ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ದಲಿತ ಸಿಎಂ ಕೂಗು ಎಬ್ಬಿಸಿದ ವಾಲ್ಮೀಕಿ ಗುರುಪೀಠ ಪ್ರಸನ್ನಾನಂದ ಸ್ವಾಮೀಜಿ!

By Ravi Janekal  |  First Published Nov 5, 2023, 4:46 PM IST

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ತಾರಕಕ್ಕೇರಿವಾಗಲೇ 'ದಲಿತ ಸಿಎಂ ಯಾಕಾಗಬಾರದು ಎಂದು ಪ್ರಶ್ನಿಸುವ ಮೂಲಕ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ದಲಿತ ಸಿಎಂ ಕೂಗು ಎಬ್ಬಿಸಿದ್ದಾರೆ.


ಬಾಗಲಕೋಟೆ (ನ.5): ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ತಾರಕಕ್ಕೇರಿವಾಗಲೇ 'ದಲಿತ ಸಿಎಂ ಯಾಕಾಗಬಾರದು ಎಂದು ಪ್ರಶ್ನಿಸುವ ಮೂಲಕ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ದಲಿತ ಸಿಎಂ ಕೂಗು ಎಬ್ಬಿಸಿದ್ದಾರೆ.

ಬಾಗಲಕೋಟೆಯಲ್ಲಿ ನೆಡದ ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸ್ವಾಮೀಜಿ, ನಾಡಿನ ಸಿಎಂ ಆಗಲು ಸತೀಶ ಜಾರಕಿಹೊಳಿ ಅವರಿಗೆ ಎಲ್ಲ ರೀತಿಯಲ್ಲೂ ಅರ್ಹರಾಗಿದ್ದಾರೆ.
ಅವರ ಬೆನ್ನಿಗೆ ನಾವೆಲ್ಲಾ ನಿಲ್ಲಬೇಕಿದೆ. ರಾಜ್ಯದಲ್ಲಿ ದಲಿತ ಸಿಎಂ ಯಾಕೆ ಆಗಬಾರದು. ದಲಿತರು ಮತ ಬ್ಯಾಂಕ್ ಮಾತ್ರ ಅಗಿರಬೇಕಾ? ಸಿಎಂ ಹುದ್ದೆ ಕೆಲವರ ಸ್ವತ್ತಾ? ಯಾರಾದ್ರೂ ಗುತ್ತಿಗೆ ಪಡೆದುಕೊಂಡಿದ್ದಾರಾ ದಲಿತರು ಸಿಎಂ ಆಗಲಿ ಎನ್ನುವ ಔದಾರ್ಯ ಹೊಂದಿರದಿದ್ದರೆ ಹೇಗೆ? ಎಂದು ಪ್ರಶ್ನಿಸುವ ಮೂಲಕ ಸತೀಶ ಜಾರಕಿಹೊಳಿ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

Tap to resize

Latest Videos

undefined

 

ತಾವು ತಾವೇ ಹೊಡಿದಾಡಿ ಸಾಯಲಿಕ್ಕತ್ಯಾರ ಇನ್ನ ದಲಿತರನ್ನ ಹೆಂಗ ಸಿಎಂ ಮಾಡ್ತಾರ?: ಕಾಂಗ್ರೆಸ್ ವಿರುದ್ಧ ಸಂಸದ ಜಿಗಜಿಣಗಿ ಕಿಡಿ

ಸಚಿವ ಸತೀಶ ಜಾರಕಿಹೊಳಿ ಸಮ್ಮುಖದಲ್ಲೇ ದಲಿತ ಸಿಎಂ ಪ್ರಸ್ತಾಪ ಮಾಡಿದ ಸ್ವಾಮೀಜಿ ಬಾಗಲಕೋಟೆಯ ನವನಗರದ ಕಲಾಭವನದಲ್ಲಿ ನಡೆದ ಜಿಲ್ಲಾ ವಾಲ್ಮೀಕಿ ಜನ ಜಾಗೃತಿ ಸಮಾವೇಶದಲ್ಲಿ ಪ್ರಸ್ತಾಪ ಮಾಡಿರುವ ಸ್ವಾಮಿಜಿ. ಮುಂದಿನ ಎರಡೂವರೆ ವರ್ಷಗಳ ಬಳಿಕ ಕರ್ನಾಟಕ ಸಿಎಂ ಬದಲಾಗಬೇಕು ಎಂಬ ಚರ್ಚೆ ನಡೆಯುತ್ತಿರುವಾಗಲೇ ಇತ್ತ ದಲಿತ ಸಿಎಂ ಕೂಗು ಎದ್ದಿದೆ. ಇತ್ತ ತುಮಕೂರಿನಲ್ಲಿ ಸಚಿವ ರಾಜಣ್ಣ ಸಹ ದಲಿತರು ಸಿಎಂ ಆಗಬೇಕು ಎಂದಿದ್ದಲ್ಲದೆ ಗೃಹ ಸಚಿವ ಪರಮೇಶ್ವರ ಸಿಎಂ ಆಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಸಹ ಹೈಕಮಾಂಡ್ ಸೂಚಿಸಿದರೆ ನಾನು ಸಿಎಂ ಆಗಲು ಸಿದ್ದ ಎಂದಿದ್ದಾರೆ. 

 

ದಲಿತ ಸಿಎಂ ಬಗ್ಗೆ ಚರ್ಚೆಯೇ ನಡೆದಿಲ್ಲ: ವಿಶೇಷ ಸಂದರ್ಶನದಲ್ಲಿ ಸಚಿವ ಮಹದೇವಪ್ಪ ಹೇಳಿದ್ದೇನು?

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ತಾರಕಕ್ಕೇರಿರುವ ಹಿನ್ನೆಲೆ ಸರ್ಕಾರವನ್ನೇ ಪೇಚಿಗೆ ಸಿಲುಕಿಸಿದೆ ಈ ಹಿನ್ನೆಲೆ ನಿನ್ನೆಯಷ್ಟೇ ಕಾಂಗ್ರೆಸ್ ಶಾಸಕ, ಸಚಿವರ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಡಿಸಿಎಂ ಶಿವಕುಮಾರ. ಕರ್ನಾಟಕ ಸಿಎಂ ಬದಲಾವಣೆ ಕುರಿತಂತೆ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ. ಈ ಹಿನ್ನೆಲೆ ಸಭೆ ಬಳಿಕ ಯಾರೂ ಸಹ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿರಲಿಲ್ಲ ಆದರೆ ಇದೀಗ ಬಾಗಲಕೋಟೆ ವಾಲ್ಮೀಕಿ ಜಾಗೃತಿ ಸಮಾವೇಶದಲ್ಲಿ ಮತ್ತೆ ದಲಿತ ಸಿಎಂ ಕೂಗು ಎದ್ದಿದೆ. 

click me!