುವ ಮಡಿಕೇರಿ ದರಸಾದಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾದ ಅಗತ್ಯವಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ನ.5) : ಮಡಿಕೇರಿ ದಸರಾ ಜನೋತ್ಸವದಲ್ಲಿ ಡಿಜೆ ಬಳಸುವುದಕ್ಕೆ ತಡೆಯೊಡ್ಡಬೇಕು ಎಂದು ಹೈಕೋರ್ಟ್ ವಕೀಲ ಅಮೃತೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸ್ವತಃ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ರಾಜರ ಕಾಲದಿಂದಲೂ ನಡೆಯುವ ಮಡಿಕೇರಿ ದಸರಾ ತುಂಬಾ ವಿಶೇಷವಾಗಿದೆ. ದಸರಾದಲ್ಲಿ ಪೌರಾಣಿಕ ಕಥೆಗಳನ್ನು ಪ್ರಸ್ತುತ ಪಡಿಸುವುದು ಕೂಡ ತುಂಬಾ ಚೆನ್ನಾಗಿದೆ. ಮೈಸೂರಿನಲ್ಲಿ ಜಂಬೂಸವಾರಿ ಪೊಲೀಸ್ ಕವಾಯಿತು ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳು ಇರುತ್ತವೆ. ಹಾಗೆಯೇ ಮಡಿಕೇರಿ ದಸರಾದಲ್ಲಿ ವಿಶೇಷವಾಗಿ ಪೌರಾಣಿಕ ಮಂಟಪಗಳನ್ನು ಪ್ರದರ್ಶಿಸಲಾಗುತ್ತದೆ. ಆದರೆ ದಶಮಂಟಪ ಶೋಭಾಯಾತ್ರೆಯಂದು ಅವೈಜ್ನಾನಿಕವಾಗಿ ಮಂಟಪಗಳ ರಚಿಸುವುದು, ಡಿಜೆ ಸೌಂಡ್ ಬಳಸುವುದು ಸೇರಿದಂತೆ ಕೆಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Latest Videos

undefined

ನಾನು ಕಂಡಂತೆ ಮಡಿಕೇರಿ ದಸರಾ(Madikeri dasara) ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್(K Ramarajan IPS) ಅವರು ಮಂಟಪಗಳನ್ನು ವಿಶಾಲವಾದ ಒಂದು ಮೈದಾನದಲ್ಲಿ ಮಾಡುವುದರಿಂದ ಎಲ್ಲಾ ಮಂಟಪಗಳನ್ನು ಎಲ್ಲರೂ ನೋಡಲು ಅವಕಾಶವಿದೆ. ಆದರೆ ಇಲ್ಲಿ ರಸ್ತೆಗಳಲ್ಲಿ ಮಂಟಪಗಳ ಪ್ರದರ್ಶನ ಮಾಡುತ್ತಿರುವುದರಿಂದ ಕಿರಿದಾದ ಮಡಿಕೇರಿ ರಸ್ತೆಗಳಲ್ಲಿ ಸಾಮಾನ್ಯ ಜನರು ತಮ್ಮ ಕುಟುಂಬಗಳೊಂದಿಗೆ ಅಥವಾ ವಯಸ್ಸಾದ ತಂದೆ ತಾಯಿ ಮಕ್ಕಳೊಂದಿಗೆ ಮಂಟಪಗಳ ಪ್ರದರ್ಶನ ನೋಡಲು ಸಾಧ್ಯವಾಗುತ್ತಿಲ್ಲ. ಶಕ್ತಿ ಇದ್ದವರು ಮಾತ್ರವೇ ನುಗ್ಗಿ ನೋಡುತ್ತಿದ್ದಾರೆ. ಅವರೂ ಕೂಡ ಒಂದೆರಡು ಮಂಟಪಗಳ ನೋಡಿದರೆ ಅಲ್ಲಿಗೆ ಮುಗಿಯಿತು. ಮೂರನೇ ಮಂಟಪ ನೋಡಲು ಅವಕಾಶವಿಲ್ಲದಂತೆ ಆಗುತ್ತಿದೆ. ಎಲ್ಲಾ ಮಂಟಪಗಳು ಪ್ರಸ್ತುತ ಪಡಿಸುವ ಪ್ರದರ್ಶನಗಳನ್ನು ನೋಡಬೇಕು ಎಂದು ಸ್ವತಃ ನಾನೇ ತುಂಬಾ ಕಾತರನಾಗಿದ್ದೆ. ಆದರೆ ಎರಡು ಮಂಟಪಗಳನ್ನು ನೋಡುವುದಕ್ಕೆ ಅಷ್ಟೇ ಸಾಧ್ಯ ಆಗಿದ್ದು. ಮೂರನೇ ಮಂಟಪದತ್ತ ಹೋಗಲು ಸಾಧ್ಯವಾಗಲಿಲ್ಲ. ಇನ್ನು ರಸ್ತೆಗಳಿಗಿಂತ ಅಲಗವಾದ ಮಂಟಪಗಳನ್ನು ನಿರ್ಮಿಸುತ್ತಿರುವುದರಿಂದ ಈ ಬಾರಿ ಒಂದು ಮಂಟಪ ಕೂಡ ಬಿದ್ದು ಒಬ್ಬರ ಕಾಲು ಮುರಿತವಾಯಿತು. ಒಬ್ಬ ಯುವಕ, ಒಂದು ಮಗು ಉಸಿರುಗಟ್ಟಿ ಪ್ರಜ್ನೆ ತಪ್ಪಿದರು. ಅವರನ್ನು ಆಸ್ಪತ್ರೆಗೆ ಸೇರಿಸುವುದು ಕಷ್ಟಕರವಾಯಿತು ಎಂದಿದ್ದಾರೆ. 

ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ದಲಿತ ಸಿಎಂ ಕೂಗು ಎಬ್ಬಿಸಿದ ವಾಲ್ಮೀಕಿ ಗುರುಪೀಠ ಪ್ರಸನ್ನಾನಂದ ಸ್ವಾಮೀಜಿ!

ಮಡಿಕೇರಿ ದಸರಾಕ್ಕೆ ಒಂದುವರೆ ಲಕ್ಷಕ್ಕೂ ಹೆಚ್ಚು ಜನರು ಬರುತ್ತಾರೆ. ಅವರಿಗೆಲ್ಲಾ ಒಂದೆಡೆ ನಿಂತು ನೋಡುವುದಕ್ಕೆ, ಅಥವಾ ಅವರೆಲ್ಲರೂ ಎಲ್ಲಡೆ ಸುತ್ತಾಡಿ ಎಲ್ಲಾ ಮಂಟಪಗಳನ್ನು ನೋಡಲು ಸಾಧ್ಯಗುತ್ತಿಲ್ಲ. ಹೀಗಾಗಿ ಬರುವ ಪ್ರವಾಸಿಗರು ಕೂಡ ಬೇಸರದಲ್ಲಿ ವಾಪಸ್ ಆದರು. ಇನ್ನು ದಸರಾ ಸಂದರ್ಭದಲ್ಲಿ ಕೆಲವು ಆಸ್ಪತ್ರೆಗಳಿಂದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಕೆಲವರು ದಸರಾದಲ್ಲಿ ಶಬ್ದ ತಾಳಲಾರದೆ ತಮ್ಮ ಮನೆಗಳನ್ನು ಬಿಟ್ಟು ಬೇರೆಡೆಗೆ ತೆರಳಿದ್ದಾರೆ. ಈ ವೇಳೆ ತಮ್ಮ ಮನೆಗೆ ಭದ್ರತೆ ಒದಗಿಸಿ ಎಂದು ನಮ್ಮ ಇಲಾಖೆಗೆ ಮನವಿ ಸಲ್ಲಿಸಿ ಹೋಗುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ದಸರಾ ದಿನದಂದು ಮದ್ಯ ಮಾರಾಟ ನಿಷೇಧಿಸಿದ್ದರೂ ಹೊರಗಿನಿಂದ ಮದ್ಯ ತಂದು ಸೇವಿಸಿ ಹೆಣ್ಣುಮಕ್ಕಳು ನೆಮ್ಮದಿಯಿಂದ ಓಡಾಡಿ ಮಂಟಪಗಳ ನೋಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಇದೆಲ್ಲವೂ ತೀರಾ ಸಮಸ್ಯೆ ತಂದೊಡ್ಡುತ್ತಿವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮೈಸೂರು ದಸರಾಕ್ಕಿಂತ ವಿಭಿನ್ನವಾಗಿ ನಡೆಯುವ ಮಡಿಕೇರಿ ದರಸಾದಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾದ ಅಗತ್ಯವಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.

ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆಗೆ ಚಾಲನೆ ಬಳ್ಳಾರಿ ಜಿಂದಾಲ್ ಏರ್ಪೋರ್ಟ್ ನಿಂದ ಹೊರಟ ವಿಮಾನ

click me!